Get Updates
Get notified of breaking news, exclusive insights, and must-see stories!

ರೈತರ ಕ್ರೋಧಾಗ್ನಿಗೆ ಸಿಕ್ಕು ಹೊತ್ತಿ ಉರಿಯುತ್ತಿದೆ ಮಧ್ಯಪ್ರದೇಶ

ಭೋಪಾಲ್, ಜೂನ್ 7: ಮಧ್ಯ ಪ್ರದೇಶದಲ್ಲಿ ರೈತರ ದಾವಾನಲ ಭುಗಿಲೆದ್ದಿದೆ. ಸಾಟಿ ರೈತರ ಸಾವು ಅವರಲ್ಲಿನ ಆಕ್ರೋಶಕ್ಕೆ ಹಿಂಸಾಚಾರದ ದಾರಿ ತೋರಿಸಿದೆ. ಮಂಗಳವಾರ ನಡೆದ ಪೊಲೀಸರೊಂದಿಗಿನ ಚಕಮಕಿ ವೇಳೆ ಐವರು ರೈತರು ಉಸಿರು ಚೆಲ್ಲಿದ್ದರು. ಅವರ ಸಿಟ್ಟು, ಆಕ್ರೋಶ ಬುಧವಾರವೂ ಮುಂದುವರಿದಿದೆ.

ಹಿರಿಯ ಅಧಿಕಾರಿಯೊಬ್ಬರ ಮೇಲೆ ಹಲ್ಲೆಗೆ ಮುಂದಾದ ಹಾಗೂ ಅಕ್ಷರಶಃ ಅಟ್ಟಾಡಿಸಿಕೊಂಡು ಹೋದ ರೈತರು ಬುಧವಾರ ಕೂಡ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಸ್ವತಂತ್ರ ಕುಮಾರ್ ಸಿಂಗ್ ಅವರಿಗೆ ನೂರು ರೈತ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ಅದನ್ನು ತಡೆದು, ಸಿಂಗ್ ಅವರನ್ನು ಕಾಪಾಡಿದ್ದಾರೆ.[ಮಧ್ಯಪ್ರದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿರುವುದೇಕೆ?]

ಅಧಿಕಾರಿಗಳ ಜತೆ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಸದ್ಯಕ್ಕೆ ಅಲ್ಲಿನ ಸನ್ನಿವೇಶದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಡೀ ಘಟನೆಯ ಬಗ್ಗೆ ಹತ್ತು ಅಂಶಗಳಲ್ಲಿ ಈ ವರದಿ ಏನೇನು ಆಗಿದೆ ಎಂಬುದನ್ನು ತೆರೆದಿಡುತ್ತದೆ. ರೈತರ ಆಕ್ರೋಶಕ್ಕೆ ಮಧ್ಯಪ್ರದೇಶದಂಥ ಮಧ್ಯಪ್ರದೇಶ ಪತರಗುಟ್ಟಿದೆ. ಈ ಘಟನೆ ದೇಶದ ಉಳಿದ ರಾಜ್ಯಗಳಿಗೂ ಒಂದು ಪಾಠ ಎಂಬುದರಲ್ಲಿ ಎರಡು ಮಾತಿಲ್ಲ.[ಮಧ್ಯಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್, ಸಾವಿನ ಸಂಖ್ಯೆ 5ಕ್ಕೆ ಏರಿಕೆ]

ಹಿಂಸಾಚಾರದ ನಂತರ ಕರ್ಫ್ಯೂ ಜಾರಿ

ಹಿಂಸಾಚಾರದ ನಂತರ ಕರ್ಫ್ಯೂ ಜಾರಿ

ಬೆಳೆಗೆ ಹೆಚ್ಚಿನ ಬೆಲೆ, ರೈತ ಸಾಲ ಮನ್ನಾಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಮೇಲೆ ಇಂದೋರ್, ಉಜ್ಜೈನ್ ಮತ್ತು ದೇವಾಸ್ ನ ಕೆಲವು ಭಾಗದಲ್ಲಿ ಕರ್ಫ್ಯೂ ಹಾಕಲಾಗಿದೆ. ಮೊಬೈಲ್ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಹಿಂಸಾಚಾರಪೀಡಿತ ಪ್ರದೇಶಗಳಲ್ಲಿ ಪೊಲೀಸರ ಪಹರೆ ಹಾಕಲಾಗಿದೆ.

