Get Updates
Get notified of breaking news, exclusive insights, and must-see stories!

ರಾಷ್ಟ್ರೀಯ ರೈತರ ದಿನ: ರೈತನೇ ದೇಶದ ಬೆನ್ನೆಲುಬು ಎಂದ ರಾಜಕೀಯ ನಾಯಕರು

ದೇಶದಲ್ಲಿ ಪ್ರತಿವರ್ಷವೂ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.

ಚೌಧರಿ ಚರಣ್ ಸಿಂಗ್ ಮೀರತ್‌ನ ನೂರ್ಪುರ್‌ನಲ್ಲಿ 1902ರ ಡಿಸೆಂಬರ್ 23ರಂದು ಜನಿಸಿದರು. ಕೃಷಿ ಆರ್ಥಿಕತೆಯ ಮಹತ್ವವನ್ನು ಅವರು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು.

ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಮ್ಮ ನಿರ್ವಹಣೆಯನ್ನು ನೋಡಿಕೊಳ್ಳುವ ಮತ್ತು ಅವರ ಹಕ್ಕುಗಳನ್ನು ನಾವು ರಕ್ಷಿಸಿದರೆ ಪ್ರತಿಯಾಗಿ ನಮ್ಮ ಸಮಾಜದ ಒಂದು ಭಾಗವಿದೆ ಎಂಬುದು ಬಹಳ ಸಂತೋಷದ ಸಂಗತಿಯಾಗಿದೆ. ರಾಷ್ಟ್ರೀಯ ರೈತರ ದಿನ ಅಂಗವಾಗಿ ರಾಜಕೀಯ ನಾಯಕರು ಶುಭಾಶಯ ಕೋರಿದ್ದಲ್ಲದೇ, ರೈತರ ಶ್ರಮವನ್ನು ಸ್ಮರಿಸಿದ್ದಾರೆ. ಮುಂದೆ ಓದಿ...

Kisan Diwas 2021: Political Leaders Extends Greeting to Farmers on National Farmers Day


ಸಿಎಂ ಬಸವರಾಜ ಬೊಮ್ಮಾಯಿ ಶುಭಾಶಯ
ಮಾಜಿ ಪ್ರಧಾನಿ ದಿ. ಚೌಧರಿ ಚರಣ್ ಸಿಂಗ್‌ರವರ ಜಯಂತಿಯಂದು ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಹೃತ್ಪೂರ್ವಕ ಶುಭಾಶಯಗಳು. ಅನ್ನದಾತ ರೈತನೇ ದೇಶದ ಬೆನ್ನೆಲುಬು. ಕೃಷಿಕರ ಬದುಕು ಹಸನಾದಾಗಲೇ ಸಮೃದ್ಧ ರಾಜ್ಯದ ಗುರಿ ನನಸಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕೂ ಮಾಡಿದ್ದಾರೆ.

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು- ಮಾಜಿ ಪ್ರಧಾನಿ
ಭಾರತದ ಮಾಜಿ ಪ್ರದಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಸಂಕೇತವಾಗಿ ಈ ದಿನವನ್ನು "ರಾಷ್ಟ್ರೀಯ ರೈತ ದಿನಾಚರಣೆ'ಯಾಗಿ ಆಚರಿಸಲಾಗುತ್ತದೆ. ರೈತ ಪರ ಪ್ರಪ್ರಥಮ ಬಿಲ್ ಅನ್ನು ಮಂಡಿಸುವ ಮೂಲಕ ಅನ್ನದಾತರ ಹಿತ ಕಾಯುವ ಕೆಲಸ ಚರಣ್ ಸಿಂಗ್ ಮಾಡಿದ್ದರು.

ಭಾರತ ದೇಶವು ಕೃಷಿ ಆಧಾರಿತ ದೇಶ ಹಾಗೂ ಬೇಸಾಯ ಮನುಷ್ಯನ ಜೀವನಾಧಾರ ಎಂಬುದನ್ನು ಸದಾ ನೆನಪಿನಲ್ಲಿಡೋಣ. ಈ ನಿಟ್ಟಿನಲ್ಲಿ ಸರ್ಕಾರಗಳೂ ರೈತರ ಬೆನ್ನೆಲುಬಾಗಿ ನಿಂತು ಅರಿವು ಮೂಡಿಸಿದಾಗ ರೈತ ದಿನಾಚರಣೆ ಸಾರ್ಥಕವಾಗಲಿದೆ. ಸಮಸ್ತ ಅನ್ನದಾತರಿಗೆ "ರೈತ ದಿನಾಚರಣೆ'ಯಂದು ನನ್ನ ಕೃತಜ್ಞತಾ ಪೂರ್ವಕ ನಮನಗಳು ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಕೂ ಮಾಡಿದ್ದಾರೆ.

