ಆಗಸ್ಟ್ 6ರಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ
ಬೆಂಗಳೂರು, ಜುಲೈ 21 : ಬೆಂಗಳೂರಿನ ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಬಾರಿ ಹೂವುಗಳಿಂದ 25 ಅಡಿ ಎತ್ತರದ ಸಂಸತ್ ಭವನದ ಮಾದರಿಯನ್ನು ತಯಾರಿಸಲಾಗುತ್ತದೆ.
ಆಗಸ್ಟ್ 6 ರಿಂದ 15ರ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದೆ. ತೋಟಗಾರಿಕೆ ಪಿತಾಮಹ ಎಂ.ಎಚ್. ಮರಿಗೌಡರ ಜನ್ಮಶತಮಾನೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಮತ್ತಷ್ಟು ಮೆರಗು ನೀಡಲು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘಗಳ ಪ್ರದರ್ಶನ ತೀರ್ಮಾನ ಕೈಗೊಂಡಿದೆ. [ಚಿತ್ರಗಳು : 2015ರ ಫಲಪುಷ್ಪ ಪ್ರದರ್ಶನ]

ಸಂಸತ್ ಭವನ ನಿರ್ಮಾಣ : 2016ನೇ ಸಾಲಿನ ಫಲಪುಷ್ಪ ಪ್ರದರ್ಶನದ ಆಕರ್ಷಣೆ ದೆಹಲಿಯಲ್ಲಿರುವ ಸಂಸತ್ ಭವನ. ಹೂವುಗಳಿಂದ 2 ಅಂತಸ್ತಿನ ಸಂಸತ್ ಭವನ ನಿರ್ಮಾಣ ಮಾಡಲಾಗುತ್ತದೆ. 35 ರಿಂದ 40 ಅಡಿ ವಿಸ್ತೀರ್ಣದ ಸಂಸತ್ ಭವನದ ಕಲಾಕೃತಿ ನಿರ್ಮಿಸಲು 4 ಲಕ್ಷ ಹೂಗಳನ್ನು ಬಳಸಲಾಗುತ್ತಿದೆ.[ಹಾಪ್ ಕಾಮ್ಸ್ ನಲ್ಲಿ ಎಂಟಿಆರ್ ಉತ್ಪನ್ನ ಖರೀದಿ ಮಾಡಿ]
ಫಲಪುಷ್ಪ ಪ್ರದರ್ಶನದ ಅಂಗವಾಗಿ ಮೈಸೂರು ಉದ್ಯಾನ ಕಲಾ ಸಂಘ ಆಗಸ್ಟ್ 2ರಂದು ಮಾಧ್ಯಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ
080-26576781.












Click it and Unblock the Notifications