ಗುಂಡು ಹಾರಿಸಿದ್ದಾರೆ ಅನ್ನುವ ರೈತರು, ನಾವು ಹಾರಿಸಿಲ್ಲ ಅನ್ನೋ ಪೊಲೀಸರು

ಗುಂಡು ಹಾರಿಸಿದ್ದಾರೆ ಅನ್ನುವ ರೈತರು, ನಾವು ಹಾರಿಸಿಲ್ಲ ಅನ್ನೋ ಪೊಲೀಸರು

ಪ್ರತಿಭಟನಾ ನಿರತರೇನೋ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಲಾಗಿದೆ. ಸಿಆರ್ ಪಿಎಫ್ ಪಡೆಯವರು ಕೂಡ ನಾವು ಗುಂಡು ಹಾರಿಸಿಲ್ಲ ಅನ್ನುತ್ತಿದ್ದಾರೆ. ಹಾಗಿದ್ದರೆ ಈ ಗಲಭೆಯಲ್ಲಿ ರೈತರು ಸತ್ತಿದ್ದು ಹೇಗೆ? ಒಂದು ವೇಳೆ ಗುಂಡೇಟು ತಿಂದೇ ಪ್ರಾಣ ಕಳೆದುಕೊಂಡಿದ್ದರೆ ಗುಂಡು ಹಾರಿಸಿದವರು ಯಾರು ಎಂಬುದು ತಿಳಿಯಬೇಕಿದೆ.

ಗೃಹ ಸಚಿವರ ಹೇಳಿಕೆ

ಗೃಹ ಸಚಿವರ ಹೇಳಿಕೆ

ಮಧ್ಯಪ್ರದೇಶದ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳುವಂತೆ, ಪೊಲೀಸರು ಶೂಟ್ ಮಾಡಿಲ್ಲ. ಗುಂಪಿನಲ್ಲಿ ಸೇರಿದ ಕೆಲ ಸಮಾಜಘಾತುಕ ಶಕ್ತಿಗಳು ರೈತರ ಮೇಲೆ ಗುಂಡು ಹಾರಿಸಿದ್ದಾರೆ.

ತದ್ವಿರುದ್ಧ ಹೇಳಿಕೆ

ತದ್ವಿರುದ್ಧ ಹೇಳಿಕೆ

ಇದಕ್ಕೆ ತದ್ವಿರುದ್ಧವಾದ ಹೇಳಿಕೆಯೊಂದನ್ನು ಉಜ್ಜೈನ್ ನ ವಿಭಾಗೀಯ ಆಯುಕ್ತ ಬಿಎಂ ಓಜಾ ನೀಡಿದ್ದಾರೆ. ಆಕ್ರೋಶಗೊಂಡಿದ್ದ ರೈತರನ್ನು ತಹಬಂದಿಗೆ ತರುವುದಕ್ಕೆ ಪೊಲೀಸರು ಗುಂಡು ಹಾರಿಸಿದರು ಎಂದಿದ್ದಾರೆ.

ವಾಹನಗಳಿಗೆ ಬೆಂಕೆ ಹಚ್ಚಿದರು, ಕಲ್ಲೆಸೆದರು

ವಾಹನಗಳಿಗೆ ಬೆಂಕೆ ಹಚ್ಚಿದರು, ಕಲ್ಲೆಸೆದರು

ಯಾವಾಗ ಗುಂಡು ಹಾರಿತೋ ಪ್ರತಿಭಟನಾನಿರತರ ಆಕ್ರೋಶ ಮೇರೆ ಮೀರಿದೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಲ್ಲು ಎಸೆದಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದಾರೆ.

ಬೆಂಬಲ ಬೆಲೆಯ ಭರವಸೆ

ಬೆಂಬಲ ಬೆಲೆಯ ಭರವಸೆ

ಈರುಳ್ಳಿ ಹಾಗೂ ಬೇಳೆಕಾಳುಗಳಿಗೆ ಬೆಂಬಲ ಬೆಲೆ ಕೊಡುವುದಾಗಿ ಸರಕಾರ ಭರವಸೆ ನೀಡಿತ್ತು. ಅದನ್ನು ಈಡೇರಿಸಬೇಕು ಎಂದು ಜೂನ್ ಒಂದರಂದು ಆರಂಭವಾದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ಮೃತ ರೈತರ ಕುಟುಂಬದ ಭೇಟಿಗೆ ತೆರಳಿದವರು ಪೊಲೀಸರ ವಶಕ್ಕೆ

