• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು ಎಪಿಎಂಸಿಯಲ್ಲಿ ಮೂಲಸೌಕರ್ಯಗಳ ಕೊರತೆ, ರೈತರ ಆಕ್ರೋಶ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್‌, 06: ದೊಡ್ಡ ಪ್ರಮಾಣದಲ್ಲಿ ವಹಿವಾಟು ಹಾಗೂ ರೈತರಿಂದ ಖರೀದಿಸುವ ಕೃಷಿ ಉತ್ನನ್ನಕ್ಕೆ ನಗದು ದೊರಕಿಸುವ ವಿಷಯಗಳಲ್ಲಿ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಹೆಸರುವಾಸಿ ಆಗಿದೆ. ಆದರೆ ಮೂಲಸೌಕರ್ಯಗಳ ವಿಷಯದಲ್ಲಿ ಹಿಂದುಳಿದಿದ್ದು, ಅಲ್ಲಿನ ವ್ಯಾಪಾರಿಗಳು, ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಕುಡಿಯಲು ಶುದ್ಧನೀರು ಮತ್ತು ಶೌಚಾಲಯ ವ್ಯವಸ್ಥೆ ಇಲ್ಲದೆ ರೈತರು ಪರದಾಡುವಂತಹ ಪರಿಸ್ಥಿತಿ ಇದೆ. ಅದರಲ್ಲೂ ಎಪಿಎಂಸಿಯಲ್ಲಿ ಕೆಲಸ ಮಾಡುವ ಮಹಿಳಾ ಹಮಾಲರ ಸ್ಥಿತಿ ಅಯೋಮಯವಾಗಿದೆ. ವಾಹನಗಳ ಮರೆಮಾಡಿ ಅಥವಾ ಆವರಣ ಗೋಡೆಗಳ ಪಕ್ಕದಲ್ಲಿ ಶೌಚಾಲಯಕ್ಕೆ ಹೋಗುವುದಕ್ಕೂ ಹರಸಾಹಸ ಪಡುತ್ತಿದ್ದಾರೆ. ಎಪಿಎಂಸಿಯಲ್ಲಿ ವಹಿವಾಟು ಹಾಗೂ ಸೌಕರ್ಯಗಳು ಒದಕ್ಕೊಂದು ವಿರುದ್ಧ ದಿಕ್ಕಿನಲ್ಲಿವೆ. ಸದ್ಯಕ್ಕೆ ಭತ್ತದ ವಹಿವಾಟು ನಡೆಯುತ್ತಿದ್ದು, ಪ್ರತಿದಿನ ನೂರಾರು ರೈತರು ಎಪಿಎಂಸಿ ಆವರಣಕ್ಕೆ ಬೆಳಗಿನ ಜಾವದಲ್ಲಿ ಬಂದು ಉಳಿದುಕೊಳ್ಳುತ್ತಾರೆ. ಅದೇ ದಿನದಂದು ಭತ್ತ ಮಾರಾಟವಾಗದಿದ್ದರೆ ಇನ್ನೊಂದು ದಿನ ಉಳಿದುಕೊಳ್ಳಬೇಕಾಗುತ್ತದೆ. ಹೀಗೆ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗುವ ರೈತರಿಗೆ ಮಲಗುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಕೂಗುಗಳು ಕೇಳಿಬರುತ್ತಿವೆ.

ನಿಲ್ಲದ ಕಾಡಾನೆಗಳ ಹಾವಳಿ: ಅಡಿಕೆ ಮರಗಳ ಮಾರಣಹೋಮ, ಕೆಸಗೋಡು ಗ್ರಾಮದ ರೈತ ಕಂಗಾಲುನಿಲ್ಲದ ಕಾಡಾನೆಗಳ ಹಾವಳಿ: ಅಡಿಕೆ ಮರಗಳ ಮಾರಣಹೋಮ, ಕೆಸಗೋಡು ಗ್ರಾಮದ ರೈತ ಕಂಗಾಲು

