Get Updates
Get notified of breaking news, exclusive insights, and must-see stories!

ಶಂಖುಹುಳುವಿನ ಭೀತಿಯಲ್ಲಿ ಕಂಗೆಟ್ಟ ಕೊಡಗಿನ ಜನ

ಮಡಿಕೇರಿ, ಜುಲೈ 23: ಕೊಡಗಿನ ಕೃಷಿಕರು ಆತಂಕಗೊಂಡಿದ್ದಾರೆ. ಇದಕ್ಕೆ ಕಾರಣ ಕಾಫಿ ಗಿಡಗಳು ಸೇರಿದಂತೆ ಶುಂಠಿ, ಬಾಳೆ ಇನ್ನಿತರ ಬೆಳೆಗಳ ಮೇಲೆ ಶಂಖುಹುಳುಗಳು ದಾಳಿ ಮಾಡುತ್ತಿವೆ.

ಗುಂಪುಗುಂಪಾಗಿ ಕಾಣಿಸಿಕೊಳ್ಳುವ ಈ ಹುಳುಗಳು ಎಲೆ, ಕಾಂಡ ಸೇರಿದಂತೆ ಸಸ್ಯಗಳನ್ನೇ ತಿಂದು ನಾಶ ಮಾಡುತ್ತಿವೆ. ಇಷ್ಟು ವರ್ಷ ಕಾಣಿಸಿಕೊಳ್ಳದ ಈ ಶಂಖುಹುಳುಗಳು ಪ್ರಸಕ್ತವರ್ಷ ಇಷ್ಟೊಂದು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೃಷಿಕರಿಗೆ ಅಚ್ಚರಿಯನ್ನು ತಂದಿದೆ.

ಶೀಘ್ರವಾಗಿ ಸಂತಾನೋತ್ಪತ್ತಿ ಮಾಡುತ್ತಿರುವ ಇವುಗಳು ಬೆಳೆಯ ಮೇಲೆ ದಾಳಿ ಮಾಡಲು ಹೊರಟರೆ ಸಂಪೂರ್ಣ ನಾಶವಾಗುವ ತನಕ ಬಿಡುವುದಿಲ್ಲ. ಹೀಗಾಗಿ ಈ ಹುಳುಗಳನ್ನು ನಾಶ ಮಾಡುವುದು ಕೃಷಿಕರಿಗೆ ಸವಾಲಾಗಿ ಪರಿಣಮಿಸಿದೆ. ಈ ಹುಳು ಮಂಡ್ಯದ ಕಡೆಯಿಂದ ಬಂದಿವೆ ಎನ್ನಲಾಗಿದ್ದು, ಇವುಗಳ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಕ್ಯಾಚ್ ಅಂಡ್ ಕಿಲ್ ವಿಧಾನದ ಮೂಲಕ ಎಲ್ಲ ಹುಳುಗಳನ್ನು ಹಿಡಿದು ನಂತರ ಸಾಯಿಸುವುದೇ ಇದಕ್ಕೆ ಉಳಿದಿರುವ ಪರಿಹಾರ ಎಂದು ತಜ್ಞರು ಹೇಳುತ್ತಿದ್ದಾರೆ.

 ಪರಿಹಾರವೇನು?

ಪರಿಹಾರವೇನು?

ಬೆಳೆಯ ಮೇಳೆ ದಾಳಿ ಮಾಡುವ ಆರಂಭದಲ್ಲೇ ಈ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವುದು ಹಾಗೂ ಹುಳುವಿನ ಅಡಗು ತಾಣಗಳನ್ನು ಕಂಡು ಹಿಡಿದು ನಾಶಪಡಿಸುವುದು ಮೊದಲ ಕ್ರಮವಾಗಿದೆ. ಹುಳುಗಳನ್ನು ಆಕರ್ಷಿಸಲು ಪಪ್ಪಾಯ ಗಿಡದ ಕಾಂಡಗಳು, ತೇವವಾದ ಗೋಣಿ ಚೀಲಗಳು ಹಾಗೂ ಪಪ್ಪಾಯ ಎಲೆಗಳನ್ನು ಬಳಸಿ ಹುಳುಗಳನ್ನು ಸಂಗ್ರಹಿಸಿ ಬಳಿಕ ನಾಶ ಮಾಡಬಹುದಾಗಿದೆ ಎಂಬುದು ಕಾಫಿ ಮಂಡಳಿಯ ಅಧಿಕಾರಿಗಳು ಬೆಳೆಗಾರರಿಗೆ ನೀಡುತ್ತಿರುವ ಟಿಪ್ಸ್ ಆಗಿದೆ.