ಮೃತ ರೈತರ ಕುಟುಂಬದ ಭೇಟಿಗೆ ತೆರಳಿದವರು ಪೊಲೀಸರ ವಶಕ್ಕೆ

ಮಾಜಿ ಸಂಸದೆ- ಕಾಂಗ್ರೆಸ್ ನ ಮೀನಾಕ್ಷಿ ನಟರಾಜನ್ ಅವರು ಮಂಡೌಸರ್ ಗೆ ಮೃತ ರೈತರ ಕುಟುಂಬದವರ ಭೇಟಿಗೆ ತೆರಳುವಾಗ ಪೊಲೀಸರು ವಶಕ್ಕೆ ಪಡೆದರು. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಪ್ರಮುಖ ನಾಯಕರು ಗುರುವಾರ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಚೌಹಾಣ್ ಮಾತುಗಳು ಸುಳ್ಳು ಎಂದು ಸಾಬೀತು

ಚೌಹಾಣ್ ಮಾತುಗಳು ಸುಳ್ಳು ಎಂದು ಸಾಬೀತು

ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಜಯ್ ಸಿಂಗ್, ಮುಖ್ಯಮಂತ್ರಿ ಏನೆಲ್ಲ ಸಾಬೀತು ಮಾಡಲು ಹೊರಟರೋ ಅದು ಸುಳ್ಳು ಎಂದು ಗೊತ್ತಾಗಿದೆ. ಇದೀಗ ರೈತರ ಧ್ವನಿಯನ್ನು ಅಡಗಿಸಲು ಸರಕಾರ ಬಂದೂಕು ಬಳಸುತ್ತಿದೆ. ಚೌಹಾಣ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದಿದ್ದಾರೆ.

ಕೈ ಕೊಡುತ್ತಿರುವ ಮಳೆ, ಜೀವ ಕಳೆದುಕೊಳ್ಳುತ್ತಿರುವ ರೈತ

ಕೈ ಕೊಡುತ್ತಿರುವ ಮಳೆ, ಜೀವ ಕಳೆದುಕೊಳ್ಳುತ್ತಿರುವ ರೈತ

ನೀರಾವರಿ ಸೌಕರ್ಯದ ಕೊರತೆ, ಹಲವು ವರ್ಷಗಳಿಂದ ಕೈ ಕೊಡುತ್ತಿರುವ ಮಳೆಯಿಂದ ಮಧ್ಯಪ್ರದೇಶದ ರೈತರು ಕಂಗಾಲಾಗಿದ್ದಾರೆ. ಇದರಿಂದ ಬೆಳೆ ನಷ್ಟ, ಸಾಲ ಅನುಭವಿಸುತ್ತಿದ್ದಾರೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಮಳೆ ಕೊರತೆ ಅನುಭವಿಸುತ್ತಿರುವ ರಾಜ್ಯಗಳ ಪೈಕಿ ಮಧ್ಯಪ್ರದೇಶ ಕೂಡ ಒಂದು.

ತರಕಾರಿ, ಹೈನು ಉತ್ಪನ್ನ ಪೂರೈಕೆ ನಿಲ್ಲಿಸಿದ ರೈತರು

ತರಕಾರಿ, ಹೈನು ಉತ್ಪನ್ನ ಪೂರೈಕೆ ನಿಲ್ಲಿಸಿದ ರೈತರು

ಮಹಾರಾಷ್ಟ್ರದಲ್ಲೂ ಇಂಥದ್ದೇ ಸ್ಥಿತಿ ರೈತರದಿದ್ದು, ನಗರ ಪ್ರದೇಶಗಳಿಗೆ ಪೂರೈಕೆಯನ್ನೇ ನಿಲ್ಲಿಸಿಬಿಟ್ಟರು. ಇದರಿಂದ ತರಕಾರಿಗಳು ಹಾಗೂ ಹೈನು ಉತ್ಪನ್ನಗಳ ಬೆಲೆ ವಿಪರೀತ ಎಂಬಷ್ಟು ಏರಿಕೆಯಾಯಿತು.

ತಲೆ ಬೋಳಿಸಿಕೊಂಡ ಶಿವಸೇನಾ ನಾಯಕರು

ಮಧ್ಯಪ್ರದೇಶದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಬೀಡ್ ನಲ್ಲಿ ಶಿವಸೇನಾ ನಾಯಕರು ತಲೆ ಬೋಳಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+