ನಿಮ್ಮ ಕೃಷಿ ಭೂಮಿಗೆ ಯಾವುದನ್ನು ನೀಡುತ್ತೀರಿ? ನೀವೇ ನಿರ್ಧರಿಸಿ...
ಪ್ರಕೃತಿಯೊಂದು ಪ್ರಯೋಗಶಾಲೆ. ನಮ್ಮ ಪ್ರತಿ ಅಧ್ಯಯನವೂ ಪ್ರಕೃತಿಯನ್ನೇ ಆಧರಿಸಿರುತ್ತದೆ. ಅದರಲ್ಲೂ ಕೃಷಿಯನ್ನೇ ಜೀವನೋಪಾಯದ ಮಾರ್ಗವಾಗಿ ಮಾಡಿಕೊಂಡಿರುವವರು ಪ್ರಕೃತಿಯ ಜೊತೆ ಆಟವಾಡಬೇಕಾಗುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.
Recommended Video
ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಕೃಷಿಯಲ್ಲಿ ಹೊಸ ಹೊಸ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಆ ಮೂಲಕ ಹಳೆಯ ಕೃಷಿ ಪದ್ಧತಿಗಳು ಮೂಲೆ ಸೇರಿವೆ. ಹಳೆಯ ಕೃಷಿ ಪದ್ಧತಿಗಳಿಂದಾಗಿ ನಷ್ಟದ ಸಮಸ್ಯೆ ಕೃಷಿಕರಿಗೆ ಎದುರಾಗುತ್ತಿದೆ. ಹಾಗಾಗಿ ಲಾಭದ ನಿರೀಕ್ಷೆಯ ಕೃಷಿಕ ಅಧಿಕ ಇಳುವರಿಗಾಗಿ, ಕೀಟಗಳ ಸಮಸ್ಯೆ ನಿವಾರಿಸುವುದಕ್ಕಾಗಿ, ರೋಗಗಳ ತಡೆಗಾಗಿ ಔಷಧಿಗಳ ಸಿಂಪಡನೆ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ.

ಸಾವಯವ ಉತ್ತಮ ಕೃಷಿ ಪದ್ಧತಿ
ಆದರೆ ರಾಸಾಯನಿಕಗಳಿಗಿಂತ ಸಾವಯವ ಕೃಷಿ ಪದ್ಧತಿ ನಿಜಕ್ಕೂ ಉತ್ತಮವಾಗಿರುವ ಕೃಷಿ ಪದ್ಧತಿ. ರಾಸಾಯನಿಕಗಳಿಂದ ಭೂಮಿಯನ್ನು ಎಷ್ಟು ದೂರವಿಡುತ್ತೀರೋ ಅಷ್ಟು ಭೂಮಿ ಆರೋಗ್ಯವಾಗಿರುತ್ತದೆ. ಆದರೆ ಅನಿವಾರ್ಯ ಕಾರಣಗಳಿಂದ ಭೂಮಿಗೆ ರಾಸಾಯನಿಕಗಳ ಸಿಂಪಡನೆ ಶುರುವಾಗಿದೆ. ಆದರೆ ಕೃಷಿಕ ಮುಗ್ಧ ಎಂಬುದು ಎಲ್ಲರಿಗೂ ತಿಳಿದಿದೆ.

ಮಾರ್ಜಿನ್ ಮನಿಯ ಆಸೆ
ಹಾಗಾಗಿ ರಾಸಾಯನಿಕಗಳು ಕೂಡ ಸಾವಯವದ ಮುಖವಾಡ ಧರಿಸಲು ಶುರು ಮಾಡಿವೆ. ಅದರಲ್ಲೂ ಸ್ವಲ್ಪ ವಿದ್ಯಾವಂತರು ಕಂಪೆನಿಗಳು ನೀಡುವ ಮಾರ್ಜಿನ್ ಮನಿ ಪಡೆಯುವ ಉದ್ದೇಶದಿಂದ ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಯಾವ ಕಂಪೆನಿಯವರು ಹೆಚ್ಚು ಮಾರ್ಜಿನ್ ಮನಿ ನೀಡುತ್ತಾರೋ ಅಂತಹ ಕಂಪೆನಿಗಳ ಪ್ರಾಡಕ್ಟ್ ಗಳನ್ನು ಕೃಷಿಕರ ಮನವೊಲಿಸಿ ಮಾರಾಟ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.

