Get Updates
Get notified of breaking news, exclusive insights, and must-see stories!

ನಂದಿ ಗ್ರಾಮದ ಹಿಂಸಾಚಾರ ನೆನಪಿಸಿದ ಮಧ್ಯಪ್ರದೇಶದ ಮಂಡ್ಸೌರ್

ಭೋಪಾಲ್, ಜೂನ್ 8: ಮಧ್ಯಪ್ರದೇಶದ ಮಂಡ್ಸೌರ್ ರೈತರ ಪ್ರತಿಭಟನೆ, ಪೊಲೀಸರ ಹಾರಿಸಿದ ಗುಂಡಿಗೆ ಬಲಿಯಾದ ಆರು ಮಂದಿ- ಘಟನೆಗಳು 2007ರಲ್ಲಿ ನಡೆದ ನಂದಿ ಗ್ರಾಮದ ಗಲಭೆಯನ್ನು ನೆನಪಿಸುತ್ತಿದೆ.

ಪಶ್ಚಿಮ ಬಂಗಾಲದ ಪೂರ್ವ ಮಿಡ್ನಾಪುರ್ ಜಿಲ್ಲೆಯಲ್ಲಿರುವ ನಂದಿಗ್ರಾಮದ ರೈತರುತಮ್ಮ ಭೂಮಿಯನ್ನು ಸರಕಾರ ವಶಕ್ಕೆ ಪಡೆಯುವ ನಿರ್ಧಾರದ ವಿರುದ್ಧ 2007ರಲ್ಲಿ ಪ್ರತಿಭಟನೆಗೆ ಇಳಿದರು. ನಂದಿಗ್ರಾಮವೇ ರೈತರ ಪ್ರತಿಭಟನೆಯ ಸಂಕೇತವಾಯಿತು.[ಐದು ಹೆಣ ಬಿದ್ದ ಮೇಲೆ ರೈತರ ಕೂಗಿಗೆ ತಲೆಬಾಗಿದ ಮಧ್ಯ ಪ್ರದೇಶ ಸರ್ಕಾರ]

ಆ ಹೋರಾಟ ನಂತರದ ನಾಲ್ಕು ವರ್ಷ ನಡೆಯಿತು. ಪಶ್ಚಿಮ ಬಂಗಾಲದಲ್ಲಿ ಎಡ ಪಕ್ಷದ ಇಪ್ಪತ್ನಾಲ್ಕು ವರ್ಷದ ಆಡಳಿತ ಅಂತ್ಯವಾದ ನಂತರವಷ್ಟೇ ಪ್ರತಿಭಟನೆ ಕೊನೆಗೊಂಡಿದ್ದು. ಪ್ರತಿಭಟನೆ ಕಾವು ತೀರಾ ಹೆಚ್ಚಾಗಿತ್ತು. ಈ ಹಿಂಸಾಚಾರ ತೀರಾ ಭಯಾನಕವಾದದ್ದು ಎಂದು ಆಗ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧಿ ಹೇಳಿಕೆ ನೀಡಿದ್ದರು.

ಸ್ಥಳೀಯರು ಸೊನಾಚುರದಲ್ಲಿ ಒಟ್ಟಾಗಿ ಸೇರಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪಾದಯಾತ್ರೆಗಳನ್ನು ಆಯೋಜಿಸಿ, ರೈತರು ಧಾರ್ಮಿಕ ಗ್ರಂಥಗಳನ್ನು ಓದಿ, ನೈತಿಕತೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಯಿತು. ಆದರೆ ಯಾವಾಗ ಹಿಂಸಾಚಾರಕ್ಕೆ ಕಾರಣವಾಯಿತೋ ಪೊಲೀಸರು ತಡೆಯುವ ಯತ್ನದಲ್ಲಿ ಹದಿನಾಲ್ಕು ಪ್ರತಿಭಟನಾನಿರತರು ತೀರಿಕೊಂಡರು.[ರೈತರ ಕ್ರೋಧಾಗ್ನಿಗೆ ಸಿಕ್ಕು ಹೊತ್ತಿ ಉರಿಯುತ್ತಿದೆ ಮಧ್ಯಪ್ರದೇಶ]

ಸಿಪಿಎಂ ಕಾರ್ಯಕರ್ತರೇ ಪೊಲೀಸರ ಬೆಂಬಲಕ್ಕೆ

ಸಿಪಿಎಂ ಕಾರ್ಯಕರ್ತರೇ ಪೊಲೀಸರ ಬೆಂಬಲಕ್ಕೆ

ಎಪ್ಪತ್ತು ಮಂದಿಗೆ ಗಾಯಗಳಾದವು. ಸಿಪಿಎಂನ ಕಾರ್ಯಕರ್ತರೇ ಪ್ರತಿಭಟನಾನಿರತರ ಮೇಲೆ ಪೊಲೀಸರ ಅಮಾನವೀಯ ಹಲ್ಲೆಗೆ ಸಹಕರಿಸಿದರು ಎಂಬ ಆರೋಪ ಕೇಳಿಬಂತು. ಪಶ್ಚಿಮ ಬಂಗಾಲದಲ್ಲಿ ಹಿಂದೆಂದೂ ಅಂಥ ಘಟನೆ ಆಗಿರಲಿಲ್ಲ. ಕಲ್ಕತ್ತಾ ಹೈ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತು.