Kisan Diwas 2021: Political Leaders Extends Greeting to Farmers on National Farmers Day


ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಶುಭಾಶಯ
ನಾಡಿನ ಸಮಸ್ತ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಶುಭಾಶಯಗಳು ಹಾಗೂ ನಮ್ಮ ರಾಷ್ಟ್ರದ ಕೃಷಿ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್‌ ಸಿಂಗ್‌ ಅವರ ಜಯಂತಿಯಂದು ಆ ಮಹಾನ್‌ ಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಜಯಂತಿಯಂದು ಅವರಿಗೆ ನಮನಗಳು. ಅವರ ಗೌರವಾರ್ಥ ಇಂದು ಆಚರಿಸಲಾಗುತ್ತಿರುವ ರಾಷ್ಟ್ರೀಯ ರೈತರ ದಿನದಂದು ನಾಡಿನ ಎಲ್ಲ ನೇಗಿಲ ಯೋಗಿಗಳಿಗೆ ಶುಭಕಾಮನೆಗಳು. ರೈತರ ಏಳಿಗೆಯಲ್ಲಿಯೇ ನಾಡಿನ ಏಳಿಗೆ ಅಡಗಿದೆ. ನಮ್ಮ ಸ್ವಾವಲಂಬಿ ರೈತರ ಕಠಿಣ ಪರಿಶ್ರಮಗಳನ್ನು ಸದಾ ಕೃತಜ್ಞತೆಯಿಂದ ಗೌರವಿಸೋಣ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

Kisan Diwas 2021: Political Leaders Extends Greeting to Farmers on National Farmers Day

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಅನ್ನಕ್ಕೆ ಬೆಲೆಕಟ್ಟಲಾಗದು, ಅನ್ನದಾತನ ಋಣವನ್ನು ತೀರಿಸಲಾಗದು. ನಾವು ತಿನ್ನುವ ಪ್ರತಿ ಅಗುಳಿನಲ್ಲೂ ರೈತನ ಅಪಾರ ಪರಿಶ್ರಮ ಅಡಗಿದೆ. ರಾಷ್ಟ್ರೀಯ ರೈತ ದಿನದಂದು ಎಲ್ಲ ರೈತಬಾಂಧವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್
ಜಗತ್ತಿಗೆ ಅನ್ನ ನೀಡುವ ರೈತನಿಗೆ ಮನಃಪೂರ್ವಕ ಕೃತಜ್ಞತೆಗಳು. ನಾಡಿನ‌ ಸಮಸ್ತ ಅನ್ನದಾತರಿಗೆ "ರಾಷ್ಟ್ರೀಯ ರೈತ ದಿನಾಚರಣೆ'ಯ ಶುಭಾಶಯಗಳು. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಜಯಂತಿಯಂದು ಗೌರವ ನಮನಗಳು ಎಂದು ಕರ್ನಾಟಕ ಕೃಷಿ ಸಚಿವ ಬಿ.ಸಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಸಾರಿಗೆ ಸಚಿವ ಬಿ. ಶ್ರೀರಾಮುಲು ಶುಭಾಶಯ
ನಾಡಿನ ಸಮಸ್ತ ರೈತ ಬಾಂಧವರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳು. ರೈತರ ಕಲ್ಯಾಣ ಹಾಗೂ ಏಳಿಗೆಗಾಗಿ ನಮ್ಮ ಪಕ್ಷ ಬದ್ಧವಾಗಿದ್ದು, ರೈತರ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಶುಭಾಶಯ ತಿಳಿಸಿದ್ದಾರೆ.

Recommended Video

      ಸುಳ್ಳು ಸುದ್ದಿ ಹರಡುತ್ತಿದ್ದ ಪಾಕ್ ಚಾನೆಲ್ ಗಳ ಮೇಲೆ ಭಾರತ ಸರ್ಕಾರದ ಸರ್ಜಿಕಲ್ ಸ್ಟ್ರೈಕ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+