ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರ, ಬೀಜಗಳ ಅಭಾವ ಸೃಷ್ಟಿಸಿದರೆ ಸೂಕ್ತ ಕ್ರಮ; ಬಾಗಲಕೋಟೆ ಜಿಲ್ಲಾಧಿಕಾರಿ ಎಚ್ಚರಿಕೆ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಅಕ್ಟೋಬರ್‌, 12: ಪ್ರಸಕ್ತ ಹಿಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ರಸಗೊಬ್ಬರಗಳ ಅಭಾವ ಸೃಷ್ಟಿಸಿದರೆ ಅಂತಹವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಇಂದು ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ವಿತರಣೆ ಕುರಿತು ಸಭೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಇದೆ. ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹಿಂಗಾರಿ ಜೋಳ, ಗೋಧಿ, ಕಡಲೆ, ಸೂರ್ಯಕಾಂತಿ ಹಾಗೂ ಕಬ್ಬು ಸೇರಿದಂತೆ ಇತರೆ ಬೆಳೆಗಳ ಒಟ್ಟು 3.10 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ. ಈ ಪೈಕಿ ಈಗಾಗಲೇ 12,280 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದು ತಿಳಿಸಿದರು.

ಬಾಗಲಕೋಟೆ ಅಭಿವೃದ್ದಿ ಪ್ರಾಧಿಕಾರ: 3ನೇ ಯುನಿಟ್ ಅಭಿವೃದ್ದಿ ಕಾರ್ಯಕ್ಕೆ ಶೀಘ್ರವೇ ಚಾಲನೆ: ಚರಂತಿಮಠಬಾಗಲಕೋಟೆ ಅಭಿವೃದ್ದಿ ಪ್ರಾಧಿಕಾರ: 3ನೇ ಯುನಿಟ್ ಅಭಿವೃದ್ದಿ ಕಾರ್ಯಕ್ಕೆ ಶೀಘ್ರವೇ ಚಾಲನೆ: ಚರಂತಿಮಠ

ಶೇಖರಣೆ ಮಾಡಲಾದ ಬೀಜಗಳ ಪ್ರಮಾಣ
ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬಿತ್ತನೆ ಕಾರ್ಯದಲ್ಲಿ ವಿಳಂಬ ಆಗಿದೆ. ಜಿಲ್ಲೆಯಲ್ಲಿ 18 ರೈತ ಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿ 7 ಕೇಂದ್ರಗಳು ಸೇರಿ ಒಟ್ಟು 25 ಕೇಂದ್ರಗಳ ಮೂಲಕ ರಿಯಾಯಿತಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. 6 ತಾಲೂಕು ಸೇರಿ ಜೋಳ 830 ಕ್ವಿಂಟಲ್, ಮುಸುಕಿನ ಜೋಳ 300 ಕ್ವಿಂಟಲ್, ಗೋದಿ 3,760 ಕ್ವಿಂಟಲ್, ಕಡಲೆ 14,095 ಕ್ವಿಂಟಲ್, ಶೇಂಗಾ 4,700 ಕ್ವಿಂಟಲ್, ಸೂರ್ಯಕ್ರಾಂತಿ 30 ಕ್ವಿಂಟಲ್, ಕುಸುಮೆ 20 ಕ್ವಿಂಟಲ್ ಸೇರಿದಂತೆ ಒಟ್ಟು 23,735 ಕ್ವಿಂಟಲ್ ಬೀತ್ತನೆ ಬೀಜ ವಿತರಣೆ ಮಾಡಲಾಗಿದೆ. ಹೆಚ್ಚುವರಿಯಾಗಿ ಮುಸುಕಿನ ಜೋಳ, ಗೋಧಿ, ಕಡಲೆ, ಸೂರ್ಯಕಾಂತಿ ಹಾಗೂ ಶೇಂಗಾ ಬೀಜ ಸೇರಿದಂತೆ ಒಟ್ಟು 16,500 ಕ್ವಿಂಟಲ್‌ ಬೀಜಗಳಿಗೆ ಬೇಡಿಕೆ ಇಡಲಾಗಿದೆ ಎಂದರು.

Fertilizer, seeds should not lacking; Bagalkot District Commissioner alert

ದಾಸ್ತಾನಿನಲ್ಲಿ ಲಭ್ಯವಿರುವ ಗೊಬ್ಬರದ ಪ್ರಮಾಣ
ಜಿಲ್ಲೆಯಲ್ಲಿ ಸದ್ಯ ರಸಗೊಬ್ಬರದ ಕೊರತೆ ಇಲ್ಲ. ಲಭ್ಯವಿರುವ ದಾಸ್ತಾನಿನ ಪೈಕಿ ಯೂರಿಯಾ 13,549 ಮೆಟಾ ಟನ್, ಡಿ.ಎ.ಪಿ 1,605 ಮೆಟಾ ಟನ್, ಕಾಂಪ್ಲೆಕ್ಸ್‌ 17,440 ಮೆಟಾ ಟನ್, ಎಂ.ಒ.ಪಿ 2,019 ಮೆಟಾ ಟನ್, ಎಸ್.ಎಸ್.ಪಿ 1,691 ಮೆಟಾ ಟನ್ ಲಭ್ಯವಿದೆ. ರೈತರು ಯೂರಿಯಾ ರಸಗೊಬ್ಬರ ಒಂದನ್ನೇ ಹೆಚ್ಚಾಗಿ ಬಳಸಿದರೆ ಗಿಡಗಳು ರೋಗ ಮತ್ತು ಕೀಟಬಾದೆಗೆ ತುತ್ತಾಗಲಿದೆ. ಸಸ್ಯ ಸಮಗ್ರ ಪೋಷಣೆಗೆ ವಿವಿಧ ಬಗೆಯ ರಸಗೊಬ್ಬರ ಬಳಸುವುದು ಸೂಕ್ತವಾಗಿದೆ. ಕಾಂಪ್ಲೆಕ್ಸ್ ಗೊಬ್ಬರ ಹೆಚ್ಚಿಗೆ ಬಳಸಿದರೆ ಸೂಕ್ತವೆಂದು ತಿಳಿಸಿದರು. ಮಾರಾಟಗಾರರು ರಸಗೊಬ್ಬರದ ಅಭಾವ ಸೃಷ್ಟಿಸಿದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

Fertilizer, seeds should not lacking; Bagalkot District Commissioner alert

ಸಭೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ್‌, ಕೃಷಿ ಉಪನಿರ್ದೇಶಕ ಎಚ್.ಪಿ.ಕೋಳೇಕರ, ಕೃಷಿ ಸಹಾಯಕ ನಿರ್ದೇಶಕ ಪಾಂಡಪ್ಪ ಲಮಾಣಿ ಸೇರಿದಂತೆ ಜಿಲ್ಲಾ ಕೃಷಿ ಮಾರಾಟಗಾರರ ಸಂಘದ ಪ್ರತಿನಿಧಿಗಳು, ವಿವಿಧ ರಸಗೊಬ್ಬರ ಉತ್ಪಾದನ ಸಂಸ್ಥೆಗಳ ಜಿಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

English summary
Bagalkote District Commissiner P. Sunilkumar said, appropriate action will be taken against such people if shortage of fertilizers created. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X