ರೈತರು ಲಘು ವಿಶ್ರಾಂತಿ ಹೊಂದುವುದಕ್ಕೆ ಹಾಗೂ ಅನಿವಾರ್ಯತೆ ಇದ್ದವರು ರಾತ್ರಿ ಉಳಿದುಕೊಳ್ಳಲಿ ಎನ್ನುವ ಕಾರಣಕ್ಕಾಗಿಯೇ ಎಪಿಎಂಸಿ ಆವರಣಗಳಲ್ಲಿ ರೈತ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ರಾಯಚೂರಿನಲ್ಲಿಯೂ ಸುಸಜ್ಜಿತ ರೈತ ಭವನ ನಿರ್ಮಿಸಲಾಗಿದ್ದು, ಅದರ ನಿರ್ವಹಣೆಯಿಲ್ಲದೆ ಹಾಗೆಯೇ ಉಳಿದಿದೆ. ಇದರಿಂದ ರೈತರು ರಾತ್ರಿ ಸಮಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಂತಾಗಿದೆ. ಕನಿಷ್ಠ ರೈತರು ಅಲ್ಲಿ ಮಾತನಾಡುತ್ತಾ ಕುಳಿತುಕೊಳ್ಳುವುದಕ್ಕೂ ವ್ಯವಸ್ಥೆ ಮಾಡಿಲ್ಲ ಎನ್ನುವ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಮಾರುಕಟ್ಟೆಗಳಲ್ಲಿ ಶೌಚಾಲಯ ಕೊರತೆ

ಮಾರುಕಟ್ಟೆಗಳಲ್ಲಿ ಶೌಚಾಲಯ ಕೊರತೆ

ರೈತ ಭವನಗಳು ಅನ್ಯ ಉದ್ದೇಶಗಳಿಗೆ ಬಳಕೆ ಆಗುತ್ತಿದೆ. ವಿಶಾಲವಾಗಿರುವ ಗಂಜ್‌ ಎಪಿಎಂಸಿ ಆವರಣದಲ್ಲಿ ಹಾಗೂ ಹೈದರಾಬಾದ್‌ ರಸ್ತೆಯಲ್ಲಿರುವ ಎಪಿಎಂಸಿ ಹತ್ತಿ ಮಾರುಕಟ್ಟೆಗಳಲ್ಲಿ ನಿರ್ಮಿಸಿರುವ ಶೌಚಾಲಯಗಳು ಹಾಗೂ ನೀರಿನ ಟ್ಯಾಂಕ್‌ಗಳು ಹಾಳು ಬಿದ್ದಿವೆ. ಯಾವುದೋ ಒಂದು ಮೂಲೆಯಲ್ಲಿ ಶೌಚಾಲಯ ನಿರ್ಮಿಸಿದ್ದು, ಅರ್ಧ ಕಿಲೋ ಮೀಟರ್ ದೂರ ರೈತರು ನಡೆದುಕೊಂಡು ಬಂದು ಅವುಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಅನುಕೂಲವಾಗುವ ಸ್ಥಳದಲ್ಲಿ ಪ್ರತಿ ಪ್ರವೇಶದ್ವಾರ ಅಥವಾ ಮಾರುಕಟ್ಟೆ ಪ್ಲಾಟ್‌ಗಳ ಬಳಿಯಲ್ಲಿಯೇ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.

ಎಪಿಎಂಸಿ ಆವರಣದಲ್ಲಿ ಲಾರಿಗಳು, ಟ್ರ್ಯಾಕ್ಟರ್‌ಗಳು, ಪಿಕಪ್‌ಗಳು ಸೇರಿದಂತೆ ಸರಕು ಸಾಗಣೆಯ ಅನೇಕ ವಾಹನಗಳು ಸಂಚರಿಸುತ್ತವೆ. ಇದಕ್ಕಾಗಿ ಸೂಕ್ತ ರಸ್ತೆಗಳು, ಚರಂಡಿಗಳನ್ನು ನಿರ್ಮಾಣ ಮಾಡಬೇಕಿದೆ. ರಸ್ತೆಗಳೆಲ್ಲ ಹಾಳಾಗಿದ್ದು, ದೂಳು ಹೊರ ಹೊಮ್ಮುತ್ತಲೇ ಇದೆ. ಇದರಿಂದ ಇಡೀ ಗಂಜ್‌ ಆವರಣವು ದೂಳಿನಿಂದ ಕೂಡಿರುತ್ತದೆ.

ಕೃಷಿ ಶಿಕ್ಷಣ ಪಠ್ಯದಲ್ಲಿ ನೈಸರ್ಗಿಕ ಕೃಷಿ ವಿಧಾನ ಸೇರ್ಪಡೆ ಶೀಘ್ರಕೃಷಿ ಶಿಕ್ಷಣ ಪಠ್ಯದಲ್ಲಿ ನೈಸರ್ಗಿಕ ಕೃಷಿ ವಿಧಾನ ಸೇರ್ಪಡೆ ಶೀಘ್ರ

ಸಂಗ್ರಹಿಸುತ್ತಿರುವ ಸೆಸ್‌ ಪ್ರಮಾಣ ಎಷ್ಟು?

ಸಂಗ್ರಹಿಸುತ್ತಿರುವ ಸೆಸ್‌ ಪ್ರಮಾಣ ಎಷ್ಟು?

ಎಪಿಎಂಸಿ ನೂತನ ಕಾಯ್ದೆ ಜಾರಿಯಾದ ಬಳಿಕ ಕೃಷಿ ಉತ್ಪನ್ನಗಳನ್ನು ಕಡ್ಡಾಯವಾಗಿ ಎಪಿಎಂಸಿ ಆವರಣದಲ್ಲಿಯೇ ಮಾರಾಟ ಮಾಡಬೇಕು ಎನ್ನುವುದು ನಿರ್ಬಂಧವಿಲ್ಲ. ಹೀಗಾಗಿ ಭತ್ತ, ಹತ್ತಿಯನ್ನು ಕಾರ್ಖಾನೆಗಳ ಮಾಲೀಕರು ನೇರವಾಗಿ ರೈತರಿಂದ ಖರೀದಿಸುತ್ತಿದ್ದಾರೆ. ಬಹುತೇಕ ಹತ್ತಿ ವಹಿವಾಟು ಎಪಿಎಂಸಿ ಹೊರಗಡೆಯೇ ನಡೆಯುತ್ತಿದೆ. ಅಲ್ಲದೆ, ಪ್ರತಿ ಕ್ವಿಂಟಲ್‌ಗೆ ಎಪಿಎಂಸಿ ಸಂಗ್ರಹಿಸುತ್ತಿದ್ದ ಸೆಸ್‌ ಪ್ರಮಾಣವು ₹1.5 ಯಿಂದ 60 ಪೈಸೆಗೆ ಇಳಿಕೆಯಾಗಿದೆ. ಹೀಗಾಗಿ ಸೆಸ್‌ ಸಂಗ್ರಹ ಕಡಿಮೆ ಆಗಿದ್ದರಿಂದ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡಲು ಎಪಿಎಂಸಿ ಆವರಣಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ನೆರವು ತುಂಬಾ ಅಗತ್ಯವಿದೆ. ಆದರೆ ಅನುದಾನವನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಯೋಜನೆ ರೂಪಿಸಬೇಕು ಎನ್ನುವುದು ರೈತರ ಒತ್ತಾಯ ಆಗಿದೆ.

ಜಾನುವಾರುಗಳಿಗೂ ಕಾಡುತ್ತಿದೆ ನೀರಿನ ಕೊರತೆ

ಜಾನುವಾರುಗಳಿಗೂ ಕಾಡುತ್ತಿದೆ ನೀರಿನ ಕೊರತೆ

ಇನ್ನು ದೇವದುರ್ಗ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು, ಅದು ಕಾರ್ಯನಿರ್ವಹಿಸುತ್ತಿಲ್ಲ. ಪ್ರತಿ ಶನಿವಾರ ಜಾನುವಾರು, ಕುರಿಗಳ ಸಂತೆಯು ಎಪಿಎಂಸಿ ಆವರಣದಲ್ಲಿಯೇ ನಡೆಯುತ್ತದೆ. ಅವುಗಳಿಗೂ ಯಾವುದೇ ನೀರಿನ ವ್ಯವಸ್ಥೆ ಇಲ್ಲ. ಇತ್ತ ರೈತರಿಗೂ ಕುಡಿಯುವ ಶುದ್ಧ ನೀರಿನ ಘಟಕ ಇದ್ದರೂ ನಿರುಪಯುಕ್ತವಾಗಿದೆ. ಕಳೆದ 40 ವರ್ಷದಿಂದ ತಾಲೂಕಿನ ಹಲವಾರು ರೈತಪರ ಸಂಘಟನೆಗಳು ಹಾಗೂ ರೈತ ಮುಖಂಡರು ರೈತ ಭವನವನ್ನು ಎಪಿಎಂಸಿಯಲ್ಲಿ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಎಪಿಎಂಸಿಯ ಆವರಣದ ಗಿಡಗಳ ನೆರಳಿನಲ್ಲಿ ಮತ್ತು ಎಪಿಎಂಸಿಯ ಸಭಾಂಗಣದಲ್ಲಿ ಸಭೆ ಸಮಾರಂಭಗಳನ್ನು ಮಾಡುತ್ತಿದ್ದೇವೆ ಎಂದು ರೈತ ಶಿವಪ್ಪ ಹೇಳುತ್ತಿದ್ದಾರೆ.

ಕೋಟ್ಯಂತರ ಹಣ ಖರ್ಚು ವ್ಯರ್ಥವಾಯ್ತ?

ಕೋಟ್ಯಂತರ ಹಣ ಖರ್ಚು ವ್ಯರ್ಥವಾಯ್ತ?

ಲಿಂಗಸುಗೂರು ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಜಿಲ್ಲೆಯಲ್ಲಿ ವಿಶಾಲ ಮತ್ತು ಸುಸಜ್ಜಿತ ಅಂಗಡಿ ಮುಗ್ಗಟ್ಟು, ಅಗತ್ಯ ಸೌಲಭ್ಯಗಳುಳ್ಳ ಪ್ರಾಂಗಣ ಎಂಬ ಹೆಗ್ಗಳಿಕೆ ಹೊಂದಿತ್ತು. ಆದರೆ ಇಲ್ಲಿ ಇದೀಗ ಮೇಲುಸ್ತುವಾರಿ ಮತ್ತು ನಿರ್ವಹಣೆ ನಿರ್ಲಕ್ಷ್ಯದಿಂದ ಕನಿಷ್ಠ ಸೌಲಭ್ಯಗಳು ಸಿಗದೆ ರೈತರು ಪರದಾಡುವ ದುಸ್ಥಿತಿ ಎದುರಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರುಕಟ್ಟೆಗೆ ಬರುವ ರೈತರಿಗೆ ವಿಶ್ರಾಂತಿ ಭವನ, ಶುದ್ಧ ಕುಡಿಯುವ ನೀರು, ಶೌಚಾಲಯ, ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ, ಮೇವಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕೋಟ್ಯಂತರ ಹಣ ಖರ್ಚು ಮಾಡಿದ್ದರು. ಆದರೆ ಇವು ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿವೆ. ರೈತ ಭವನ ನಿರ್ಮಾಣಕ್ಕೆ ವಿಶಾಲ ನಿವೇಶನ ನೀಡಲಾಗಿದೆ. ಆದರೆ ನಿರ್ಮಾಣಕ್ಕೆ ಆಡಳಿತ ಮಂಡಳಿ ಇಂದಿಗೂ ಮುಂದಾಗಿಲ್ಲ. ಶ್ರಮಿಕ ಭವನ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯಗಳನ್ನು ಪ್ರಾಂಗಣದ ಮೂಲೆಯೊಂದರಲ್ಲಿ ನಿರ್ಮಿಸಿದ್ದು, ಇವು ಕೂಡ ನಿರ್ವಹಣೆ ಇಲ್ಲದೆ ಹಳ್ಳ ಹಿಡಿಯುತ್ತಿವೆ.