ಬುದ್ಧಿಜೀವಿಗಳೇ ಪ್ರಶ್ನೆ ಮಾಡಿದರು

ಬುದ್ಧಿಜೀವಿಗಳೇ ಪ್ರಶ್ನೆ ಮಾಡಿದರು

ಬೀದಿಬೀದಿಗಳಲ್ಲಿ ಪ್ರತಿಭಟನೆಗಳು ನಡೆದವು. ಬುದ್ಧಿಜೀವಿಗಳು ಯಾರ್ಯಾರು ಎಡಪಕ್ಷಗಳ ಬಗ್ಗೆ ಒಲವನ್ನು ಇಟ್ಟುಕೊಂಡಿದ್ದರೋ ಅವರು ಕೂಡ ಪ್ರತಿಭಟನೆ ಸನ್ನಿವೇಶದಲ್ಲಿ ನಡೆದುಕೊಂಡ ರೀತಿ, ಆ ಸನ್ನಿವೇಶವನ್ನು ನಿರ್ವಹಿಸಿದ ರೀತಿಗೆ ಸರಕಾರವನ್ನು ಪ್ರಶ್ಸೆ ಮಾಡಿದರು.

ನಿರ್ಲಕ್ಷ್ಯ ಮಾಡಿತು ಸರಕಾರ

ನಿರ್ಲಕ್ಷ್ಯ ಮಾಡಿತು ಸರಕಾರ

ಇಂಡೋನೇಷ್ಯಾದ ಸಲೀಂ ಗ್ರೂಪ್ ಕೆಮಿಕಲ್ ಕಾರ್ಖಾನೆ ಆರಭಿಸಲು ಒಪ್ಪಿಗೆ ನೀಡಲಾಗಿತ್ತು. ಆಗ ಮುಖ್ಯಮಂತ್ರಿ ಆಗಿದ್ದವರು ಬುದ್ಧದೇವ್ ಭಟ್ಟಾಚಾರ್ಯ. ಆ ಯೋಜನೆಗೆ ತಮ್ಮ ಭೂಮಿ ಕೊಡುವುದಕ್ಕೆ ರೈತರು ಪ್ರಬಲ ವಿರೋಧ ತೋರಿಸಿದರು. ಸಿಂಗೂರ್ ನಲ್ಲಿ ಪ್ರತಿಭಟನೆಯ ಲಕ್ಷಣಗಳು ಗೋಚರಿಸಿದವು. ಆದರೆ ಸರಕಾರ ನಿರ್ಲಕ್ಷ್ಯ ಮಾಡಿತು.

ಹದಿನಾಲ್ಕುವರೆ ಸಾವಿರ ಎಕರೆ ವಶಕ್ಕೆ ನೋಟಿಸ್

ಹದಿನಾಲ್ಕುವರೆ ಸಾವಿರ ಎಕರೆ ವಶಕ್ಕೆ ನೋಟಿಸ್

ಬಂಡವಾಳ ಹರಿದು ಬರಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಭಟ್ಟಾಚಾರ್ಯ ಪ್ರತಿಭಟನೆಯನ್ನೂ ಲೆಕ್ಕಿಸದೆ ಮುಂದಡಿ ಇಟ್ಟರು. 2007ರ ಜನವರಿ 2ರಂದು ಹಲ್ದಿಯಾ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿತು. ಹದಿನಾಲ್ಕು ಸಾವಿರದ ಐನೂರು ಎಕರೆ ವಶಪಡಿಸಿಕೊಳ್ಳುವುದಾಗಿ ತಿಳಿಸಿತ್ತು.

ಹಟದ ಧೋರಣೆ

ಹಟದ ಧೋರಣೆ

ಅದರ ಮರುದಿನ ಸಾವಿರ ಮಂದಿ ಒಟ್ಟಾಗಿ ಪ್ರತಿಭಟನೆಗೆ ಇಳಿದರು. ಆದರೆ ಸರಕಾರ ಈ ವಿಚಾರದಲ್ಲಿ ಹಟದ ಧೋರಣೆ ತಳೆದಿತ್ತು. ಯೋಜನೆ ಅನುಷ್ಠಾನಕ್ಕೆ ಮುಂದಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+