• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣಸಗಿರಿಯಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಖಾರಲ್ಯಾಂಡ್ ಕಾಮಗಾರಿಗೆ ಶಿಲಾನ್ಯಾಸ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ನವೆಂಬರ್‌, 17: ಖಾರಲ್ಯಾಂಡ್ ಕಾಮಗಾರಿಯಿಂದ ಉತ್ತರ ಕನ್ನಡದ ಕರಾವಳಿಯಲ್ಲಿ 25 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಉಳಿಯುವಂತಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕಾರವಾರ ತಾಲೂಕಿನ ಕಣಸಗಿರಿಯಲ್ಲಿ ಗುರುವಾರ ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂಪಾಯಿ ವೆಚ್ಚದಲ್ಲಿ ಖಾರಲ್ಯಾಂಡ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಪ್ಪು ನೀರು ನುಗ್ಗಿ ಸಮಸ್ಯೆಗೊಳಗಾದ ಜಮೀನಿನ ಪುನಶ್ಚೇತನಗೊಳಿಸುವ ಕಾರ್ಯಕ್ರಮ ಇದಾಗಿದೆ. ಇದರೊಟ್ಟಿಗೆ ನೀರು ಕೂಡುವ ಕೆಲಸವೂ ಆಗಲಿದೆ. 100, 200 ಹೆಕ್ಟೇರ್‌ಗಳಷ್ಟು ಅಚ್ಚುಕಟ್ಟು ಭೂಮಿ ಕೂಡ ಅಭಿವೃದ್ಧಿ ಆಗಲಿದೆ. ಈ ಕಾಮಗಾರಿಯಿಂದ ಜನತೆಗೆ ಓಡಾಡಕ್ಕೆ ದಾರಿ ಕೂಡ ಲಭ್ಯವಾಗಲಿದೆ. ನೀರು ಜಾಸ್ತಿ ಇದ್ದಲ್ಲಿ ಸೇತುವೆ, ಬ್ಯಾರೇಜ್ ಕೂಡ ನಿರ್ಮಾಣ ಮಾಡುತ್ತೇವೆ. ಜನತೆಗೆ ಸಂಚಾರಕ್ಕೂ ಅನುಕೂಲ ಆಗುವಂತೆ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿದರು.

ಸಂರಕ್ಷಿತಾರಣ್ಯದಲ್ಲಿಯೇ ಮರಗಳ ಮಾರಣ ಹೋಮ: ಕಣ್ಮುಚ್ಚಿ ಕುಳಿತ ಅರಣ್ಯಾಧಿಕಾರಿಗಳುಸಂರಕ್ಷಿತಾರಣ್ಯದಲ್ಲಿಯೇ ಮರಗಳ ಮಾರಣ ಹೋಮ: ಕಣ್ಮುಚ್ಚಿ ಕುಳಿತ ಅರಣ್ಯಾಧಿಕಾರಿಗಳು

ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಬೃಹತ್ ನೀರಾವರಿ ಯೋಜನೆ ರೂಪಿಸಲು ಅವಕಾಶ ಇಲ್ಲ. ಇಲ್ಲಿ ಸಣ್ಣ ನೀರಾವರಿ ಇಲಾಖೆಯಿಂದಲೇ ರೈತರಿಗೆ ಅನುಕೂಲ ಕಲ್ಪಿಸುವ ಪ್ರಯತ್ನ ನಡೆಯಬೇಕು. ಇಲ್ಲಿ ನೀರಾವರಿಗಾಗಿ ಕೆರೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಕೆರೆಗಳಿದ್ದಿದ್ದರೆ ನೀರಾವರಿಗೆ ಮತ್ತಷ್ಟು ಅನುಕೂಲ ಆಗುತ್ತಿತ್ತು. ಇಡೀ ರಾಜ್ಯ ಸರ್ವಾಂಗೀಣ ಅಭಿವೃದ್ಧಿ ಆಗದೆ ಇದ್ದಲ್ಲಿ, ನಾವು ಅಭಿವೃದ್ಧಿಯಾಗಿದ್ದೇವೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದರು.

ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಆಗಬೇಕು

ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಆಗಬೇಕು

ಪ್ರತಿ ಮನುಷ್ಯ ಇನ್ನೊಬ್ಬರ ಹಂಗಿನಲ್ಲಿ ಇರದೆ ಸ್ವಾವಲಂಬಿಯಾಗಿ ಬದುಕಬಲ್ಲ. ಸ್ವಾಭಿಮಾನಿಯಾಗಿ ಬದುಕಬಲ್ಲೇ ಎಂದಾದಾಗ ಮಾತ್ರ ಸ್ವತಂತ್ರರು ಎಂದು ಹೇಳಿಕೊಳ್ಳಲು ಸಾಧ್ಯ. ಆಳುತ್ತಿರುವವರು ಆಳುತ್ತಲೇ ಇದ್ದಾರೆ. ಉಳುಮೆ ಮಾಡುವವರು ಉಳುಮೆ ಮಾಡುತ್ತಲೇ ಇದ್ದಾರೆ. ಈ ಸ್ಥಿತಿ ಮುಂದುವರಿಯಬಾರದು. ಪ್ರತಿಯೊಬ್ಬರೂ, ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಆಗಬೇಕು. ನಾವೆಲ್ಲ ಒಂದೇ ಎನ್ನುವ ಭಾವನೆ ಇರಬೇಕು. ಕಷ್ಟ ಇರುವಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು. ಇದು ನಮ್ಮ ಸರ್ಕಾರದ ಧ್ಯೇಯವಾಗಿದೆ ಎಂದರು.

ಉಪ್ಪು ನೀರಿನಿಂದ ಬೇಸತ್ತಿದ್ದ ರೈತ

ಉಪ್ಪು ನೀರಿನಿಂದ ಬೇಸತ್ತಿದ್ದ ರೈತ

ನಂತರ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಮಾತನಾಡಿ, ಉಪ್ಪು ನೀರಿನಿಂದ ಹೊಲ, ಗದ್ದೆಗಳಲ್ಲಿ ಕೃಷಿ ಮಾಡಲು ರೈತರಿಗೆ ಸಾಧ್ಯವಾಗುತ್ತಿರಲಿಲ್ಲ. ಬಾವಿಗಳ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಖಾರ್‌ಲ್ಯಾಂಡ್‌ ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಈ ಭೂಮಿ ಕೃಷಿಗೆ ಯೋಗ್ಯವಾಗಲಿದೆ. ಬಾವಿಗಳಲ್ಲಿ ಕುಡಿಯುವ ನೀರು ಸಿಗಲಿದೆ. ಹಿಂದೆ ರಾಮಕೃಷ್ಣ ಹೆಗ್ಗಡೆ ಅವರ ಕಾಲದಲ್ಲಿ ನಾವು ಈ ಖಾರಲ್ಯಾಂಡ್‌ ಪದವನ್ನು ಕೇಳಿದ್ದೆವು. ಅವರ ಅಧಿಕಾರಾವಧಿಯಿಂದ ಇಲ್ಲಿಯವರೆಗೆ ಇಂತಹ ಖಾರಲ್ಯಾಂಡ್ ಕಾಮಗಾರಿಗಳು ಆಗಿರಲಿಲ್ಲ. ಯಾವ ಶಾಸಕರೂ ಈ ಬಗ್ಗೆ ಗಮನಹರಿಸಿರಲಿಲ್ಲ. ಉಪ್ಪು ನೀರು ಹೊಲ ಗದ್ದೆಗಳಿಗೆ ಹೋಗುವುದರಿಂದ ರೈತರಿಗೆ ಬೆಳೆಗಳನ್ನು ಬೆಳೆಯಲು ತೊಂದರೆ ಆಗುತ್ತಿತ್ತು. ಈ ತೊಂದರೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದೆ. ಮನವಿಯನ್ನು ಸ್ವೀಕರಿಸಿದ ಸರ್ಕಾರ ಖಾರಲ್ಯಾಂಡ್ ಕಾಮಗಾರಿಗೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಮೂಲೆಮೂಲೆಗು ತಲುಪುತ್ತಿವೆ. ಇನ್ನೂ ಅನೇಕ ಅಭಿವೃದ್ಧಿ ಯೋಜನೆಗಳು ಜನರನ್ನು ತಲುಪುವ ಹಂತದಲ್ಲಿವೆ. ರಾಜ್ಯ ಸರ್ಕಾರವೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದರು.

