ರೈತರ ಸಾಲಮನ್ನಾಗೆ ಚುನಾವಣಾ ಆಯೋಗದ ತಡೆ

ಬೆಂಗಳೂರು, ಮಾರ್ಚ್ 22 : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರೈತರ ಸಾಲಮನ್ನಾ ಯೋಜನೆಗೆ ಚುನಾವಣಾ ಆಯೋಗ ತಡೆ ನೀಡಿದೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಪ್ರಕ್ರಿಯೆ ಪುನಃ ಆರಂಭವಾಗಲಿದೆ.

ಲೋಕಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಸಾಲಮನ್ನಾ ಯೋಜನೆ ಸ್ಥಗಿತಗೊಳಿಸುವಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಹಕಾರ ಇಲಾಖೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.

'ಸಾಲಮನ್ನಾ ಪ್ರಕ್ರಿಯೆಯನ್ನು ಮುಂದುವರೆಸಬಹುದೇ? ಎಂದು ವಿವರಣೆ ಕೇಳಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಈ ಪತ್ರಕ್ಕೆ ಆಯೋಗ ಉತ್ತರ ನೀಡಿದೆ' ಎಂದು ಸಾಲಮನ್ನಾ ಯೋಜನೆ ನೋಡಲ್ ಅಫೀಸರ್ ಮೌನಿಷ್ ಮೌದ್ಗಿಲ್ ಹೇಳಿದ್ದಾರೆ.

ಕರ್ನಾಟಕ ಸರ್ಕಾರದ ಯೋಜನೆ ಮಾತ್ರವಲ್ಲ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಡಿಸೆಂಬರ್‌ನಿಂದಲೇ ಪೂರ್ವನ್ವಯವಾಗಿ ಜಾರಿಗೆ ಬರಲಿದೆ. ಯೋಜನೆಯ ಮೊದಲ ಕಂತು 2 ಸಾವಿರ ರೂ. ಬಿಡುಗಡೆಗೂ ಆಯೋಗ ತಡೆ ನೀಡಿದೆ...

ಎಷ್ಟು ಹಣ ಬಿಡುಗಡೆ ಆಗಬೇಕು?

ಎಷ್ಟು ಹಣ ಬಿಡುಗಡೆ ಆಗಬೇಕು?

ಮಾರ್ಚ್ ತಿಂಗಳಿನಲ್ಲಿ ರೈತರ ಸಾಲದ ಖಾತೆಗಳಿಗೆ ಒಟ್ಟು 1182 ಕೋಟಿ, ಏಪ್ರಿಲ್ ತಿಂಗಳಿನಲ್ಲಿ 93 ಸಾವಿರ ರೈತರ 387 ಕೋಟಿ ಸಾಲದ ಕಂತು ಮರುಪಾವತಿ ಆಗಬೇಕು. ಒಟ್ಟಾರೆ 1569 ಕೋಟಿ ಬಿಡುಗಡೆಗೆ ನೀತಿ ಸಂಹಿತೆ ಅಡ್ಡಿಯಾಗಿದೆ.

ಚುನಾವಣಾ ಆಯೋಗ ಸ್ಪಷ್ಟನೆ

ಚುನಾವಣಾ ಆಯೋಗ ಸ್ಪಷ್ಟನೆ

ಹಿಂದಿನ ವರ್ಷವೇ ಸಾಲಮನ್ನಾ ಯೋಜನೆ ಘೋಷಣೆಯಾಗಿದೆ. ರೈತರ ಸಾಲದ ಕಂತು ಅವಧಿಗೆ ತಕ್ಕಂತೆ ಸರ್ಕಾರದಿಂದ ಬಿಡುಗಡೆಯಾಗುತ್ತಿದೆ. ನೀತಿ ಸಂಹಿತೆ ಮಾರ್ಚ್ 10ರಿಂದ ಜಾರಿಗೆ ಬಂದರೂ ಹಿಂದಿನ ವರ್ಷದ ಯೋಜನೆಗೆ ಅನ್ವಯ ಆಗಲಿದೆಯೇ? ಎಂದು ಸರ್ಕಾರ ಕೇಳಿತ್ತು. ಚುನಾವಣಾ ಆಯೋಗ ಮೇ 27ರ ತನಕ ಸಾಲಮನ್ನಾ ಪ್ರಕ್ರಿಯೆ ಮುಂದೂಡಿ ಎಂದು ಸೂಚನೆ ನೀಡಿದೆ.

ಹೊಸ ಸಾಲಕ್ಕೆ ತೊಂದರೆ

ಹೊಸ ಸಾಲಕ್ಕೆ ತೊಂದರೆ

ಸಾಲಮನ್ನಾ ಪ್ರಕ್ರಿಯೆಗೆ ತಡೆ ಬೀಳದಿದ್ದರೆ ಬಹುಪಾಲು ರೈತರ ಸಾಲದ ಖಾತೆಗಳು ಮುಚ್ಚಿ ಏಪ್ರಿಲ್‌ನಿಂದ ಹೊಸದಾಗಿ ಸಾಲ ಪಡೆಯಲು ಅರ್ಹರಾಗುತ್ತಿದ್ದರು. ಆದರೆ ಈಗ ಮೇ 27ರ ಬಳಿಕ ಪ್ರಕ್ರಿಯೆ ಆರಂಭ ಆಗುವುದರಿಂದ ಜೂನ್‌ನಿಂದ ಆರಂಭವಾಗುವ ಕೃಷಿ ಚಟುವಟಿಕೆಗೆ ಹೊಸ ಸಾಲ ಪಡೆಯಲು ಅನಾನುಕೂಲವಾಗಲಿದೆ.

ಕೇಂದ್ರದ ಯೋಜನೆಗೂ ತಡೆ

ಕೇಂದ್ರದ ಯೋಜನೆಗೂ ತಡೆ

ಮತ್ತೊಂದು ಕಡೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಡಿಸೆಂಬರ್‌ನಿಂದಲೇ ಪೂರ್ವನ್ವಯವಾಗಿ ಜಾರಿಗೆ ಬರಲಿದೆ. ಯೋಜನೆಯ ಮೊದಲ ಕಂತು 2 ಸಾವಿರ ರೂ. ಕೆಲವು ರೈತರಿಗೆ ತಲುಪಿದೆ. ಈ ಯೋಜನೆಗೂ ಆಯೋಗ ತಡೆ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+