ಆದರೆ ನೂರಾರು ಎಕರೆ ತೋಟದ ಯಾವುದೋ ಮೂಲೆಯಲ್ಲಿ ಇವು ಕಾಣಿಸಿಕೊಂಡು ಕ್ರಮೇಣ ಎಲ್ಲೆಡೆಗೆ ಹರಡುತ್ತಿವೆ. ಹೀಗಾಗಿ ಇವುಗಳ ಅಡಗುತಾಣವನ್ನು ಗುರುತಿಸುವುದೇ ಸವಾಲಾಗಿದೆ.

ಚಿಪ್ಪಿನ ಸುಣ್ಣದಲ್ಲಿದೆ ಮದ್ದು

ಚಿಪ್ಪಿನ ಸುಣ್ಣದಲ್ಲಿದೆ ಮದ್ದು

ಶಂಖುಹುಳು ಪೀಡಿತ ಪ್ರದೇಶಗಳಲ್ಲಿ ಚಿಪ್ಪಿನ ಸುಣ್ಣವನ್ನು ಹರಡಬೇಕು. 50 ಲೀ. ನೀರಿನಲ್ಲಿ 2 ಕೆ.ಜಿ. ಮೈಲುತುತ್ತ ಮತ್ತು 2 ಕೆ.ಜಿ. ತಂಬಾಕಿನ ಸಾರವನ್ನು ಮಿಶ್ರ ಮಾಡಿ ಹುಳುಗಳ ಮೇಲೆ ಸಿಂಪಡಿಸಬೇಕು. ಅಥವಾ ಶೇ.5ರಷ್ಟು ಮೆಟಾಲ್ಡಿಹೈಡ್ ಗುಳಿಗೆಗಳನ್ನು ಎಕರೆಗೆ 10 ಕೆ.ಜಿ. ಗಿಡಗಳ ಸುತ್ತ ಹರಡಬೇಕು.

ಸಂಗ್ರಹಿಸಿದ ಹುಳುಗಳನ್ನು 7 ಅಡಿ ಆಳ, 4 ಅಡಿ ಅಗಲ ಮತ್ತು 4 ಅಡಿ ಉದ್ದದ ಗುಂಡಿಗಳಲ್ಲಿ ತುಂಬಿಸಿ, ಪ್ರತಿ ಒಂದು ಅಡಿ ಪದರದ ಮೇಲೆ ಚಿಪ್ಪಿನ ಸುಣ್ಣ ಹಾಗೂ ಉಪ್ಪು ಹರಡಬೇಕು. ಆರು ಅಡಿ ನಂತರ ಮತ್ತೆ ಚಿಪ್ಪಿನ ಸುಣ್ಣ ಹಾಗೂ ಬ್ಲೀಚಿಂಗ್ ಪೌಡರ್ ಹರಡಿ ಗುಂಡಿಯನ್ನು ಮಣ್ಣಿನಿಂದ ಮುಚ್ಚಬೇಕು ಎಂಬುದು ಕಾಫಿ ಮಂಡಳಿಯ ಅಧಿಕಾರಿಗಳು ನೀಡುತ್ತಿರುವ ಹುಳಗಳ ನಿಯಂತ್ರಣ ಕ್ರಮದ ಮಾಹಿತಿಯಾಗಿದೆ.

ಕಂಗೆಟ್ಟ ಸೋಮವಾರಪೇಟೆ ಜನ

ಕಂಗೆಟ್ಟ ಸೋಮವಾರಪೇಟೆ ಜನ

ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ ಭಾಗದಲ್ಲಿ ಇವುಗಳ ಉಪಟಳ ಜಾಸ್ತಿಯಾಗಿದ್ದು ಬಹಳಷ್ಟು ರೈತರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಕೆಲವು ರೈತರು ಈ ಹುಳುಗಳ ನಿಯಂತ್ರಣ ಸಾಧ್ಯವಾಗದೆ ಪರದಾಡುವಂತಾಗಿದೆ. ದಿನಕ್ಕೆ ಟನ್ ಗಟ್ಟಲೆ ಹುಳುಗಳನ್ನು ಸಂಗ್ರಹಿಸಿ ನಾಶ ಪಡಿಸುತ್ತಿದ್ದರೂ ಅವು ಕಾಣಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

