ಗುಜರಾತಿಗಳಿಗೆ ಹಿಂದಿ ವಿದೇಶಿ ಭಾಷೆ, ನಮ್ಗೆ?

Gujarat HC
ಅಹ್ಮದಾಬಾದ್, ಜ.3: ಗುಜರಾತಿಗಳಿಗೆ ಹಿಂದಿ ವಿದೇಶಿ ಭಾಷೆಯಾಗಿದೆ ಎಂದು ಗುಜರಾತ್ ಹೈಕೋರ್ಟ್ ಆದೇಶವೊಂದರಲ್ಲಿ ಹೇಳಿದೆ. ಸರಕಾರಿ ಪ್ರಾಥಮಿಕ ಶಾಲೆಗಳಲ್ಲೂ ಗುಜರಾತಿಯನ್ನೇ ಕಲಿಸಲಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಜುನಾಗಢದ ರೈತರಿಗೆ ಹಿಂದಿಯಲ್ಲಿ ಸುತ್ತೋಲೆಯೊಂದನ್ನು ಪ್ರಕಟಿಸಿ ಕಳಿಸಿತ್ತು. ಇದನ್ನು ವಿರೋಧಿಸಿ ಜುನಾಗಢದ ರೈತರು ಸಲ್ಲಿಸಿರುವ ಅರ್ಜಿಯೊಂದಕ್ಕೆ ಸಂಬಂಧಿಸಿ ಹೈಕೋರ್ಟ್ ಮೇಲ್ಕಂಡ ಆದೇಶ ನೀಡಿದೆ.

2006ರಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿ ಪಥದಿಂದ ಚತುಷ್ಪಥಕ್ಕೆ ಪರಿವರ್ತಿಸಲು ಹೆದ್ದಾರಿಯ ಬದಿಯನ್ನು ಅಗಲಗೊಳಿಸಲು ಪ್ರಾಧಿಕಾರವು ನಿರ್ಧರಿಸಿತ್ತು. ಆದರೆ ಕಳೆದ ವರ್ಷ ಕೆಲವೊಂದು ಕಾರಣಗಳಿಗಾಗಿ ರಸ್ತೆಯ ಅಡ್ಡದಾರಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲಾಗಿತ್ತು. ಇದು ಜುನಾಗಢ ಮತ್ತು ರಾಜ್‌ಕೋಟ್‌ನ ರೈತರಿಗೆ ನೋವನ್ನುಂಟು ಮಾಡಿತ್ತು.

ರಾಷ್ಟ್ರೀಯ ಹೆದ್ದಾರಿ ಕಾಯ್ದೆಯ ಕಲಂ 3(ಎ)3ರನ್ವಯ ಯೋಜನೆಯ ಬದಲಾವಣೆಗೆ
ಸಂಬಂಧಿಸಿದ ಸುತ್ತೋಲೆಯನ್ನು ಗುಜರಾತಿಯಲ್ಲಿ ಪ್ರಕಟಿಸಬೇಕಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪ್ರಕಟಿಸಿತ್ತು.

ಕಳೆದ ಡಿಸೆಂಬರ್ 29ರಂದು ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ವಿ.ಎಂ. ಸಹಾಯ್, ಸುತ್ತೋಲೆಯನ್ನು ಗುಜರಾತಿಯಲ್ಲಿ ಪ್ರಕಟಿಸದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಪ್ಪು ಎಸಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜುನಾಗಢದ ನಿವಾಸಿಗಳಿಗೆ ಹಿಂದಿ ಅರ್ಥವಾಗುವ ಭಾಷೆಯಲ್ಲ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಧೀಶರು ಎತ್ತಿ ಹಿಡಿದಿದ್ದಾರೆ.

ಈ ಪ್ರದೇಶದ ಅರ್ಜಿದಾರರು ಗುಜರಾತಿ ಭಾಷೆಯನ್ನು ಬಳಸುತ್ತಾರೆ. ಹಿಂದಿ ಭಾಷೆ ಅವರಿಗೆ ವಿದೇಶಿ ಭಾಷೆಯಾಗಿದೆ. ಪ್ರದೇಶದಲ್ಲಿ ಸಾಮಾನ್ಯವಾಗಿ ಮಾತನಾಡುವ ಭಾಷೆ ಗುಜರಾತಿಯಾಗಿದೆಯೇ ಹೊರತು ಹಿಂದಿ ಅಲ್ಲ. ಸರ್ಕಾರ ಕೂಡ ಪ್ರಾಥಮಿಕ ಮಟ್ಟದ ಶಿಕ್ಷಣವನ್ನು ಗುಜರಾತಿನಲ್ಲೇ ನೀಡುತ್ತದೆ ಎಂದು ತನ್ನ ತೀರ್ಪಿನಲ್ಲಿ ನ್ಯಾ. ಸಹಾಯ್ ಹೇಳಿದ್ದಾರೆ.

ಆದರೆ, ಕರ್ನಾಟಕದಲ್ಲಿ ಇನ್ನೂ ಅನೇಕ ಕಡೆ ಸುತ್ತೋಲೆಗಳು ಇಂಗ್ಲೀಷ್ ಭಾಷೆಯಲ್ಲೇ ಜಾರಿಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+