ಭಾರತ್ ಬಂದ್: ನಾವೆಲ್ಲಾ ಕೃಷಿ ಮೇಲೇಯೇ ಬದುಕುತ್ತಿರುವುದು; ಸುನಂದ ಜಯರಾಂ
ನವದೆಹಲಿಯಲ್ಲಿ ರೈತ ಚಳವಳಿ ಬುಧವಾರಕ್ಕೆ 300 ದಿನ ಪೂರೈಸಿದೆ. ಕಳೆದ ವರ್ಷ ನವೆಂಬರ್ ಮಾಸದಲ್ಲಿ ರೈತರು ದಿಲ್ಲಿ ಚಲೋ ಜಾಥಾ ಹಮ್ಮಿಕೊಂಡಿದ್ದರು. ದಿಲ್ಲಿ ಗಡಿಗಳಲ್ಲಿ ರೈತರನ್ನು ತಡೆಹಿಡಿಯಲಾಯಿತು. ಪ್ರಭುತ್ವ ರಸ್ತೆಗಳಲ್ಲಿ ಕಂದಕ ತೋಡಿತು. ಅಶ್ರುವಾಯು ಸಿಡಿಸಿತು. ವಾಟರ್ ಜೆಟ್‌ಗಳನ್ನು ಹಾರಿಸಿತು. ರೈತರು ಧೃತಿಗೆಡಲಿಲ್ಲ. ದಿಲ್ಲಿ ಗಡಿಗಳಲ್ಲೇ ಮೊಕ್ಕಾಂ ಹೂಡಿದರು. ಅಂದಿನಿಂದ ಇಂದಿನವರೆಗೆ ಶಾಂತಿಯುತ ಚಳವಳಿಯಲ್ಲಿ ತೊಡಗಿದ್ದಾರೆ.
ಇದೀಗ ದಿಲ್ಲಿ ರೈತ ಚಳವಳಿಯ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ರೈತರು ಕರೆ ಕೊಟ್ಟಿದ್ದಾರೆ. ರೈತರ ಪರವಾಗಿ ವಿವಿಧ ಸಾಮಾಜಿಕ ಸಂಘಟನೆಗಳು ಸೇರಲಿವೆ ಎಂಬ ಆಶಾಭಾವನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ವ್ಯಕ್ತಪಡಿಸಿದೆ. ಸೆ.27ರಂದು ರೈತರು ಕರೆ ನೀಡಿರುವ ಭಾರತ್ ಬಂದ್ ತಯಾರಿ ಬಗ್ಗೆ ಒನ್ಇಂಡಿಯಾ ಕನ್ನಡ ರೈತ ಮುಖಂಡರನ್ನು ಮಾತನಾಡಿಸಿದಾಗ...
ಇನ್ನು ಈ ಭಾರತ್ ಬಂದ್‌ಗೆ ಸಂಬಂಧಿಸಿದಂತೆ ರೈತ ಮುಖಂಡೆ ಸುನಂದ ಜಯರಾಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ್ ಬಂದ್ ಯಶಸ್ವಿ ಮಾಡುವಂತೆ ಮನವಿ ಮಾಡಿದ್ದಾರೆ.

ಸುನಂದ ಜಯರಾಂ, ರೈತ ಮುಖಂಡರು
"ಭಾರತ್ ಬಂದ್‌ಗೆ ಕರೆ ಏನು ನೀಡಿದ್ದೀವಿ, ನಾವೆಲ್ಲರೂ ಒಟ್ಟಾಗಿ ಕರ್ನಾಟಕದಾದ್ಯಂತ ಚಳವಳಿಯಲ್ಲಿ ತೊಡಗಿದ್ದೇವೆ. ಸರ್ಕಾರ ಈಗ ಮೂರು ಕೃಷಿ ಕಾಯಿದೆಗಳನ್ನು ಏನು ತಂದಿದೆ, ಅದರ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನ ನಡೀತಿದೆ. ಇಡೀ ದೇಶ ಕೃಷಿ ಆಧಾರಿತ ದೇಶ. ರೈತರು, ಕೃಷಿ ಕೂಲಿಗಳು, ನಾಗರಿಕ ಬಂಧುಗಳು ಕೃಷಿ ಮೇಲೇಯೇ ಬದುಕುತ್ತಿರುವುದು. ಅದೇ ರೀತಿ ಉದ್ದಿಮೆಗಳು ಕೂಡಾ, ಕೈಗಾರಿಕೆಗಳೂ ಕೂಡಾ. ಇಂಥದೊಂದು ಬೃಹತ್ ಕ್ಷೇತ್ರವನ್ನು ಹದಗೆಡಿಸುವ ಕಾಯಿದೆಗಳನ್ನು ತಂದಿರುವುದನ್ನು ನಾವೆಲ್ಲಾ ವಿರೋಧ ಮಾಡಲೇಬೇಕು. ಬಂದ್ ರೂಪದಲ್ಲಿಯೂ ಕೂಡಾ."
