ರಾಗಿ ಬೆಳೆಯಿಂದ ಸಣ್ಣ, ಅತೀ ಸಣ್ಣ ರೈತರ ಆದಾಯ ಹೆಚ್ಚಳ: ಕೇಂದ್ರ ಸರ್ಕಾರ
ರಾಗಿ ಪುನರುಜ್ಜಿವನಗೊಳಿಸಲು ಅಂತಾರಾಷ್ಟ್ರೀ ಮಟ್ಟದ ಸಂಸ್ಥೆಗಳು, ಅಕಾಡೆಮಿಗಳು, ಹೋಟೆಲ್ ಉದ್ಯಮ ಸಂಸ್ಥೆಗಳು ಮುಂದಾಗಿವೆ. ರಾಗಿಗೆ ಜಾಗತಿಕ ಮನ್ನಣೆ ಸಿಗುವ ಜೊತೆಗೆ ಸಣ್ಣ ಸಣ್ಣ ರೈತರ ಆದಾಯ ಹೆಚ್ಚಾಗಲಿದೆ ಎಂದು ಕೇಂದ್ರ ತಿಳಿಸಿದೆ.
ಬೆಂಗಳೂರು, ಫೆಬ್ರವರಿ 13: ಕಣ್ಮರೆಯಾಗಿದ್ದ ಮಿರಾಕಲ್ ರಾಗಿ (Miracle Millets) ಪುನರುಜ್ಜಿವನಗೊಳಿಸಲು ಅಂತಾರಾಷ್ಟ್ರೀ ಮಟ್ಟದ ಸಂಸ್ಥೆಗಳು, ಅಕಾಡೆಮಿಗಳು, ಹೋಟೆಲ್ ಉದ್ಯಮ ಸಂಸ್ಥೆಗಳು ಮುಂದಾಗಿವೆ. ಅಲ್ಲದೇ ದೇಶದಲ್ಲಿ ರಾಗಿಗೆ ಹೆಚ್ಚೆಚ್ಚು ಜನಪ್ರೀಯತೆ ಕೊಟ್ಟಷ್ಟು ಸಣ್ಣ, ಅತೀ ಸಣ್ಣ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭಾರತವು ತನ್ನನ್ನು 'ರಾಗಿಯ ಜಾಗತಿಕ ಕೇಂದ್ರ'ವನ್ನಾಗಿ ಗುರುತಿಸಿಕೊಳ್ಳಲು ಬಯಸುತ್ತಿದೆ. ಇದಕ್ಕೆಂದೇ ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಾಗುತ್ತಿದೆ.
ಭಾರತದ ಪಾಕಶಾಲೆಯ ಸಂಘಗಳ ಒಕ್ಕೂಟ ಆಯೋಜಿಸಿದ್ದ 9ನೇ 'ಅಂತಾರಾಷ್ಟ್ರೀಯ ಬಾಣಸಿಗರ ಸಮ್ಮೇಳನ' ದಲ್ಲಿ ದೇಶದ ಕೃಷಿ ಸಚಿವಾಲಯದ ಮುಖ್ಯಸ್ಥರು ಹಾಗೂ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಕೈಲಾಶ್ ಚೌಧರಿ ತಿಳಿಸಿದರು. ಆಫ್ರಿಕಾದಲ್ಲಿ 50 ಕೋಟಿ ಮಂದಿಗೂ ಹೆಚ್ಚು ಜನ ರಾಗಿ ಸಾಂಪ್ರದಾಯಿಕ ಆಹಾರ ಎಂದು ಪರಿಗಣಿಸಿದ್ದಾರೆ. ಭಾರತದಲ್ಲಿ, ರಾಗಿಗಳು ಪ್ರಾಥಮಿಕವಾಗಿ ಖಾರಿಫ್ ಬೆಳೆಯಾಗಿದೆ. ಈ ಬೆಳೆಗೆ ಕಡಿಮೆ ನೀರು ಅಗತ್ಯವಿದೆ ಎಂದು ಅವರು ವಿವರಿಸಿದರು.

