ಬೆಳೆಸಾಲ ಮನ್ನಾ ಪ್ರಯೋಜನ ಪಡೆಯಲು ಪ್ಯಾನ್ ಕಾರ್ಡ್ ಕಡ್ಡಾಯ ಅಲ್ಲ
ಬೆಂಗಳೂರು, ಅ.5: ರಾಜ್ಯ ಸಮ್ಮಿಶ್ರ ಸರ್ಕಾರವು ರೈತರ ಅನುಕೂಲಕ್ಕಾಗಿ ಅವರ ಕಷ್ಟಗಳನ್ನು ನೀಗಿಸುವ ದೃಷ್ಟಿಯಿಂದ ಕೃಷಿ ಸಾಲಮನ್ನಾ ಘೋಷಣೆ ಮಾಡಿದೆ. ಹಾಗೆಯೇ ಈ ಯೋಜನೆ ಲಾಭ ಪಡೆಯಲಿರುವ ರೈತರು ಭರ್ತಿ ಮಾಡಬೇಕಾಗಿರುವ ಘೋಷಣಾ ಪತ್ರಕ್ಕೆ ಪಾನ್ ಕಾರ್ಡ್ ಕಡ್ಡಾಯ ಕಡ್ಡಾಯವಲ್ಲ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.
ಭರ್ತಿ ಮಾಡಬೇಕಾದ ಘೋಷಣಾ ಪತ್ರದಲ್ಲಿ ಪಾನ್ ಕಾರ್ಡ್ ಆಯ್ಕೆಯೇ ಹೊರತು ಕಡ್ಡಾಯವಲ್ಲ, ರೈತರು ಸಹಕಾರ ಬ್ಯಾಂಕ್ ಗಳಿಂದ ಪಡೆದ ಬೆಳೆ ಸಾಲ ಮನ್ನಾ ಲಾಭ ಪಡೆಯಲು ಈಗಾಗಲೇ ಅನುಮೋದನೆ ಪಡೆದು ಸರಳ ಮಾರ್ಗಸೂಚಿಗಳನ್ನು ಸಹಕಾರ ಸಂಘಗಳ ನಿಬಂಧಕರು ಹೊರಡಿಸಿದ್ದಾರೆ. ರೈತರ ಕುಟುಂಬದ ಮುಖ್ಯಸ್ಥ ಸಲ್ಲಿಸಬೇಕಾದ ಅರ್ಜಿ ಮತ್ತು ಮುದ್ರೆಯಿಲ್ಲದ ಅಫಿಡೆವಿಟ್ ಕ್ಲಿಷ್ಟಕರವಾಗಿದೆ ಎಂದು ವರದಿಗಳು ಹೇಳಿವೆ.

ಆದರೆ ವಿವರಗಳು ಅತ್ಯಂತ ಸರಳವಾಗಿದ್ದು, ರೈತರಿಗೆ ಸಾಲ ಮನ್ನಾ ಸೌಲಭ್ಯ ಸಿಗಬೇಕು ಎನ್ನುವ ಕಾರಣಕ್ಕೆ ಅವರ ಉಳಿತಾಯ ಖಾತೆಗೆ ಮೊತ್ತವನ್ನು ಜಮಾ ಮಾಡಿ, ಅದನ್ನು ಸಹಕಾರಿ ಸಂಘ ಅಥವಾ ಬ್ಯಾಂಕ್ ನಲ್ಲಿನ ರೈತರ ಸಾಲದ ಖಾತೆಗೆ ತಕ್ಷಣ ವರ್ಗಾಯಿಸುವಂತೆ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications