ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಮಾರುಕಟ್ಟೆಯಲ್ಲಿ 'ಸಿಹಿ'ಯಾದ ಭಾರತದ ಸಕ್ಕರೆ; ಅಪ್ಘಾನಿಸ್ತಾನಕ್ಕೆ 'ಕಹಿ'

|
Google Oneindia Kannada News

ಅಪ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಭಾರತದಿಂದ ಹೋಗುತ್ತಿದ್ದ ಸಕ್ಕರೆ ಆಮದನ್ನು ತಡೆ ಹಿಡಿದಿದೆ. ಮುಂದಿನ ಸೀಸನ್ (ಋತು) ನಲ್ಲೂ ತರಿಸಿಕೊಳ್ಳುವ ನಿರೀಕ್ಷೆಯಿಲ್ಲ. ಆದಾಗ್ಯೂ ವಿಶ್ವದೆಲ್ಲೆಡೆ ಸಕ್ಕರೆ ಬೆಲೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಭಾರತದ ಸಕ್ಕರೆ ಕಾರ್ಖಾನೆಗಳು ಹರ್ಷಗೊಂಡಿವೆ. ರಿಫೈನರಿಗಳಲ್ಲಿ ರಾ ಶುಗರ್‌ಗೆ ಬೇಡಿಕೆ ಹೆಚ್ಚಿದೆ.

ಪ್ರತಿ ವರ್ಷ ಭಾರತದಿಂದ 10 ಲಕ್ಷ ಟನ್ ಸಕ್ಕರೆ ಅಪ್ಘಾನಿಸ್ತಾನಕ್ಕೆ ರಫ್ತಾಗುತ್ತಿತ್ತು. ಕಳೆದ ಖುತುವಿನಲ್ಲಿ 7 ಲಕ್ಷ ಟನ್ ರಫ್ತಾಗಿತ್ತು, ಆದರೀಗ ಅಪ್ಘಾನಿಸ್ತಾನಕ್ಕೆ ರಫ್ತಾಗುವ ಸೂಚನೆಗಳಿಲ್ಲ. ಹೀಗಿರುವಾಗ ಭಾರತದ ಸಕ್ಕರೆ ಕಾರ್ಖಾನೆಗಳು ಇತರೆ ದೇಶಗಳ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕು. ಈ ಬಗ್ಗೆ ನಾವು ಈಗಾಗಲೇ ಕಾರ್ಖಾನೆಗಳಿಗೆ ಸಲಹೆ ಕೊಟ್ಟಿದ್ದೇವೆ ಎಂದು ನ್ಯಾಷನಲ್ ಫೆಡರೇಶನ್ ಆಫ್ ಕೋ-ಆಪರೇಟೀವ್ ಶುಗರ್ ಫ್ಯಾಕ್ಟರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ನಾಯಕ ತಿಳಿಸಿದ್ದಾರೆ. ಭಾರತದ ಎಂಬೆಸಿ (ರಾಯಭಾರಿ) ಕಚೇರಿಯ ಕಾರ್ಯಚಟುವಟಿಕೆಗಳು ಅಪ್ಘಾನಿಸ್ತಾನದಲ್ಲಿ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಟ್ರೇಡರ್ಸ್ ಮತ್ತು ಮಿಲ್ಲರ್ಸ್ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದಾರೆ.

ಬ್ರೆಜಿಲ್‌ನಲ್ಲಿ ಬರ
ಬ್ರೆಜಿಲ್‌ನಲ್ಲಿ ಬರ ಎದುರಾಗಿರುವ ಕಾರಣ ಸಕ್ಕರೆ ವಹಿವಾಟಿನ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಸಕ್ಕರೆ ರಫ್ತುದಾರ ಅಭಿಜಿತ್ ಘೋರ್ಪಡೆ ಬ್ಯುಸಿನೆಸ್ ಲೈನ್ ಪತ್ರಿಕೆಗೆ ತಿಳಿಸಿದ್ದಾರೆ. ಬ್ರೆಜಿಲ್‌ನಲ್ಲಿ ಒಟ್ಟಾರೆ ಸಕ್ಕರೆ ಉತ್ಪಾದನೆ 50- 60 ಲಕ್ಷ ಟನ್ ಕಡಿಮೆ ಆಗಬಹುದೆಂಬ ನಿರೀಕ್ಷೆಯಿದೆ, ಭಾರತದ ಉತ್ಪಾದನೆ ಎಂದಿನಂತಿರಲಿದೆ. ಪ್ರಪಂಚದಾದ್ಯಂತ ರಿಫೈನರೀಸ್‌ಗಳಿಗೆ ರಾ ಶುಗರ್ ಬೇಡಿಕೆ ಹೆಚ್ಚಲಿದೆ. ದುಬೈ, ಸೌದಿ ಅರೇಬಿಯಾ ಮತ್ತು ಭಾರತದ ರಿಫೈನರಿಗಳು ಈಗಾಗಲೇ ತಮ್ಮ ಬೇಡಿಕೆಯನ್ನು ಇಟ್ಟಿವೆ.

Indias Sugar Has Demand Increased In The World Market

ಶ್ರೀಲಂಕಾಗೆ ಆಗುತ್ತಿದ್ದ ರಫ್ತಿನ ಮೇಲೆ ಕೂಡಾ ಫಾರಿನ್ ಕರೆನ್ಸ್ ಬಿಕ್ಕಟ್ಟಿನಿಂದಾಗಿ ತೊಡಕುಂಟಾಗಿದೆ. ಶ್ರೀಲಂಕಾಗೆ 40- 50 ಸಾವಿರ ಟನ್ ಸಕ್ಕರೆಯನ್ನು ಪ್ರತಿ ತಿಂಗಳು ರಫ್ತು ಮಾಡಲಾಗುತ್ತಿತ್ತು. ಆದರೆ ಶ್ರೀಲಂಕಾದಲ್ಲಿ ಡಾಲರ್ ಬಿಕ್ಕಟ್ಟು ಬಹಳವಾಗಿದೆ. ಹೀಗಿರುವಾಗ ಸಕ್ಕರೆ ಕಾರ್ಖಾನೆಗಳು ರಾ ಶುಗರ್ ಸರಬರಾಜು ಮಾಡಲು ಚಿಂತಿಸಬೇಕು ಎಂದು ಘೋರ್ಪಡೆ ಸಲಹೆಯಿತ್ತರು.

ನಾಲ್ಕು ವರ್ಷಗಳಿಂದೀಚೆಗೆ ಇದೀಗ ಆಗಸ್ಟ್ 2021ಕ್ಕೆ ಪ್ರತಿ ಟನ್ ಸಕ್ಕರೆಗೆ 430 USDಗೆ ಏರಿರುವುದರಿಂದ ಮುಂದಿನ ಸಕ್ಕರೆ ಋತುವಿನಲ್ಲಿ ಒಳ್ಳೆಯ ಬೆಲೆ ಬರಬಹುದೆಂದು ಐಸಿಎಆರ್ ಊಹಿಸಿದೆ.

Indias Sugar Has Demand Increased In The World Market

ಮುಂದಿನ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಪ್ರತಿ ಟನ್‌ಗೆ 38,000 ರೂ. ಆಗಬಹುದೆಂಬ ನಿರೀಕ್ಷೆಯಿದೆ.

ಕೃಪೆ: ಬ್ಯುಸಿನೆಸ್ ಲೈನ್

English summary
The total sugar production in Brazil is expected to decrease by 50-60 lakh tonnes, but India's production is as usual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X