ರೈತ ಮಹಿಳೆಯರಿಗೆ ನರಕಯಾತನೆ

ರೈತ ಮಹಿಳೆಯರಿಗೆ ನರಕಯಾತನೆ

ಮಾರುಕಟ್ಟೆಗೆ ಬರುವ ರೈತರು ಕುಡಿಯುವ ನೀರಿಗಾಗಿ ಹೋಟೆಲ್‌ಗಳಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಹಿರ್ದೆಸೆ, ಮೂತ್ರ ವಿಸರ್ಜನೆ ಸವಾಲಾಗಿ ಪರಿಣಮಿಸಿದೆ. ಇದರಿಂದ ರೈತ ಮಹಿಳೆಯರು ಅನುಭವಿಸುವ ನರಕಯಾತನೆ ಯಾರಿಗೂ ಹೇಳತೀರದಾಗಿದೆ. ಅಲ್ಲಲ್ಲಿ ಬೆಳೆದು ನಿಂತ ಮುಳ್ಳಿನ ಪೊದೆ ಮಧ್ಯೆಯೇ ಬಯಲು ಬಹಿರ್ದೆಸೆ ಮಾಡುವುದು ಕಂಡುಬರುತ್ತದೆ. ಎರಡು ದಶಕಗಳ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭಗೊಂಡಾಗ ಸುಸಜ್ಜಿತ, ಅಗತ್ಯ ಸೌಲಭ್ಯಗಳ ಪ್ರಾಂಗಣಕ್ಕೆ ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಸಂತೋಷಪಟ್ಟಿದ್ದೆವು. ನಂತರ ಅಲ್ಲಿನ ದಾಖಲೆಗಳಲ್ಲಿನ ಸೌಲಭ್ಯ ಕಂಡು ಬೆರಗಾಗಿದ್ದೆವು. ಅಗತ್ಯ ಸೌಲಭ್ಯಗಳ ಕೊರತೆ ಬಗ್ಗೆ ಆಡಳಿತ ಮಂಡಳಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮಗಳಿಗೆ ಭವನದ ಬಳಕೆ

ಖಾಸಗಿ ಕಾರ್ಯಕ್ರಮಗಳಿಗೆ ಭವನದ ಬಳಕೆ

ಮಾನ್ವಿ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕೊರತೆಯಿಂದಾಗಿ ಐದು ವರ್ಷಗಳಿಂದ ಸ್ಥಗಿತಗೊಂಡಿದೆ. ಕಾರಣ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಆಗಮಿಸುವ ರೈತರು, ಸ್ಥಳೀಯ ಹಮಾಲರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕುಡಿಯುವ ನೀರಿನ ಘಟಕದ ಆರಂಭಕ್ಕೆ ಸ್ಥಳೀಯ ಪುರಸಭೆ ಹಾಗೂ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ ಆಗಿದೆ. ಎಪಿಎಂಸಿ ಪ್ರಾಂಗಣದಲ್ಲಿ ಗ್ರಾಮೀಣ ಭಾಗಗಳಿಂದ ಆಗಮಿಸುವ ರೈತರಿಗೆ ವಿಶ್ರಾಂತಿ ಗೃಹ ಇಲ್ಲ. ಹಳೆಯ ರೈತ ಭವನ ಶಿಥಿಲಗೊಂಡಿದೆ. ಇನ್ನು ರೈತ ಭವನದ ಪಕ್ಕದಲ್ಲಿ ಕೆಲವು ವರ್ಷಗಳ ಹಿಂದೆ ಹೊಸ ಭವನ ನಿರ್ಮಿಸಲಾಗಿದೆ. ಈ ಭವನವನ್ನು ಖಾಸಗಿ ಕಾರ್ಯಕ್ರಮಗಳ ಆಯೋಜನೆಗೆ ಬಾಡಿಗೆ ನೀಡಲಾಗುತ್ತದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ರಾಯಚೂರು ಎಪಿಎಂಸಿಯಲ್ಲಿ ಕೆಲವು ಮೂಲಸೌಕರ್ಯಗಳು ಇಲ್ಲ. ಒಂದೊಂದಾಗಿ ಸುಧಾರಿಸುವ ಕೆಲಸ ಮಾಡುತ್ತಿದ್ದೇವೆ. ಸದ್ಯ ₹1.3 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಮಳೆಗಾಲದಲ್ಲಿ ಸೋರಿಕೆಯಾಗುವ ಪ್ಲಾಟ್‌ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ರಾಯಚೂರು ಎಪಿಎಂಸಿ ಕಾರ್ಯದರ್ಶಿ ಆದಪ್ಪಗೌಡ ಹೇಳಿದರು.

English summary
Lack of infrastructure at Raichur APMC, farmers expressed outrage against APMC officials. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X