ರಸಗೊಬ್ಬರ ಖರೀದಿಸುವ ರೈತರಿಗೆ ಸಲಹೆಗಳು

ಬೆಂಗಳೂರು, ಆಗಸ್ಟ್ 06 : ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗಿದ್ದು ರೈತರು ರಸಗೊಬ್ಬರಗಳನ್ನು ಖರೀದಿ ಮಾಡುತ್ತಿದ್ದಾರೆ. ಗೊಬ್ಬರ ಖರೀದಿಸುವಾಗ ರೈತರು ಗಮನಿಸಬೇಕಾದ ಅಂಶಗಳ ಕುರಿತು ಕೃಷಿ ಇಲಾಖೆ ಸಲಹೆಗಳನ್ನು ನೀಡಿದೆ.

ಖರೀದಿ ಮಾಡುವಾಗ ರೈತರು ರಸಗೊಬ್ಬರಗಳ ಚೀಲದ ಬಾಯಿ ಹೊಲೆದಿರಬೇಕು. ಕೈಯಿಂದ ಹೊಲೆದಿದ್ದರೆ ಅದಕ್ಕೆ ಸೀಸದ ಮೊಹರು ಇರಬೇಕು ಎಂಬುದನ್ನು ಗಮನಿಸಬೇಕು ಎಂದು ತಿಳಿಸಲಾಗಿದೆ.

ರಸಗೊಬ್ಬರದ ಚೀಲವನ್ನು ತೂಕ ಮಾಡಿಸಿಯೇ ಕೊಂಡುಕೊಳ್ಳಬೇಕು. ರಸಗೊಬ್ಬರದ ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು ಮತ್ತು ಗೊಬ್ಬರಗಳ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

Farmers Should Know During Purchase Of Fertilizer

ರೈತರು ರಸಗೊಬ್ಬರಗಳನ್ನು ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕು ಹಾಗೂ ರಸೀದಿಯಲ್ಲಿ ಲಾಟ್ ನಂಬರ್ ನಮೂದಿಸಿರಬೇಕು. ಚೀಲದ ಮೇಲೆ ರಸಗೊಬ್ಬರವೆಂದು ಮುದ್ರಿತವಾಗಿರಬೇಕು ಇಂತಹ ವಿಚಾರಗಳನ್ನು ರೈತರು ಗಮನಿಸಬೇಕು.

ರಸಗೊಬ್ಬರ ತಯಾರಕರ ಹೆಸರು, ವಿಳಾಸ, ಬ್ರಾಂಡ್, ರಸಗೊಬ್ಬರದ ಹೆಸರು, ರಸಗೊಬ್ಬರದಲ್ಲಿರುವ ಕನಿಷ್ಠ ಶೇಖಡಾವಾರು ಪೋಷಕಾಂಶಗಳ ವಿವರಗಳು, ರಸಗೊಬ್ಬರಗಳ ಮಿಶ್ರಣಗಳು ಮುಂತಾದವುಗಳ ವಿವರ ಇರಬೇಕು.

ಚೀಲ ಅಥವ ಡಬ್ಬದ ಮೇಲೆ ಬ್ಯಾಚ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಗಳು ನಮೂದಿಸಿರಬೇಕು. ಈ ಎಲ್ಲ ಅಂಶಗಳನ್ನು ಗಮನಿಸಿ ರಸಗೊಬ್ಬರಗಳನ್ನು ಖರೀದಿಸುವಂತೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+