ಅಧಿಕಾರಿಗಳಿಗೆ ಲಂಚ ಕೊಡಬೇಕೆಂದು ರೈತ ಕುಟುಂಬದಿಂದ ಭಿಕ್ಷಾಟನೆ

ಹೈದರಾಬಾದ್, ಡಿಸೆಂಬರ್ 20: ಆತ ರೈತ. ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಅನ್ನದಾತ. ತನ್ನ ಹೆಂಡತಿ, ಇಬ್ಬರು ಪುಟ್ಟ ಮಕ್ಕಳ ಜತೆಗೂಡಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ, ಮೊತ್ಕೂರ್ ಹಳ್ಳಿಯ ಮಾರುಕಟ್ಟೆಗಳಲ್ಲಿ ಕೈಯಲ್ಲಿ ಪಾತ್ರೆ ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ.

ಅಂದಹಾಗೆ, ಅವರು ಭಿಕ್ಷೆ ಬೇಡುತ್ತಿರುವುದು ಊಟಕ್ಕೆ ಹಣ ಇಲ್ಲ ಎಂಬ ಕಾರಣಕ್ಕೆ ಅಲ್ಲ. ತಮ್ಮದೇ ನೆಲವನ್ನು ವಾಪಸ್ ಪಡೆಯಲು ಸರಕಾರಿ ಅಧಿಕಾರಿಗೆ ಲಂಚ ನೀಡಬೇಕು ಎಂಬ ಕಾರಣಕ್ಕೆ ಭಿಕ್ಷೆ ಬೇಡುತ್ತಿದ್ದಾರೆ. ರಾಯಲಸೀಮೆ ವಿಭಾಗದ ಸಣ್ಣ ಪ್ರಮಾಣದ ರೈತ ಅವರು. ಮಾನ್ಯಂ ವೆಂಕಟೇಶ್ವರುಲು ಅಥವಾ ರಾಜು ಆ ಅಸಹಾಯಕ ರೈತರ ಹೆಸರು.

ದಯವಿಟ್ಟು ದಾನ ಮಾಡಿ. ಆಗ ನಾನು ಲಂಚ ಕೊಡಬಹುದು. ನೀವು ಹಣ ನೀಡಿದರೆ ನನ್ನ ಕೆಲಸ ಆಗುತ್ತದೆ. ಹಣ ಹೊಂದಿಸಲಾಗದೆ ನನ್ನ ಭೂಮಿ ಕಳೆದುಕೊಂಡಿದ್ದೀನಿ. ಕಳೆದ ಎರಡು ವರ್ಷಗಳಿಂದ ಕಷ್ಟ ಪಡುತ್ತಾ ಇದ್ದೀನಿ ಎಂದು ಮೂವತ್ತೈದು ವರ್ಷದ ರಾಜು ಹೇಳುತ್ತಾರೆ. ಅಷ್ಟೇ ಅಲ್ಲ, ತನ್ನ ಕುಟುಂಬದವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Karnool farmer, family turn to begging to arrange bribe to get land back

ಈ ಕುಟುಂಬವು, ನಮ್ಮ ಭೂಮಿ ವಾಪಸ್ ಪಡೆಯಲು ಲಂಚ ಕೊಡಬೇಕು. ಅದಕ್ಕೆ ಹಣವಿಲ್ಲ ಎಂದು ತೆಲುಗು ಒಕ್ಕಣೆ ಇರುವ ಬ್ಯಾನರ್ ಹಾಗೂ ಭಿತ್ತಿಪತ್ರ ಹಿಡಿದು, ಅಡ್ಡಾಡುತ್ತಿದೆ. ಬ್ಯಾನರ್ ನಲ್ಲಿ ರೈತನ ಇಬ್ಬರ ಸಣ್ಣ ಮಕ್ಕಳಾದ ಸುಚಿ, ಸುಜಿತ್ ಹೆಸರು ಇದೆ. ಇನ್ನು ಈ ಕುಟುಂಬದ ಕಡೆಯಿಂದ ತಮಗಾದ ಅವಮಾನಕ್ಕೆ ಆಡಳಿತದಿಂದ ಪ್ರತೀಕಾರ ತೆಗೆದುಕೊಳ್ಳಬಹುದು ಎಂಬ ಆತಂಕವೂ ಇದೆ.

ರಾಜು ಹೇಳುವ ಪ್ರಕಾರ, ಕರ್ನೂಲ್ ಜಿಲ್ಲೆಯಲ್ಲಿ ಆತನ ಇಪ್ಪತ್ತೆರಡು ಎಕರೆ ಜಮೀನನ್ನು ಸಂಬಂಧಿಕರು ಕಸಿದುಕೊಂಡಿದ್ದಾರೆ. ಆ ಸಮಯದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಗಳು ನೆರವು ನೀಡಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಹೋದರೆ, ಆ ಕಡತ ಜಿಲ್ಲಾಧಿಕಾರಿ ಬಳಿ ಇದೆ. ದುಡ್ಡಿಗಾಗಿ ಅದನ್ನು ಹಸ್ತಾಂತರ ಮಾಡಿದ್ದಾಗಿ ಹೇಳಿದ್ದಾರೆ.

ಇದರಿಂದ ಹತಾಶಗೊಂಡ ರೈತ ರಾಜು ವಿಶಿಷ್ಟ ಪ್ರತಿಭಟನೆ ಆರಂಭಿಸಿದ್ದಾರೆ. ಆ ಮೂಲಕ ತನ್ನ ಸ್ಥಿತಿಯನ್ನು ತಿಳಿಸಲು ಯತ್ನಿಸುತ್ತಿದ್ದಾರೆ. ಇನ್ನು ಕರ್ನೂಲ್ ನ ಜಿಲ್ಲಾಧಿಕಾರಿ ಎಸ್.ಸತ್ಯನಾರಾಯಣ ಮಾತನಾಡಿ, ರಾಜು ಮಾಡುತ್ತಿರುವ ಆರೋಪ ಆಧಾರರಹಿತವಾದದ್ದು. ಇಲಾಖೆಗೆ ಕೆಟ್ಟ ಹೆಸರು ತರುತ್ತಿರುವ ರಾಜು ವಿರುದ್ಧ ಪೊಲೀಸರು ದೂರು ದಾಖಲಿಸಲು ಹೇಳಿದ್ದೇವೆ. ಕುಟುಂಬದಲ್ಲಿ ಭೂಮಿ ವ್ಯಾಜ್ಯ ಇದ್ದರೆ ಕೋರ್ಟ್ ಗೆ ಹೋಗಲಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+