ಜಗತ್ತಿಗೆ ಕಾಫಿ ಕುಡಿಸಿದ ಭಾರತ, ರಫ್ತು ಗಣನೀಯ ಪ್ರಮಾಣದಲ್ಲಿ ಏರಿಕೆ

ಬೆಂಗಳೂರು, ಜನವರಿ 02: ಕಾಫಿ ಮತ್ತು ಟೀ ಭಾರತದಲ್ಲಿ ಅತಿ ಜನಪ್ರಿಯ ಪಾನೀಯಗಳು. ನಮ್ಮ ದೇಶ ಸಾಂಪ್ರದಾಯಿಕವಾಗಿ ಟೀ ರಫ್ತಿಗೆ ಬಹಳ ಪ್ರಸಿದ್ಧಿಯಾಗಿತ್ತು. ಆದರೆ ಈಗ ದೇಶ ಜಗತ್ತಿಗೆ ಕಾಫಿ ಕುಡಿಸುತ್ತಿದೆ. 2024ರಲ್ಲಿ ಗಣನೀಯ ಪ್ರಮಾಣದಲ್ಲಿ ದೇಶದಲ್ಲಿ ಕಾಫಿ ರಫ್ತು ಹೆಚ್ಚಾಗಿದೆ. ಈ ಕುರಿತು ಅಂಕಿ ಅಂಶಗಳು ಈಗ ಬಹಿರಂಗವಾಗಿದ್ದು, ಶೇ 29ರಷ್ಟು ರಫ್ತು ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

ಈ ವರ್ಷದ ನವೆಂಬರ್ ತನಕ ಭಾರತ $1.146.9 ಬಿಲಿಯನ್ ಕಾಫಿ ರಫ್ತು ಮಾಡಿದೆ ಎಂದು ಅಂಕಿ ಅಂಶಗಳು ಹೇಳಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಈ ಕುರಿತು ಮಾಹಿತಿಯನ್ನು ನೀಡಿದೆ. ಇದೇ ಮೊದಲ ಬಾರಿಗೆ ಕಾಫಿ ರಫ್ತಿನಲ್ಲಿ ಈ ಮಟ್ಟದ ಏರಿಕೆ ಕಂಡುಬಂದಿದೆ.

Indias Coffee Exports Registering 29 Per Cent Rise

ರಫ್ತು ಪ್ರಮಾಣ ಹೆಚ್ಚಳವಾಗಿರುವುದು ರೊಬಸ್ಟಾ ತಳಿಯ ಕಾಫಿ ದರದ ಏರಿಕೆಗೆ ಸಹ ಕಾರಣವಾಗಿದೆ. ಅದರಲ್ಲೂ ಈ ತಳಿಯ ಕಾಫಿಗೆ ಜಗತ್ತಿನ ವಿವಿಧ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಯುರೋಪಿಯನ್ ಒಕ್ಕೂಟದ ದೇಶಗಳಲ್ಲಿ ಅರಣ್ಯೀಕರಣ ನೀತಿ ಬದಲಾದ ಕಾರಣ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ವರದಿ ಅಂದಾಜಿಸಿದೆ.

ಕಳೆದ ವರ್ಷ ಎಷ್ಟು?; ಸಿಎಂಐಇ ಹೇಳುವಂತೆ 2023-24ನೇ ವರ್ಷದಲ್ಲಿ ಭಾರತದ ಕಾಫಿ ರಫ್ತು ಪ್ರಮಾಣ ಶೇ 12.22 ಆಗಿದೆ. 2022-23ರಲ್ಲಿ ದೇಶ $1.14 ಬಿಲಿಯನ್ ಕಾಫಿ ರಫ್ತು ಮಾಡಿದೆ.

ಭಾರತದ ಕಾಫಿಗೆ ಇಟಲಿ, ರಷ್ಯಾ, ಯುಎಇ, ಜರ್ಮನಿ ಮತ್ತು ಟರ್ಕಿ ಪ್ರಮುಖ ಮಾರುಕಟ್ಟೆಯಾಗಿದೆ. 2022-23ರಲ್ಲಿ ಭಾರತ ವಿಶ್ವದ ಕಾಫಿ ಉತ್ಪಾದನೆಯಲ್ಲಿ 8ನೇ ಸ್ಥಾನದಲ್ಲಿತ್ತು. ಗುಣಮಟ್ಟದ ಕಾರಣಕ್ಕೆ ಭಾರತದ ಕಾಫಿಗೆ ವಿವಿಧ ದೇಶಗಳಲ್ಲಿ ಭಾರೀ ಬೇಡಿಕೆ ಇದೆ.