ಆರೋಗ್ಯದ ಮೇಲೂ ಹಾನಿ

ಆರೋಗ್ಯದ ಮೇಲೂ ಹಾನಿ

ಈ ಶಂಖುಹುಳುಗಳು ಕೇವಲ ಸಸ್ಯಗಳ ಮೇಲೆ ದಾಳಿ ಮಾಡಿ ಕೃಷಿಗೆ ಹಾನಿ ಮಾಡುವುದು ಮಾತ್ರವಲ್ಲದೆ, ಮಾನವನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ ಎಂಬ ಸುದ್ದಿ ಹರಡುತ್ತಿದೆ. ಇದು ಬೆಳೆಗಾರರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಬೆಳ್ಳಾರಳ್ಳಿ ಗ್ರಾಮದ ಶಿವಶೇಖರಯ್ಯ, ಪ್ರದೀಪ್ ಅವರಿಗೆ ಸೇರಿದ ಹತ್ತಾರು ಎಕರೆ ಕಾಫಿ, ತೋಟ, ಗದ್ದೆ ಸೇರಿದಂತೆ ಕೃಷಿ ಪ್ರದೇಶದಲ್ಲಿ ಹುಳುಗಳು ಕಂಡುಬಂದಿದ್ದು, ಈಗಾಗಲೇ ಹುಳುಗಳ ನಿಯಂತ್ರಣಕ್ಕಾಗಿ ರೂ. 12 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. 30 ಸಾವಿರ ನರ್ಸರಿ ಗಿಡಗಳು ಹುಳುವಿಗೆ ಆಹಾರವಾಗಿದೆ ಎಂದರೆ ಶಂಖುಹುಳುಗಳು ಯಾವ ರೀತಿಯಲ್ಲಿ ದಾಳಿ ಮಾಡುತ್ತಿರಬಹುದೆಂಬುದು ಗೊತ್ತಾಗಿ ಬಿಡುತ್ತದೆ.

ಬೆಳೆಗಾರರ ಬದುಕನ್ನೇ ಕೊರೆಯುತ್ತಿರುವ

ಬೆಳೆಗಾರರ ಬದುಕನ್ನೇ ಕೊರೆಯುತ್ತಿರುವ

ಸೋಮವಾರಪೇಟೆ ತಾಲೂಕಿನ ಬೆಳ್ಳಾರಳ್ಳಿ, ಹಂಡ್ಲಿ, ಬೆಟ್ಟದಳ್ಳಿ, ಬೀಕಳ್ಳಿ ಭಾಗದಲ್ಲಿ ಹುಳುಗಳು ಕಂಡುಬರುತ್ತಿವೆ. ಇವುಗಳು ನಿಯಂತ್ರಣಕ್ಕೆ ಬಾರದಿದ್ದರೆ ಮುಂದಿನ 4 ವರ್ಷದಲ್ಲಿ ಈ ಭಾಗದ ಬೆಳೆಗಾರರು ಸಾಯುವ ಸ್ಥಿತಿ ನಿರ್ಮಾಣವಾಗಲಿದೆ.

ಚೆಂಡು ಹೂವನ್ನೂ ಬಿಡದೇ ತಿನ್ನುತ್ತಿರುವ ಹುಳುಗಳು, ಬೆಳೆಗಾರರ ಬದುಕನ್ನೇ ಕೊರೆಯುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಕೃಷಿಕರು ಶಂಖುಹುಳುಗಳನ್ನು ನಾಶ ಮಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ತಮಗೆ ತೋಚಿದ ಎಲ್ಲ ರೀತಿಯ ಸರ್ಕಸ್ ಮಾಡುತ್ತಿರುವುದು ಕಂಡು ಬರುತ್ತಿದೆ.

ಧನ್ವಂತರಿ ಸಸ್ಯಲೋಕದಲ್ಲಿ ಶಂಕುಹುಳ

ಧನ್ವಂತರಿ ಸಸ್ಯಲೋಕದಲ್ಲಿ ಶಂಕುಹುಳ

ಕೊಡಗಿನ ಕಾಫಿ ತೋಟದಲ್ಲಿ ಕಂಡು ಬಂದ ಈ ಹುಳು ಇದೀಗ ಹಾಸನದ ತಣ್ಣೀರಹಳ್ಳ ಎಂಬಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಔಷಧಿಗೆ ಬಳಸಲಾಗುವ ಧನ್ವಂತರಿ ಸಸ್ಯಲೋಕದ ಸಸ್ಯಗಳ ಮೇಲೆಯೂ ಕಂಡು ಬಂದಿವೆ.

ಈ ಕುರಿತಂತೆ ಮೇಲ್ವಿಚಾರಕರು ಹೇಳುವುದೇನೆಂದರೆ ಮಳೆಗಾಲದ ಸಮಯದಲ್ಲಿ ಈ ಶಂಖುಹುಳುಗಳು ಗಿಡದ ಮೇಲೆಲ್ಲಾ ಕೂತಿರುತ್ತವೆ ಇದರಿಂದ ಗಿಡಗಳಿಗೆ ಯಾವುದೇ ಹಾನಿಯಾಗುತ್ತಿಲ್ಲ. ಮಳೆ ಕಳೆದಂತೆ ಈ ಹುಳುಗಳು ಮರೆಯಾಗುತ್ತವೆ ಎನ್ನುತ್ತಿರುವುದು ಅಚ್ಚರಿ ಮೂಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+