ಉತ್ತಮ ಜೀವನೋಪಾಯ ಸೃಷ್ಟಿಗೆ, ರೈತರ ಆರ್ಥಿಕ ಚೇತರಿಕೆಗೆ ಪ್ರಪಂಚದಾದ್ಯಂತ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಖಚಿತತೆಗೆ ರಾಗಿ ಬೆಳೆ ಪ್ರಮುಖ ಪಾತ್ರ ವಹಿಸುತ್ತದೆ. ಅಂತಾರಾಷ್ಟ್ರೀಯ ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಹೋಟೆಲ್‌ಗಳು, ಮಾಧ್ಯಮಗಳು, ಭಾರತೀಯ ವಲಸಿಗರು, ಸ್ಟಾರ್ಟ್‌ಅಪ್ ಸಮುದಾಯಗಳು, ನಾಗರಿಕರು ಸೇರಿದಂತೆ ಎಲ್ಲರು'ಮಿರಾಕಲ್ ಮಿಲ್ಲೆಟ್'ಗಳ ಮರೆತಿರುವ ವೈಭವವನ್ನು ಮತ್ತೆ ಪುನರುಜ್ಜೀವನಗೊಳಿಸಲು ಕೈಜೋಡಿಸಬೇಕೆಂದು ಸರ್ಕಾರ ಒತ್ತಾಯಿಸಿದೆ.
ರಾಗಿ ವಾರ್ಷಿಕ ಬೆಳವಣಿಗೆ ದರ ಶೇ. 4.5 ನಿರೀಕ್ಷೆ
ಕೇಂದ್ರ ಕೃಷಿ ಸಚಿವಾಲಯ ಕಾರ್ಯದರ್ಶಿ ಮನೋಜ್ ಅಹುಜಾ ಅವರು, ಭಾರತದಲ್ಲಿ ರಾಗಿ ಬೆಳೆ ಜನಪ್ರಿಯ ಆಗುವುದರ ಜೊತೆಗೆ ಸಣ್ಣ ಸಣ್ಣ ರೈತರ ಆದಾಯದಲ್ಲಿ ಹೆಚ್ಚಳವಾಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ಕೃಷಿಯಲ್ಲಾದ ಬೆಳವಣಿಗೆ ಅದರಿಂದ ಒಟ್ಟು ದೇಶಿಯ ಉತ್ಪನ್ನ (GDP) ಕ್ಕೆ ಅದು ನೀಡಿದ ಕೊಡುಗೆ ಗಮನಿಸಿರುವ ಕೇಂದ್ರ ಸರ್ಕಾರ ತಂತ್ರಜ್ಞಾನ, ಕಾರ್ಯಕ್ರಮ ರೂಪಿಸುವ ಮೂಲಕ ಈ ವಲಯದ ಅಭಿವೃದ್ಧಿಗೆ ಕ್ರಮ ವಹಿಸಿದೆ ಎಂದರು.

ಸರ್ಕಾರವು ಕೃಷಿ ವಲಯದಲ್ಲಿ ಅಗಾಧ ಸಾಮರ್ಥ್ಯ ಕಂಡಿದೆ. ಈ ಸಾಮರ್ಥ್ಯ ಎಲ್ಲೆಡೆ ಪಸರಿಸಲೆಂದೇ ರಾಗಿಗೆ ಆದ್ಯತೆ ನೀಡಿದೆ. ಅನೇಕ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಜಾಗತಿಕವಾಗಿ ರಾಗಿಯು ಮಾರುಕಟ್ಟೆ ವರ್ಷ 2021ರಿಂದ 2026ರ ಮಧ್ಯೆ ಒಟ್ಟು ಶೇ. 4.5ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ನೋಂದಾಯಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.












Click it and Unblock the Notifications