ದೇಶದಲ್ಲಿ ಅರೇಬಿಕಾ ಮತ್ತು ರೊಬಸ್ಟಾ ತಳಿಯ ಕಾಫಿಯನ್ನು ಬೆಳೆಯಲಾಗುತ್ತದೆ. ವಿವಿಧ ಮಾದರಿ ಸ್ಟ್ರಾಂಗ್ ಕಾಫಿ ಮಾಡುವವರು ರೊಬಸ್ಟಾ ತಳಿಯ ಕಾಫಿ ಬೀಜವನ್ನು ಬಳಕೆ ಮಾಡುತ್ತಾರೆ. ಅತ್ಯುತ್ತಮ ಸುವಾಸನೆ ಹೊಂದಿರುವ ಅರೇಬಿಕಾ ಕಾಫಿಗೂ ಬೇಡಿಕೆ ಹೆಚ್ಚಾಗಿದೆ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಕಾಫಿಯಲ್ಲಿ ಶೇ 72ರಷ್ಟು ರೊಬಸ್ಟಾ ತಳಿಯಾಗಿದೆ.

ಕೇಂದ್ರ ಸರ್ಕಾರ 2024-25ನೇ ಸಾಲಿನಲ್ಲಿ ಭಾರತದಲ್ಲಿ ಕಾಫಿ ಉತ್ಪಾದನೆಯು ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಲೋಕಸಭೆಯಲ್ಲಿ ತಿಳಿಸಿತ್ತು. 2023-24ರಲ್ಲಿ 3.60 ಲಕ್ಷ ಟನ್ ಉತ್ಪಾದನೆಯಾಗಿತ್ತು. ಈ ಬಾರಿ 3.63 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಘೋಯಲ್ ಹೇಳಿದ್ದರು.

ಕಾಫಿ ಮಂಡಳಿ ದೇಶದಲ್ಲಿ ಕಾಫಿ ಉತ್ಪಾದನೆ ಹೆಚ್ಚಳಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಹೊಸ ಕಾಫಿ ಗಿಡಗಳನ್ನು ನೆಡುವುದು, ಗುಣಮಟ್ಟ ಅಭಿವೃದ್ಧಿ, ಕಾಫಿ ಬೆಳೆಯುವ ಪ್ರದೇಶಗಳ ವಿಸ್ತರಣೆ ಮುಂತಾದ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು.

ಭಾರತದ ಕಾಫಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಕಲ್ಪಿಸಲು ಮಂಡಳಿ ಕ್ರಮ ಕೈಗೊಂಡಿದೆ. ಜಾಗತಿಕ ಮಟ್ಟದ ಪ್ರದರ್ಶನಗಳಲ್ಲಿ ಕಾಫಿಯನ್ನ ಪ್ರದರ್ಶನ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ವಿವರಣೆ ನೀಡಿತ್ತು.

ಕಾಫಿ ಬೆಳೆಗಾರರಿಗೆ ನೆರವಾಗಲು ಅದನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತರಬೇಕು ಎಂದು ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯಾಗಿತ್ತು. ಆಗ ಸರ್ಕಾರ ಕೃಷಿ ಮತ್ತು ಬೆಲೆ ಆಯೋಗ (ಸಿಎಸಿಪಿ) ಶಿಫಾರಸು ಮಾಡಿರುವ 22 ಬೆಳೆಗಳನ್ನು ಮಾತ್ರ ಎಂಎಸ್‌ಪಿ ವ್ಯಾಪ್ತಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿತ್ತು.

ಕಾಫಿ-ಚಿಕೋರಿ ಮಿಶ್ರಣದ ಕುರಿತು ಸಹ ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರವು ನಿಯಮಗಳನ್ನು ರೂಪಿಸಿದೆ. ಕಾಫಿಗೆ ಮಿಶ್ರಣ ಮಾಡುವ ಒಟ್ಟಾರೆ ಪ್ರಮಾಣವು ಶೇ 51ಕ್ಕಿಂತ ಕಡಿಮೆ ಇರಬೇಕು ಎಂದು ಸರ್ಕಾರ ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+