ಅರ್ಥ ವ್ಯವಸ್ಥೆಯ ಬಜೆಟ್ ಅಲ್ಲ ರಾಜಕೀಯ ವ್ಯವಸ್ಥೆಯ ಬಜೆಟ್
ಮೈಸೂರು, ಜುಲೈ 6: ಸಮಿಶ್ರ ಸರ್ಕಾರದಲ್ಲಿ ಬಹಳ ಸದ್ದು ಮಾಡಿದ್ದ ಸಿಎಂ ಕುಮಾರಸ್ವಾಮಿಯವರು ಮಂಡಿಸಿದ ಈ ಬಜೆಟ್ "ಅರ್ಥ ವ್ಯವಸ್ಥೆಯ ಬಜೆಟ್ ಅಲ್ಲ ರಾಜಕೀಯ ವ್ಯವಸ್ಥೆಯ ಬಜೆಟ್" ಎಂದು ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಟೀಕಿಸಿದ್ದಾರೆ .
ಈ ಬಜೆಟ್ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮಾರಕವಾದ ಬಜೆಟ್. ಪ್ರಗತಿದಾಯಕವಲ್ಲದ ಅರ್ಥ ಹೀನ, ಸಾಲದ ಬಜೆಟ್. ರೈತರ ನಿರೀಕ್ಷೆ ಹುಸಿಯಾಗಿದ್ದು ಪೂರ್ಣ ಸಾಲ ಮನ್ನಾ ಆಗಿರುವುದಿಲ್ಲ. 34,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದರು, ಈ ಹಣದ ಸಂಗ್ರಹ ಯಾವ ಮೂಲದಿಂದ ಬರುತ್ತದೆ ಎಂದು ಹೇಳಲಾಗಿಲ್ಲ ಎಂದು ರಾಮದಾಸ್ ಹೇಳಿದ್ದಾರೆ.
ಹಿಂದಿನ ಸಿದ್ದರಾಮಯ್ಯನವರ ಬಜೆಟಿಗಿಂತ 9,000 ಕೋಟಿ ಹೆಚ್ಚಿನ ಬಜೆಟ್ ಎಂದು ತೋರಿಸಲಾಗಿದ್ದು, 8,500 ಕೋಟಿ ಅಧಿಕ ಸಾಲವನ್ನು ತೋರಿಸಲಾಗಿದೆ. ಆಯ್ದ 45 ಯೋಜನೆಗಳಿಗೆ 3,278 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಬಿಟ್ಟರೆ ಹೊಸತೇನು ಇರುವುದಿಲ್ಲ.

ಕೇಂದ್ರ ಸರ್ಕಾರ ಸಂಧ್ಯಾ ಸುರಕ್ಷಾ ಪೆನ್ಸನ್ ಯೋಜನೆಗೆ 600 ರಿಂದ 1000 ರೂಪಾಯಿ ಹೆಚ್ಚಿಸಲಾಗಿದೆ. ಇದನ್ನು ಕರ್ನಾಟಕ ತನ್ನ ಪಾಲನ್ನು ತೆಗೆದಿಟ್ಟಿರುವುದು ಸಾಧನೆ ಎಂದು ತೋರಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಶಾಲೆಗಳನ್ನು ಮುಚ್ಚುವುದಿಲ್ಲವೆಂದು ಘೋಷಿಸಿತ್ತು.
ಆದರೆ ಈ ಬಜೆಟ್ ನಲ್ಲಿ 28,847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ 10,830 ಶಾಲೆಗಳ ಜೊತೆ ವಿಲೀನಗೊಳಿಸಿ 20,317 ಶಾಲೆಗಳನ್ನು ಮುಚ್ಚುತ್ತಿರುವುದು ಒಂದು ಸಾಧನೆ. ಆರ್ಥಿಕ ಶಿಸ್ತಲ್ಲದ ಪ್ರಗತಿಪರವಲ್ಲದ ಈ ಬಜೆಟ್ ನಲ್ಲಿ 40,753 ಕೋಟಿ ವಿತ್ತೀಯ ಕೊರತೆ ನೀಗಿಸಲು ಯಾವ ಪ್ರಯತ್ನವೆಂದು ತಿಳಿಸಲಾಗಿಲ್ಲ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ದೇಶದ ಎಲ್ಲ ರಾಜ್ಯಗಳು ಕಡಿಮೆ ಮಾಡುತಿದ್ದರೆ ಕರ್ನಾಟಕದಲ್ಲಿ ಈ ಬಜೆಟ್ ನಲ್ಲಿ ಹೆಚ್ಚು ಮಾಡಿರುವುದು ರೈತನಿಗೆ ಕೊಟ್ಟ ಹಣವನ್ನು ರೈತನಿಂದಲೇ ಹಿಂದಕ್ಕೆ ಪಡೆಯುವ ತಂತ್ರವಾಗಿದೆ ಹಾಗೂ ಜನಸಾಮಾನ್ಯರ ಮೇಲೆ ಹೊರೆ ಇದರಿಂದ ದಿನನಿತ್ಯದ ಪದಾರ್ಥದ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ರಾಮದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ದರದ ಮೇಲೆ ಶೇಕಡಾ 30ರಷ್ಟು ಕರ ಹಾಕಿರುವುದು ಪ್ರತಿಯೊಬ್ಬನ ಮೇಲೆ ಹಾಕಿದ ಹೊರೆ. ಮೈಸೂರು ಜಿಲ್ಲೆಗೆ ಯಾವುದೇ ಕೊಡುಗೆಯಾಗಲಿ ಪ್ರವಾಸೋದ್ಯಮ ಮತ್ತು ಶಿಕ್ಷಣ ಅಭಿವೃದ್ಧಿಗೆ ಕೊಡುಗೆಯಾಗಲಿ ದೊರಕಿಲ್ಲದಿರುವುದು ಶೋಚನೀಯ. ಒಟ್ಟಾರೆ ಶಿರಸಾಸನ ಸರ್ಕಾರದ ಈ ಚೊಚ್ಚಲ ಬಜೆಟ್ ಅಭಿವೃದ್ಧಿ ಮಾರಕ ಎಂದು ಶಾಸಕ ರಾಮದಾಸ್, ಬಜೆಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications