ಬೆಂಗಳೂರು ಕೃಷಿ ವಿವಿ: ಮಣ್ಣಿಲ್ಲದೇ ಹೈಡ್ರೋಪೋನಿಕ್ಸ್ ವಿಧಾನದಿಂದ ಬೆಳೆ
ಬೆಂಗಳೂರು, ನವೆಂಬರ್ 07: ಮಣ್ಣು ಇಲ್ಲದೇ ಕೇವಲ ಹೈಡ್ರೋಪೋನಿಕಲ್ ಆಗಿ ಸಸ್ಯಗಳನ್ನು ಬೆಳೆಯಬಹುದಾದ ವ್ಯವಸ್ಥೆವುಳ್ಳ ಘಟಕವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದೆ.
ಈ ಘಟದದಲ್ಲಿ ಹೈಡ್ರೋಪೋನಿಕ್ ಸಸ್ಯಗಳು ಪೋಷಕಾಂಶ, ಸಮೃದ್ಧ ದ್ರಾವಣಗಳು, ಆಮ್ಲಜನಕ ಮತ್ತು ನೀರಿನಿಂದ ಪೋಷಿಸಲ್ಪಡುತ್ತವೆ. ಈ ವ್ಯವಸ್ಥೆಗೆ ಯುಎಎಸ್-ಬಿ ಸಂಶೋಧನೆ ಎಂದು ಕರೆಯಲಾಗುತ್ತದೆ. ಇಲ್ಲಿ ಸಸ್ಯಗಳು ತ್ವರಿತವಾಗಿ ಬೆಳೆಯುತ್ತವೆ ಜತೆಗೆ ಹೆಚ್ಚು ಇಳುವರಿ ನೀಡುತ್ತವೆ. ಈ ಮಣ್ಣುರಹಿತ ಕೃಷಿ ತಂತ್ರವನ್ನು ಹೆಚ್ಚು ಜನಪ್ರಿಯಗೊಳಿಸಲು ವಿಶ್ವವಿದ್ಯಾಲಯ ಚಿಂತಿಸಿದೆ.
ವಿಶ್ವವಿದ್ಯಾನಿಲಯವು ಒಟ್ಟು ಎಂಟು ಭಿನ್ನ ಮಾದರಿಗಳಲ್ಲಿ ಒಂದು ಎಕರೆ ಪ್ರದೇಶದಲ್ಲಿ ಹೈಡ್ರೋಪೋನಿಕ್ಸ್ ಘಟಕವನ್ನು ಸ್ಥಾಪಿಸಿದೆ. ಕೆಲವು ಖಾಸಗಿ ಕಂಪನಿಗಳು ಇನ್ನೂ ದೊಡ್ಡ ಹೈಡ್ರೋಪೋನಿಕ್ಸ್ ಘಟಕಗಳನ್ನು ಸ್ಥಾಪಿಸಲು ಯೋಚನೆ ನಡೆಸಿವೆ ಎನ್ನಲಾದರೂ ವಿಶ್ವವಿದ್ಯಾಲಯದೀ ಘಟಕ ಬೃಹದಾಕಾರವಾದದ್ದು ಎಂದು ವರದಿ ಆಗಿದೆ.

ನಗರ ಪ್ರದೇಶಗಳಿಗೆ ಪರಿಚಯಿಸಲು ಚಿಂತನೆ
ಈ ವ್ಯವಸ್ಥೆಯಲ್ಲಿ ಹೈಡ್ರೋಪೋನಿಕ್ಸ್ ವಿಧಾನ ಮೂಲಕ ಮಣ್ಣು ಇಲ್ಲದೇ ಸಸ್ಯಗಳನ್ನು,ಬೆಳೆಯನ್ನು ಬೆಳೆಯಲಾಗುತ್ತದೆ. ಅಂತಹ ಸಸ್ಯಗಳನ್ನು ಇತ್ತೀಚೆಗೆ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ವಿಶ್ವವಿದ್ಯಾಲಯವು ಮೊದಲ ಹಂತದಲ್ಲಿ ಈ ತಂತ್ರಜ್ಞಾನವನ್ನು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಪರಿಚಯಿಸುವ ಯೋಜನೆ ರೂಪಿಸಿಕೊಂಡಿದೆ. ಕಡಿಮೆ ಪ್ರಮಾಣದ ಭೂಮಿ ಹೊಂದಿರುವ ತ್ವರಿತ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಪಾಲಿಹೌಸ್‌ಗಳ ಒಳಗೆ ಈ ವ್ಯವಸ್ಥೆ ಬಳಸುವ ಮೂಲಕ ಹೈಡ್ರೋಪೋನಿಕ್ಸ್‌ನಿಂದ ಇಳುವರಿ ಹೆಚ್ಚಿಸಬಹುದಾಗಿದೆ ಎಂದು ಯುಎಎಸ್-ಬಿ ಯ ಸಂಶೋಧನಾ ಮುಖ್ಯಸ್ಥ ನಾಗರಾಜ್ ಎಂಬುವವರು ತಿಳಿಸಿದರು.
ಸಾಂಪ್ರದಾಯಿಕ ಕೃಷಿ ತಂತ್ರಗಳಿಗೆ ಹೋಲಿಸಿದರೆ ಈ ಹೊಸ ವಿಧಾನವು ತುಸ ಹೆಚ್ಚು ವೆಚ್ಚದಾಯಕವಾಗಿದೆ. ಆದರೆ ಅಧಿಕ ಇಳುವರಿ ನೀಡುತ್ತದೆ. ನಾಲ್ಕೇ ವರ್ಷದಲ್ಲಿ ಹೂಡಿದ ಬಂಡವಾಳ ಮರಳುತ್ತದೆ. ತರಕಾರಿ, ಸೊಪ್ಪನ್ನು ಬೆಳೆಯುವ ಉದ್ದೇಶಕ್ಕಾಗಿ ಟೆರೇಸ್ ಕೃಷಿ, ಅಪಾರ್ಟ್‌ಮೆಂಟ್‌ಗಳ ಖಾಲಿ ಜಾಗದಲ್ಲಿ (ಪೋರ್ಟಿಕೋ), ನಗರ ತೋಟಗಾರಿಕೆಯಲ್ಲಿ ಈ ವಿಧಾನವನ್ನು ಅಳವಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಅಕ್ವಾಪೋನಿಕ್ಸ್ ವಿಧಾನಕ್ಕೆ ಹೈಡ್ರೋಪೋನಿಕ್ಸ್ ವಿಧಾನ ಪೂರಕ
ವಿಶ್ವವಿದ್ಯಾನಿಲಯವು ಅಕ್ವಾಪೋನಿಕ್ಸ್ ಮಾದರಿಯಲ್ಲಿ ಜಲಕೃಷಿ ಮತ್ತು ಮೀನು ಸಾಕಣೆ ಎರಡನ್ನೂ ತೊಟ್ಟಿಯಲ್ಲಿ ಮಾಡುವ ವಿಧಾನ ಪರಿಚಯಿಸಿದೆ. ಅದರಲ್ಲಿ ಮೀನಿನ ತೊಟ್ಟಿಗೆ ತ್ಯಾಜ್ಯವು ಹೈಡ್ರೋಪೋನಿಕ್ಸ್ ವ್ಯವಸ್ಥೆಯ ಮೂಲಕ ಹರಿಯುತ್ತದೆ. ಕೀಟನಾಶಕಗಳು ಅಥವಾ ರಸಗೊಬ್ಬರಗಳಂತಹ ಯಾವುದೇ ರಾಸಾಯನಿಕಗಳನ್ನು ಬಳಸದ ಕಾರಣ, ಅಕ್ವಾಪೋನಿಕ್ಸ್ ವಿಧಾನವನ್ನು ಸಾವಯವ ರೀತಿಯಲ್ಲಿ ಮಾಡಿ ಮೀನುಗಳನ್ನು ಮಾರಾಟ ಮಾಡಿ ಆದಾಯ ಪಡೆಯುವ ವ್ಯವಸ್ಥೆ ಇದಾಗಿದೆ.

ಡಚ್ ಬಕೆಟ್ ಎಂಬ ಭಿನ್ನ ವ್ಯವಸ್ಥೆಯನ್ನು ಪರಿಚಯಿಸಿರುವ ವಿಶ್ವವಿದ್ಯಾಲಯವು ಇದರಲ್ಲಿ ಪ್ರತಿ ಸಸ್ಯವು ಹನಿ ನೀರಾವರಿ ಮೂಲಕ ಪೋಷಕಾಂಶಗಳನ್ನು ಪಡೆಯುತ್ತದೆ. ಇಲ್ಲಿ ಟೊಮೆಟೊ, ಕುಂಬಳಕಾಯಿ, ಕೋಸುಗಡ್ಡೆ, ಬಾಟಲ್ ಸೋರೆಕಾಯಿ, ಬೀನ್ಸ್, ಸೌತೆಕಾಯಿ ಹಾಗೂ ಕ್ಯಾಪ್ಸಿಕಂನಂತಹ ತರಕಾರಿ ಬೆಳೆಯಬಹುದಾಗಿದೆ. ಅಲ್ಲದೇ ಡ್ರ್ಯಾಗನ್ ಹಣ್ಣು ಬೆಳೆಯಲು ಪ್ರಯೋಗ ನಡೆಸಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.











Click it and Unblock the Notifications