"ಈ ಕರಾಳ ಕಾಯಿದೆಗಳನ್ನು ನಾವೆಲ್ಲಾ ವಿರೋಧ ಮಾಡದೆ ಹೋದರೆ ಮುಂದಿನ ಜನಾಂಗಕ್ಕೆ ನಾವು ದ್ರೋಹ ಮಾಡಿದಂಗಾಗುತ್ತದೆ. ಪಕ್ಷಗಳ ಭೇದ ಮರೆತು ಎಲ್ಲಾ ಜನಪರ ಸಂಘಟನೆಗಳು, ವಿಚಾರವಂತರು, ನಾಗರೀಕರು ಇದನ್ನು ವಿರೋಧಿಸಬೇಕು. ಭಾರತ್ ಬಂದ್ ಯಶಸ್ವಿಗೊಳಿಸಬೇಕು."
"ಕರ್ನಾಟಕ ಬಂದ್ ಯಾವ ಕಾರಣಕ್ಕಾಗಿ ಮಾಡ್ತಿದ್ದೀವಿ ಅನ್ನೋದನ್ನು ಜನ ಸಾಮಾನ್ಯರಿಗೆ ತಿಳಿಸಿದ್ದೀವಿ. ಸರ್ಕಾರ ಈಗಲಾದರೂ ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು ಎಂದು ನಿಮ್ಮ ಮಾಧ್ಯಮದ ಮೂಲಕ ಒತ್ತಾಯ ಮಾಡುತ್ತೇನೆ."
"ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಒಟ್ಟಾರೆ 112 ಸಂಘಟನೆಗಳು ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ರೈತ ಮುಖಂಡರು ಹೇಳಿದ್ದಾರೆ. ಕರ್ನಾಟಕದಲ್ಲಿ ಇದನ್ನು ಯಶಸ್ವಿ ಮಾಡಲು ಬೇಕಾದ ತಯಾರಿ ನಡೆಸಿದ್ದೇವೆ, ಬೆಂಗಳೂರು ಸೇರಿದಂತೆ ಜಿಲ್ಲಾವಾರು ತಾಲ್ಲೂಕುವಾರು ಬಂದ್‌ಗೆ ಬೇಕಾದ ಎಲ್ಲಾ ತಯಾರಿ ನಡೆದಿದೆ. ಇದಕ್ಕೊಂದು ತಂಡ ಮಾಡಿದ್ದೇವೆ. ಎಲ್ಲರೂ ಸೇರಿ ಭಾರತ್ ಬಂದ್ ಯಶಸ್ವಿ ಮಾಡ್ತೀವಿ," ಎಂದು ಹೇಳಿದ್ದಾರೆ.
"ಭಾರತ್ ಬಂದ್ ಪ್ರಕ್ರಿಯೆ ಬಹಳ ಜೋರಾಗಿ ನಡೆದಿದೆ. ಇಡೀ ರಾಜ್ಯ ಪ್ರವಾಸ ಕೈಗೊಂಡಿದ್ದೇವೆ. ಎಲ್ಲಾ ಕಡೆ ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಬಂದ್ ಮಾಡಲಿಕ್ಕೆ ತಯಾರಿ ನಡೀತಿದೆ. ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ತೆಗೆದುಕೊಂಡಿದ್ದೇವೆ. ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಮಹಿಳೆಯರು, ದಲಿತ ಸಂಘಟನೆಗಳು ಹೀಗೆ ಎಲ್ಲಾ ಸಂಘಟನೆಗಳೂ ಭಾರತ್ ಬಂದ್ ಮಾಡಲು ಸ್ವಯಂಪ್ರೇರಣೆಯಿಂದ ಮುಂದೆ ಬಂದಿವೆ."
"ರೈತರ ಸಮಸ್ಯೆಗಳ ಜೊತೆ ಇನ್ನೂ ಅನೇಕ ವಿಷಯಗಳಿವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಸೇರಿದಂತೆ ಪ್ರಜಾಪ್ರಭುತ್ವ ಹರಣ ಆಗುತ್ತಿರುವ ಬಗ್ಗೆ ದೇಶವ್ಯಾಪಿ ಆತಂಕವಿದೆ. ಹೀಗೆ ಎಲ್ಲಾ ವಿಷಯಗಳನ್ನೊಳಗೊಂಡಂತೆ ಸಂಯುಕ್ತ ಕಿಸಾನ್ ಮೋರ್ಚಾ ಈ ಬಂದ್‌ಗೆ ಕರೆ ನೀಡಿರುವುದು. ನಾವು ಭೇಟಿ ಮಾಡುತ್ತಿರುವ ಎಲ್ಲರಿಗೂ ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಕೋರುತ್ತಿದ್ದೇವೆ. ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಭಾರತ್ ಬಂದ್ ಯಶಸ್ವಿಯಾಗುತ್ತದೆ," ಎಂದು ರೈತ ಮುಖಂಡರು ತಿಳಿಸಿದ್ದಾರೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications