ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ಹೆಣ ಬಿದ್ದ ಮೇಲೆ ರೈತರ ಕೂಗಿಗೆ ತಲೆಬಾಗಿದ ಮಧ್ಯ ಪ್ರದೇಶ ಸರ್ಕಾರ

ರೈತ ಚಳುವಳಿಗೆ ಕೊನೆಗೂ ತಲೆಬಾಗಿದ ಮಧ್ಯಪ್ರದೇಶ. ರೈತರ ಸುಮಾರು 6 ಸಾವಿರ ಕೋಟಿ ರು. ಸಾಲ ಮನ್ನಾಕ್ಕೆ ಒಪ್ಪಿಗೆ. ರೈತರ ಸಾಲದೊಂದಿಗೆ ಬಡ್ಡಿಯನ್ನೂ ಮನ್ನಾ ಮಾಡಲು ಒಪ್ಪಿಗೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ನೇತೃತ್ವದ ಸಚಿವ ಸಂಪುಟದಲ್ಲಿ ನಿರ್ಧಾರ

|
Google Oneindia Kannada News

ಮಂದ ಸೌರ್ (ಮಧ್ಯ ಪ್ರದೇಶ), ಜೂನ್ 8: ಸಾಲ ಮನ್ನಾ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಮಧ್ಯಪ್ರದೇಶ ಸರ್ಕಾರದ ರೈತರ ಬೇಡಿಕೆಗಳಿಗೆ ಕೊನೆಗೂ ಮಧ್ಯ ಪ್ರದೇಶ ಸರ್ಕಾರ ಒಪ್ಪಿದೆ.

ಕಳೆದ ಕೆಲವಾರು ದಿನಗಳಿಂದಲೂ ನಡೆಯುತ್ತಿದ್ದ ರೈತರ ಚಳುವಳಿ ಹಿಂಸಾಚಾರಕ್ಕೆ ಸಿಲುಕಿದ ಇತ್ತೀಚೆಗೆ ಗೋಲಿಬಾರ್ ನಡೆಸಿದ್ದ ಮಧ್ಯಪ್ರದೇಶದ ಪೊಲೀಸರು 5 ರೈತರ ಸಾವಿಗೆ ಕಾರಣವಾಗಿದ್ದರು.

Madhyapradesh Government waives off farmers loan of Rs. 6000 crores

ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದರಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ನೇತೃತ್ವದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ರೈತರ ಸಾಲ ಹಾಗೂ ಅದರ ಮೇಲಿನ ಬಡ್ಡಿಯನ್ನೂ ಮನ್ನಾ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಸುಮಾರು 6 ಸಾವಿರ ಕೋಟಿ ರು.ಗಳಷ್ಟು ರೈತರ ಸಾಲ ಮನ್ನಾ ಮಾಡಲು ಅಲ್ಲಿನ ರಾಜ್ಯ ಸರ್ಕಾರ ನಿರ್ಧರಿಸಿದೆ. ಇತ್ತೀಚೆಗೆ ಶುರುವಾಗಿದ್ದ ರೈತರ ಚಳವಳಿಯು ಜೂನ್. 7ರಂದು ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಗೋಲಿಬಾರ್ ನಡೆಸಿದ್ದರು. ಆಗ, 6 ರೈತರು ಸಾವಿಗೀಡಾಗಿದ್ದರು.

ಆದರೆ, ತಾವೇ ಮಾಡಿದ್ದ ಗೋಲಿಬಾರ್ ಅನ್ನೂ ಪೊಲೀಸರು ಒಪ್ಪಿಕೊಂಡಿರಲಿಲ್ಲ. ಚಳುವಳಿ ನಿರತ ರೈತರ ಗುಂಪಿನಲ್ಲಿದ್ದ ಯಾರೋ ದುಷ್ಕರ್ಮಿಗಳು ಗೋಲಿಬಾರ್ ಮಾಡಿದ್ದಾರೆಂದು ಈ ಪ್ರಕರಣವನ್ನು ತೇಲಿಸಲು ಹೊರಟಿದ್ದರು.

ಅತ್ತ ಗೃಹ ಸಚಿವ ಭೂಪೇಂದ್ರ ಸಿಂಗ್ ಕೂಡಾ, ಭೂಮಿ ತಾಯಿಯ ಮಕ್ಕಳ ಸಾವಿಗೆ ಪೊಲೀಸರು ಕಾರಣರಲ್ಲ ಎಂದ ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು.

English summary
Madhyapradesh government gives green signal to waive the debts of farmers which is about Rs. 6000 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X