Air India flight: ಬೆಂಗಳೂರಿನಲ್ಲಿ ಲ್ಯಾಂಡಿಂಗ್ ವೇಳೆ ನೆಲಕ್ಕೆ ಅಪ್ಪಳಿಸಿದ ಏರ್‌ ಇಂಡಿಯಾ ವಿಮಾನದ ಹಿಂಭಾಗ

Air India flight: ದೆಹಲಿಯಿಂದ ಬಂದ ಏರ್ ಇಂಡಿಯಾ ವಿಮಾನವೊಂದು ಇಂದು (ಮೇ 21) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಅದರ ಹಿಂಭಾಗ ನೆಲಕ್ಕೆ ಅಪ್ಪಳಿದ ಘಟನೆ ನಡೆದಿದೆ. ಈ ವೇಳೆ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಯಾವುದೇ ಅನಾಹುತ ಆಗಿಲ್ಲ, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಮಾನವು ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಅದರ ಹಿಂಭಾಗದ ಭಾಗವು ರನ್‌ವೇಗೆ ತಗುಲಿದಾಗ ಅದನ್ನು ಟೇಲ್‌ಸ್ಟ್ರೈಕ್ ಎಂದು ಕರೆಯಲಾಗುತ್ತದೆ. ಈ ಟೇಲ್‌ಸ್ಟ್ರೈಕ್ ಸಂಭವಿಸಿದ ನಂತರ ವಿಮಾನದಲ್ಲಿ ಯಾವುದೇ ಹಾನಿ ಅಥವಾ ತಾಂತ್ರಿಕ ಸಮಸ್ಯೆಗಳಿವೆಯೇ ಎಂದು ಪರೀಕ್ಷಿಸಲು ವಿಮಾನವನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತದೆ.

Air India Flight Suffers Tail Strike During Landing at Bengaluru Kempegowda International Airport

ವಿಮಾನ ತಪಾಸಣೆ

ಏರ್ ಇಂಡಿಯಾದ AI2651 ವಿಮಾನವು ಟೇಲ್‌ಸ್ಟ್ರೈಕ್ ಘಟನೆಗೆ ಒಳಗಾದ ಕಾರಣ ತಪಾಸಣೆಗಾಗಿ ಅದನ್ನು ಸೇವೆಯಿಂದ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಆ ವಿಮಾನ ದೆಹಲಿಗೆ ಮರಳುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಪ್ರಯಾಣಿಕರಿಗೆ ಉಂಟಾದ ಸಮಸ್ಯೆಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮಗೆ ಮೊದಲ ಆದ್ಯತೆಯಾಗಿದೆ," ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಇನ್ನೂ ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್‌ಗೆ ಅಂತಿಮ ಹಂತದಲ್ಲಿರುವಾಗ ಅದಕ್ಕೂ ಕೆಲವೇ ಕ್ಷಣಗಳ ಮೊದಲು ಒಂದು ಬೋಯಿಂಗ್ 747 ವಿಮಾನ ಟೇಕ್‌ಆಫ್ ಆಗಿತ್ತು. ಬೋಯಿಂಗ್ 747 ವಿಮಾನದ ಇಂಜಿನ್‌ಗಳಿಂದ ಉಂಟಾದ ವಿಂಡ್ ಟರ್ಬುಲೆನ್ಸ್ ಕಾರಣದಿಂದ ಲ್ಯಾಂಡಿಂಗ್ ಸಮಸ್ಯೆಯಾಗಬಹುದು ಎಂದು ಏರ್ ಇಂಡಿಯಾ ಪೈಲಟ್ ಅಂದಾಜಿಸಿದ್ದರು. ಆದ್ದರಿಂದ ನಿಯಮದಂತೆ ಲ್ಯಾಂಡಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ವಿಮಾನವನ್ನು ಪುನಃ ಮೇಲೆ ಹಾರಿಸಲು ನಿರ್ಧರಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಅಧಿಕಾರಿಗಳು ಹೇಳೋದೇನು?

ಈ ಘಟನೆ ಸಂಭವಿಸುತ್ತಿದ್ದಂತೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್​ ಮಾಡಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಈ ಬಗ್ಗೆ ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿಯೊಬ್ಬರು ಮಾತನಾಡಿದ್ದು, "ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ," ಎಂದು ಮಾಹಿತಿ ನೀಡಿದ್ದಾರೆ. ಅಪಘಾತಕ್ಕೆ ಒಳಗಾದ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಹಿನ್ನೆಲೆ ಬೆಂಗಳೂರಿನಿಂದ ದೆಹಲಿಗೆ ಹೋಗಬೇಕಿದ್ದ ವಿಮಾನದ ಸೇವೆಯನ್ನು ರದ್ದುಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+