• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧಿ, ನುಚ್ಚಕ್ಕಿ ರಫ್ತು ನಿರ್ಬಂಧ ತೆಗೆಯಿರಿ, ದೇಶಿ ಕೃಷಿ ಉತ್ಪಾದನೆಗೆ ಆದ್ಯತೆ ನೀಡಿ: ಕೇಂದ್ರಕ್ಕೆ ರೈತರ ಮನವಿ

|
Google Oneindia Kannada News

ನವದೆಹಲಿ, ನವೆಂಬರ್ 23: ಸರ್ಕಾರ ಗೋಧಿ ರಫ್ತು ಮೇಲಿನ ನಿಷೇಧ ತೆರವುಗೊಳಿಸಬೇಕು. ಎಣ್ಣೆಕಾಳುಗಳು ಸೇರಿದಂತೆ ದೇಶೀಯ ಕೃಷಿ ಉತ್ಪಾದನೆ ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ವಿವಿಧ ರೈತಪರ ಸಂಘಟನೆಗಳು ಮನವಿ ಮಾಡಿಕೊಂಡಿವೆ.

ಮಂಗಳವಾರ ವರ್ಚವಲ್‌ನಲ್ಲಿ ನಡೆದ ಕೇಂದ್ರ ಆಯವ್ಯಯ ಪೂರ್ವ ಸಮಾಲೋಚನೆ ಮೂರನೇ ಸಭೆಯಲ್ಲಿ ರೈತ ಸಂಘಟನೆಗಳ ಮುಖಂಡರು, ಕೃಷಿ ತಜ್ಞರು ಹಾಗೂ ಕೃಷಿ ಸಂಸ್ಕರಣಾ ಉದ್ಯಮದ ಪ್ರತಿನಿಧಿಗಳೊಂದಿಗೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಚರ್ಚಿಸಿದರು.

ಧಾರವಾಡ ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಧಾರವಾಡ ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ವೇಳೆ ಮಾತನಾಡಿದ ರೈತ ಮುಖಂಡರು ಗೋಧಿಯಂತಹ ಕೃಷಿ ಉತ್ಪನ್ನಗಳ ರಫ್ತು ಮೇಲೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಬೇಕು. ಮುಖ್ಯವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗಿಂತ ಕಡಿಮೆ ಬೆಲೆಯ ಉತ್ಪನ್ನಗಳ ಆಮದ ಮಾಡಿಕೊಳ್ಳುವುದನ್ನು ನಿರ್ಬಂಧಿಸಬೇಕು. ಇನ್ನು ಎಣ್ಣೆಕಾಳುಗಳಾದ ಸೋಯಾಬೀನ್, ಸಾಸಿವೆ, ಕಡಲೆಕಾಯಿ ಮತ್ತು ಸೂರ್ಯಕಾಂತಿ ಎಣ್ಣೆಯಂತಹ ದೇಶೀಯ ಉತ್ಪಾದನೆ ಆದ್ಯತೆ ಕೊಡಬೇಕು ಎಂದು ಒತ್ತಾಯಿಸಿದರು.

ಕೃಷಿ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸಿ

ಕೃಷಿ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸಿ

ಭಾರತ್ ಕೃಷಿಕ್ ಸಮಾಜದ ಅಧ್ಯಕ್ಷ ಅಜಯ್ ವೀರ್ ಮಾತನಾಡಿ, 2023-24ರ ಕೇಂದ್ರ ಬಜೆಟ್ ಪಟ್ಟಿಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗಿಂತ ಕೆಳಗಿರುವ ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಬಾರದು. ಕೃಷಿ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು, ನಿರುದ್ಯೋಗಿಗಳನ್ನು ಕೃಷಿ ಕ್ಷೇತ್ರದತ್ತ ಸೆಳೆಯಲು ಕ್ರಮ ವಹಿಸಬೇಕು ಎಂದರು.

ಗೋಧಿ, ನುಚ್ಚಕ್ಕಿ ರಫ್ತುನಿಂದ ರೈತರ ಆದಾಯಕ್ಕೆ ಕುತ್ತು

ಗೋಧಿ, ನುಚ್ಚಕ್ಕಿ ರಫ್ತುನಿಂದ ರೈತರ ಆದಾಯಕ್ಕೆ ಕುತ್ತು

ಭಾರತೀಯ ರೈತ ಸಂಘ ಒಕ್ಕೂಟದ ಅಧ್ಯಕ್ಷ ರಘುನಾಥ್ ದಾದಾ ಪಾಟೀಲ್ ಮಾತನಾಡಿ, ರೈತರು ಹೆಚ್ಚಿನ ಆದಾಯ ಹೊಂದುವ ಜೊತೆಗೆ ಅವರು ಜಾಗತಿಕವಾಗಿ ವ್ಯಾಪಾರದಲ್ಲಿ ತೊಡಗಿಕೊಳ್ಳುವಂತೆ ವಾತಾವರಣ ನಿರ್ಮಿಸಬೇಕು. ಗೋಧಿ ಮತ್ತು ನುಚ್ಚಕ್ಕಿ ಇತರ ಕೃಷಿ ಉತ್ಪನ್ನಗಳ ರಫ್ತಿನ ಮೇಲಿನ ನಿರ್ಬಂಧದ ನಿರ್ಧಾರದಿಂದ ರೈತರ ಆದಾಯಕ್ಕೆ ಹೊಡೆತ ಬಿದ್ದಿದೆ.

