ದೇಶದ ಕಬ್ಬು ಉತ್ಪಾದನೆ ಎಷ್ಟಿದೆ ಗೊತ್ತಾ?

ಮುಂಬೈ, ಜೂ.1: ಈ ವರ್ಷ ದೇಶದ ಕಬ್ಬು ಉತ್ಪಾದನೆಯಲ್ಲಿ ಶೇ.10 ಹೆಚ್ಚಳವಾಗಲಿದೆ ಎಂದು ಸಹಕಾರಿ ಒಕ್ಕೂಟ ತಿಳಿಸಿದೆ. ಕಬ್ಬು ಬೆಳೆಯುವ ಪ್ರದೇಶದ ವಿಸ್ತೀರ್ಣದಲ್ಲಿ ಹೆಚ್ಚಳ ಹಾಗೂ ಉತ್ತಮ ಇಳುವರಿಯ ಕಾರಣದಿಂದ 2010-11 ರ ಸಾಲಿನ ಕಬ್ಬು ಬೆಳೆ 300 ಮಿಲಿಯನ್ ಟನ್ ಗಳಿಗೇರಲಿದ್ದು ಹಿಂದಿನ ವರ್ಷದ ಕಬ್ಬು ಉತ್ಪಾದನೆ 274 ಮಿಲಿಯ ಟನ್ ಗಳಾಗಿತ್ತು.

ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ(NFCSF)ದ ಅಧ್ಯಕ್ಷ ವಿನಯ್ ಕುಮಾರ್ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಇಳುವರಿಯ ಕಬ್ಬನ್ನು ರೈತರು ಬೆಳೆಯ ತೊಡಗಿರುವುದರಿಂದ ಇಳುವರಿ ಪ್ರತೀ ಹೆಕ್ಟೇರ್ ಗೆ 55 ಟನ್ ಗಳಿಂದ 88 ಟನ್ ಗಳಿಗೇರಲಿದೆ.

ಕಳೆದ ವರ್ಷ ದೇಶದ ಸಕ್ಕರೆ ಉತ್ಪಾದನೆ 18.5 ಮಿಲಿಯ ಟನ್ ಗಳಾಗಿದ್ದು ಈ ವರ್ಷ ಮುಂಗಾರು ಸಾಮಾನ್ಯವಾಗಿದ್ದರೆ ಸಕ್ಕರೆ ಉತ್ಪಾದನೆ 24-25 ಮಿಲಿಯ ಟನ್ ಗಳಿಗೇರಲಿದೆ. ಕಳೆದ ವರ್ಷ ಸರ್ಕಾರ ಕಬ್ಬಿನ ನ್ಯಾಯಯುತ ಹಾಗೂ ಬೆಂಬಲ ಬೆಲೆಯನ್ನು ಪ್ರತೀ ಕ್ವಿಂಟಾಲ್ ಗೆ 129.84 ರುಪಾಯಿಗಳಂತೆ ನಿಗದಿಪಡಿಸಿದ್ದು ಬೆಳೆಗಾರರು ದಾಖಲೆಯ ರು.250 ರಂತೆ ಹಣ ಪಡೆದಿದ್ದಾರೆ. ಈ ವರ್ಷ ಸರ್ಕಾರ ಬೆಲೆಯನ್ನು ಕ್ವಿಂಟಾಲಿಗೆ ರೂ 139.12 ರಂತೆ ನಿಗದಿಪಡಿಸಿದೆ ಎಂದು ಅವರು ಹೇಳಿದರು.

ಅಧಿಕಾರೀ ಮೂಲಗಳ ಪ್ರಕಾರ ಮೇ ೨೮ ಕ್ಕೆ ದೇಶದಲ್ಲಿ ೪.೨೮ ಮಿಲಿಯ ಹೆಕ್ಟೇರ್ ಗಳಲ್ಲಿ ಕಬ್ಬು ಬಿತ್ತನೆ ಮಾಡಿದ್ದು ಹಿಂದಿನ ವರ್ಷ ೪.೦೭ ಮಿಲಿಯ ಹೆಕ್ಟೇರ್ ಗಳಲ್ಲಿ ಕಬ್ಬು ಬೆಳೆಯಲಾಗಿತ್ತು . ದೀರ್ಘಾವದೀ ಬೆಳೆಯಾದ ಕಬ್ಬನ್ನು ದಕ್ಷಿಣ ಭಾರತದಲ್ಲಿ ಜನವರಿ- ಫೆಬ್ರುವರಿ ಹಾಗೂ ಜುಲೈ ಆಗಸ್ಟ್ ನಲ್ಲಿ ಬಿತ್ತನೆ ಮಾಡಲಾಗುತಿದ್ದು , ಉತ್ತರ ಭಾರತದಲ್ಲಿ ಫೆಬ್ರುವರಿ ಮಾರ್ಚ್ ಮತ್ತು ಅಕ್ಟೋಬರ್ ನವೆಂಬರ್ ನಲ್ಲಿ ಬಿತ್ತನೆ ಮಾಡಲಾಗುತ್ತದೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+