ಮೊಬೈಲ್ ನಲ್ಲಿ ಹಾಪ್ ಕಾಮ್ಸ್ ದರಪಟ್ಟಿ ಲಭ್ಯ

ಈ ಯೋಜನೆ ಯಶಸ್ವಿಯಾದರೆ ಹಾಪ್ ಕಾಮ್ಸ್ ಗೆ ಏನಿಲ್ಲವೆಂದರೂ ಸುಮಾರು 1 ಕೋಟಿಗೂ ಅಧಿಕ ವಹಿವಾಟು ನಡೆಸುವ ನಿರೀಕ್ಷೆ ಹೊಂದಲಾಗಿದೆ. ಪ್ರತಿ ದಿನ ಸಂಜೆ 7 ಗಂಟೆ ನಂತರ ಹಾಪ್ ಕಾಮ್ಸ್ ವೆಬ್ ತಾಣದಲ್ಲಿ ತರಕಾರಿ ಹಾಗೂ ಹಣ್ಣುಗಳ ದರ ಪಟ್ಟಿಯನ್ನು ಸೇರಿಸಲಾಗುತ್ತದೆ. ಗ್ರಾಹಕರು ಕಳಿಸುವ ಸಂದೇಶಗಳು ಎನ್ ಐಸಿ ಹಾಪ್ ಕಾಮ್ಸ್ ವೆ ಸರ್ವರ್ ತಲುಪಿ ಅಲ್ಲಿಂದ ತಕ್ಷಣವೇ ನಿಮ್ಮ ಮೊಬೈಲ್ ಗೆ ಉತ್ತರ ಸಿಗುತ್ತದೆ.
ದರ ತಿಳಿಯುವ ಬಗೆ: ನಿಮ್ಮ ಮೊಬೈಲ್ ನಲ್ಲಿ hop veg(ಎಲ್ಲವೂ small letters ನಲ್ಲಿರಲಿ) ಎಂದು ಕೀ ಮಾಡಿ 92123 57123 ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. ಸುಮಾರು 30 ತರಕಾರಿಗಳ ಪಟ್ಟಿ ನಿಮ್ಮ ಮೊಬೈಲ್ ನಲ್ಲಿ ಕಾಣಬಹುದು.
ಈ ಯೋಜನೆ ಜಾರಿಗೊಂಡರೆ ವಹಿವಾಟು ಹೆಚ್ಚಳದ ಜೊತೆಗೆ ಮಾರಾಟದಲ್ಲಿ ಮೋಸ, ಗ್ರಾಹಕರಿಗೆ ತರಕಾರಿ ಆಯ್ಕೆ ಸೌಲಭ್ಯ, ರೈತರಿಗೆ ಸೂಕ್ತ ಬೆಲೆ ಸಿಕ್ಕಿದ್ದಂತಾಗುತ್ತದೆ. ಸದ್ಯ ಜಾರಿಯಲ್ಲಿರುವ ಡಿಜಿಟಲ್ ತಕ್ಕಡಿಯ ಮೂಲ ಬೆಲೆ ತಿಳಿಯುವ ಪದ್ಧತಿಯ ಮುಂದುವರೆದ ಭಾಗವಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕಣ್ಣ ಹೇಳಿದರು. [ಹಾಪ್ ಕಾಮ್ಸ್]












Click it and Unblock the Notifications