ಕೃಷಿ ಉತ್ಪನ್ನಗಳ ರಫ್ತಿಗೆ ಸರ್ಕಾರ ನಿರ್ಬಂಧ ಹೇರಬಾರದು. ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಭಾರತ ಸರ್ಕಾರ ಗೋಧಿ ಮತ್ತು ನುಚ್ಚಕ್ಕಿ ರಫ್ತುಗಳನ್ನು ನಿರ್ಬಂಧಿಸಿದೆ. ಇದರಿಂದಾದ ಪ್ರಯೋಜನ ಕುರಿತು ಅರಿಯಬೇಕು ಎಂದು ವಿವರಿಸಿದರು.

ದೇಶಿಯ ಎಣ್ಣೆ ಉತ್ಪನ್ನಗಳಿಗೆ ಆದ್ಯತೆ ನೀಡಿ

ದೇಶಿಯ ಎಣ್ಣೆ ಉತ್ಪನ್ನಗಳಿಗೆ ಆದ್ಯತೆ ನೀಡಿ

ಸೋಯಾಬೀನ್, ಸೂರ್ಯಕಾಂತಿ ಮತ್ತು ಕಡಲೆಕಾಯಿಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಖಾದ್ಯ ತೈಲಗಳ ಆಮದಿನ ಮೇಲೆ ಭಾರತದ ಅವಲಂಬನೆ ಕಡಿಮೆ ಆಗುತ್ತದೆ ಪಾಟೀಲ್ ಸಲಹೆ ನೀಡಿದರು. ರೈತರ ಸಂಘಟನೆಗಳ ಮುಖಂಡರು ಹಾಗೂ ಉದ್ಯಮಿಗಳ ಸಲಹೆಗಳನ್ನು ವಿತ್ತ ಸಚಿವೆ ಆಲಿಸಿದರು. ಅವರು 2023ರ ಫೆಬ್ರುವರಿ 1ರಂದು ಆಯವ್ಯಯ ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ದೇಶದ ಅನೇಕ ಸಂಘ ಸಂಸ್ಥೆ ಸಭೆಯಲ್ಲಿ ಭಾಗಿ

ದೇಶದ ಅನೇಕ ಸಂಘ ಸಂಸ್ಥೆ ಸಭೆಯಲ್ಲಿ ಭಾಗಿ

ಬಜೆಟ್ ಪೂರ್ವಭಾವಿ ಸಮಾಲೋಚನೆ ಸಭೆಯಲ್ಲಿ ಕೇರಳದ ಅಖಿಲ ಭಾರತ ಮಸಾಲೆ ರಫ್ತುದಾರರ ವೇದಿಕೆಯ ಕಾರ್ಯದರ್ಶಿ ವೀರೇನ್ ಕೆ ಖೋನಾ, ಉತ್ತರಾಖಂಡನ ಗೋವಿಂದ್ ಬಲ್ಲಭ್ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ನಿರ್ದೇಶಕರು ಎ ಎಸ್‌ ನೈನ್, ಹಿಮಾಚಲದ ರಾಜ್ಯ ಹಣ್ಣು ತರಕಾರಿಗಳು ಮತ್ತು ಹೂವುಗಳ ಬೆಳೆಗಾರರ ​​ಸಂಘದ ರಾಜ್ಯಾಧ್ಯಕ್ಷ ಹರೀಶ್ ಚೌಹಾಣ್, ತಮಿಳುನಾಡಿನ ಯುಪಿಎಎಸ್ಐ ಅಧ್ಯಕ್ಷ ಜೆಫ್ರಿ ರೆಬೆಲ್ಲೊ ಮತ್ತಿತರರು ರೈತರು ಅನುಭವಿಸುತ್ತಿರುವ ಕಷ್ಟ ನಷ್ಟಗಳನ್ನು ವಿತ್ತ ಸಚಿವೆ ಗಮನಕ್ಕೆ ತಂದರು.

ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ, ಭಾರತೀಯ ಕಿಸಾನ್ ಸಂಘ ಮತ್ತು ದಕ್ಷಿಣ ಭಾರತೀಯ ಕಬ್ಬು ರೈತರ ಸಂಘ ಹಣ್ಣುಗಳು ಮತ್ತು ತರಕಾರಿಗಳ ಸಂಸ್ಕರಣೆ ಹಾಗೂ ಇಂಟಿಗ್ರೇಟೆಡ್ ಕೋಲ್ಡ್ ಚೈನ್ ಅಸೋಸಿಯೇಷನ್, ಅಸೋಸಿಯೇಟೆಡ್ ಟೀ ಮತ್ತು ಅಗ್ರೋ ಮ್ಯಾನೇಜ್ಮೆಂಟ್ ಸರ್ವಿಸಸ್ (ಅಸ್ಸಾಂ)ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಂಡು ಕೇಂದ್ರಕ್ಕೆ ಕೆಲವು ಸಲಹೆಗಳನ್ನು ನೀಡಿದವು.

ನಿರ್ಮಲಾ ಸೀತಾರಾಮನ್
Know all about
ನಿರ್ಮಲಾ ಸೀತಾರಾಮನ್
English summary
Union Pre Budget Meet, Remove ban on wheat broken rice export give priority local agricultural production, farmers request to Central Government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X