ಶಾಸಕಿಯ ಕಾರ್ಯದ ಬಗ್ಗೆ ಸಚಿವರು ಹೇಳಿದ್ದೇನು?

ಶಾಸಕಿಯ ಕಾರ್ಯದ ಬಗ್ಗೆ ಸಚಿವರು ಹೇಳಿದ್ದೇನು?

ಕ್ಷೇತ್ರದಲ್ಲಿನ ಯೋಜನೆಗಳಿಗೆ, ಜನತೆಗೆ ಅನುಕೂಲ ಕಲ್ಪಿಸಲು ಸರ್ಕಾರದಿಂದ ಹಣ ತರುವಲ್ಲಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಮುಂದಿದ್ದಾರೆ. ಜನತೆಗೆ ಬೇಕಾಗಿರುವುದನ್ನು ನೀಡುತ್ತಾರೆ. ಅಭಿವೃದ್ಧಿಯ ಆಸೆ, ಕನಸುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ, ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಸಫಲರಾಗಿದ್ದಾರೆ ಎಂದು ರೂಪಾಲಿ ನಾಯ್ಕ ಅವರನ್ನು ಪ್ರಶಂಸಿಸಿದರು. ಅಲ್ಲದೇ ಮುಂದಿನ ಬಾರಿಯೂ ರೂಪಾಲಿ ಅವರನ್ನು ಗೆಲ್ಲಿಸುವಂತೆ ಜನರಿಗೆ ಮನವಿ ಮಾಡಿದರು.

ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಡ

ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಡ

ಖಾರಲ್ಯಾಂಡ್ ಕಾಮಗಾರಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ರೂಪಾಲಿ ನಾಯ್ಕ ಒತ್ತಡ ಹೇರಿದ್ದರು. ಈ ಕಾಮಗಾರಿ ಶಿಲಾನ್ಯಾಸದಿಂದ ಅವರಿಗೂ ಸಮಾಧಾನ ಆಗಿದೆ. ಅವರನ್ನು ಮತ್ತೆ ಗೆಲ್ಲಿಸುತ್ತೀರಿ ಎಂಬ ಭರವಸೆ ನನಗೆ ಇದೆ. ಬರಿ ರಾಜಕೀಯ ಮಾಡುವವರಿಗಿಂತ ಅಭಿವೃದ್ಧಿಪರವಾಗಿರುವ ರೂಪಾಲಿ ಜನರ ಮನಸನ್ನು ಗೆದ್ದಿದ್ದಾರೆ. ಅವರು ಮುಖ್ಯಮಂತ್ರಿಗಳ ಎದುರು ಅರ್ಜಿ ಹಿಡಿದು ಹೋದರೆ ತಕ್ಷಣ ಸಹಿ ಬೀಳುತ್ತದೆ. ಎಲ್ಲ ಇಲಾಖೆಗಳಿಂದಲೂ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವಲ್ಲಿ ಸಫಲರಾಗಿದ್ದಾರೆ ಎಂದರು.

English summary
Minister J C Madhuswamy said in Kanasagiri foundation of Kharaland work at cost of 12 crore rupees, 25 thousand hectares of agricultural land saved by Kharaland work. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X