8ನೇ ಸುತ್ತಿನ ಮಾತುಕತೆಯಲ್ಲಾದರೂ ರೈತರ ಸಮಸ್ಯೆ ಬಗೆಹರಿಯುವ ವಿಶ್ವಾಸ

ನವದೆಹಲಿ,ಜನವರಿ 08: ಇದೀಗ ಕೇಂದ್ರ ಸರ್ಕಾರದ ಜತೆ ರೈತರ ಎಂಟನೇ ಸುತ್ತಿನ ಮಾತುಕತೆ ನಡೆಯುತ್ತಿದ್ದು, ರೈತರ ಸಮಸ್ಯೆ ಬಗೆಹರಿಯುವ ವಿಶ್ವಾಸವನ್ನು ಕೇಂದ್ರ ಸಚಿವರು ನೀಡಿದ್ದಾರೆ.

ಇತ್ತೀಚೆಗಷ್ಟೇ ಪಂಜಾಬ್ ರಾಜ್ಯದ ಖ್ಯಾತ ಧಾರ್ಮಿಕ ಮುಖಂಡರಾದ ನಾನಕ್ಸರ್ ಗುರುದ್ವಾರ ಮುಖ್ಯಸ್ಥ ಬಾಬಾ ಲಖಾ ಅವರು ಕೃಷಿ ಸಚಿವ ತೋಮರ್ ಅವರನ್ನು ಭೇಟಿಯಾಗಿ ಕೇಂದ್ರ ಮತ್ತು ಪ್ರತಿಭಟನಾ ನಿರತ ರೈತರ ನಡುವೆ ಮಧ್ಯಸ್ಥಿಕೆ ವಹಿಸಲು ಇಚ್ಛೆ ವ್ಯಕ್ತಪಡಿಸಿದ್ದರು.

ಸಚಿವ ಕೈಲಾಶ್ ಚೌಧರಿ ಅವರು, ಇಂದಿನ ಸಭೆಯಲ್ಲಿ ನಿರ್ಣಯ ಹೊರಬರುವ ವಿಶ್ವಾಸವಿದೆ. ರೈತರ ಮುಷ್ಕರ ಅಂತ್ಯ ಮಾಡುವ ಸಂಬಂಧ ಈ ಸಭೆ ನಡೆಸಲಿದ್ದೇವೆ. ಮೊದಲ ಸಭೆಯಲ್ಲಿ ನಡೆದ ಎಲ್ಲ ಅಂಶಗಳ ಕುರಿತೂ ಇಲ್ಲಿ ಚರ್ಚೆ ನಡೆಸುತ್ತೇವೆ. ಮೊದಲಸಭೆಯಲ್ಲಿ ರೈತರು ಕೃಷಿ ಕಾನೂನುಗಳ ಹಿಂಪಡೆಯುವಿಕೆ ಕುರಿತು ಆಗ್ರಹಿಸಿರಲಿಲ್ಲ.

Just Before Talks, Govt Says Hopeful Of Resolving Farmers Issues

ಆದರೆ ಆ ಬಳಿಕ ಕೆಲ ರಾಜಕೀಯ ಏಜೆಂಟರ ಮಧ್ಯ ಪ್ರವೇಶದಿಂದಾಗಿ ರೈತರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ. ಮುಂದೆ ಕೀಟನಾಶಕ (ನಿರ್ವಹಣೆ) ಮಸೂದೆ ಮತ್ತು ಬೀಜ ಮಸೂದೆಗಳೂ ಕೂಡ ಬರಲಿದೆ.

ಆಗಲೂ ರೈತರನ್ನು ದಾರಿ ತಪ್ಪಿಸುವ ಕಾರ್ಯವಾಗಬಹುದು. ಹೀಗಾಗಿ ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದಿದೆ ಎಂದು ಹೇಳಿದರು.

ಪಂಜಾಬ್ ಧಾರ್ಮಿಕ ಮುಖಂಡರ ಜೊತೆಗಿನ ಸಭೆ ಕುರಿತು ಮಾತನಾಡಿದ ಸಚಿವರು, ನಾವು ಎಲ್ಲರನ್ನು ಸ್ವಾಗತಿಸುತ್ತೇವೆ. ನಮಗೆ ನಿರ್ಣಯಬೇಕು. ಅವರು ಆ ದಿಕ್ಕಿನಲ್ಲಿ ಮಾತನಾಡಲು ಸಿದ್ಧರಾಗಿದ್ದರೆ, ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+