ಮಾತಿನ ಮೋಡಿಗೆ ಮರುಳಾಗದಿರಿ
ಹಾಗಾಗಿ ರೈತರು ಯಾವುದೇ ವಸ್ತುವನ್ನು ಕೊಂಡುಕೊಳ್ಳುವ ಮುನ್ನ ಕೇವಲ ಮಾರಾಟಗಾರರ ಮಾತಿನ ಮೋಡಿಗೆ ಮರುಳಾಗಲೇಬಾರದು. ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡು ಎಂಬ ಗಾದೆ ಮಾತೇ ಇದೆ. ಪ್ರತಿಯೊಂದು ಕಂಪನಿಗಳು ಕೂಡ ಭರವಸೆಯ ಮಹಾಪೂರವನ್ನೇ ಹರಿಸುತ್ತವೆ. ಈ ಭರವಸೆಗಳಿಗೆ ಸಾಕ್ಷಿ ಇರುವುದಿಲ್ಲ. ಸಾಕ್ಷಿ ಎಂದರೆ ಅವರು ಬಳಸಿದ್ದಾರೆ, ಇವರು ಬಳಸಿದ್ದಾರೆ, ಒಳ್ಳೆಯ ರಿಸಲ್ಟ್ ಅವರಿಗೆ ಸಿಕ್ಕಿದೆ, ಇವರಿಗೆ ಸಿಕ್ಕಿದೆ ಅನ್ನೋ ಮಾತಿನ ಚಾಕಚಕ್ಯತೆ ಅಲ್ಲ ಅಥವಾ ಯಾವುದೋ ಕಾಗದದ ಸರ್ಟಿಫಿಕೇಟ್ ಅಲ್ಲವೇ ಅಲ್ಲ. ಬದಲಾಗಿ ಅವರ ಪ್ರಾಡಕ್ಟಿನ ಫಲಿತಾಂಶವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುವವರಿದ್ದರೆ ನಂಬಿಕೆಗೆ ಅರ್ಹರೆನಿಸುತ್ತಾರೆ.

ಕೃಷಿಯೊಂದು ವೈದ್ಯಕೀಯ ಕೋರ್ಸ್ ನಂತೆ...
ಕೃಷಿ ವೈದ್ಯಕೀಯ ಕೋರ್ಸ್ ನಂತೆಯೆ ಸರಿ. ಪ್ರಾಕ್ಟಿಕಲ್ ಗೆ ಮಹತ್ವ ಜಾಸ್ತಿ ಕೊಟ್ಟರೆ ಉತ್ತಮ ವೈದ್ಯನಾಗಬಹುದು. ಕೇವಲ ಥಿಯರಿ ತಿಳಿದರೆ ವೈದ್ಯನಾಗಬಹುದು, ರೋಗಿ ಗುಣವಾಗ್ತಾನಾ ಕೇಳಿದ್ರೆ ಗೊತ್ತಿಲ್ಲ!! ಕೃಷಿಯಲ್ಲೂ ಅಷ್ಟೇ, ಪ್ರಾಕ್ಟಿಕಲ್ ಕ್ಲಾಸ್ ಗಳು ಮುಖ್ಯವೇ ಹೊರತು ಥಿಯರಿ ಕ್ಲಾಸ್ ಗಳು ಬಹಳ ಕಡಿಮೆ ಸಾಕು. ಈಗಿನ ಕೃಷಿಕರು ಬೀಜಗಳಿಂದ ಹಿಡಿದು ಪ್ರತಿ ಔಷಧಿಯ ವಿಚಾರದಲ್ಲೂ, ಗೊಬ್ಬರದ ವಿಚಾರದಲ್ಲೂ ಕೈಸುಟ್ಟುಕೊಳ್ಳುತ್ತಿದ್ದಾರೆ.

ಗೊಂದಲಕ್ಕೆ ಸಿಲುಕಿಸುತ್ತಿರುವ ಉತ್ಪನ್ನಗಳು
ಮಾರುಕಟ್ಟೆಯಲ್ಲಿರುವ ವಿವಿಧ ಪ್ರಾಡಕ್ಟ್ ಗಳು ಸ್ಪರ್ಧೆಯಿಂದಾಗಿ ಕೃಷಿಕರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ. ಆದರೆ ಕೃಷಿಕನ ಹಾದಿ ತಪ್ಪಿಸುವ ಕೆಲಸವನ್ನು ಮಾತಿನ ಮೋಡಿಗಾರ ಮಾಡುತ್ತಿದ್ದಾನೆ. ಹಾಗಾಗಿ ಕೃಷಿಕರು ಮಾರಾಟಗಾರನ ಮಾತಿಗೆ ಬೆಲೆ ನೀಡಬೇಡಿ. ಆತ ನಿಮಗೆ ಪ್ರಾಯೋಗಿಕಾಗಿ ತೋರಿಸುತ್ತಾನಾದರೆ ಮಾತ್ರ ಆತನ ವಸ್ತುವಿನ ಮೇಲೆ ನೀವು ಹೂಡಿಕೆ ಮಾಡಿ ಖರೀದಿ ಮಾಡಬಹುದು. ಇನ್ನು ಎಲ್ಲೋ ಮಾಡಿದ ಪ್ರಯೋಗದ ವರದಿ ಪೇಪರ್ ತೋರಿಸಿದರೂ ನಂಬಬೇಡಿ. ನಿಮ್ಮ ಭೂಮಿಯಲ್ಲಿ ಪ್ರಯೋಗ ಮಾಡಿ ತೋರಿಸುತ್ತಾನೆಂದರೆ ಮಾತ್ರ ನಂಬಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications