ರಾಧಿಕಾ ಕುಮಾರಸ್ವಾಮಿ ಯಾರು ಸ್ವಾಮಿ?: ರೈತಸಂಘ

ಕುಮಾರಸ್ವಾಮಿಯವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ರಾಧಿಕಾ ಕುಮಾರಸ್ವಾಮಿ ಯಾರು ಎನ್ನುವುದನ್ನು ಸ್ವತಃ ಕುಮಾರಣ್ಣನೇ ಬಹಿರಂಗಪಡಿಸಬೇಕು ಎಂದು ರೈತಸಂಘದ ಮುಖಂಡ ಕೆಎಸ್ ನಂಜುಂಡೇಗೌಡ ಆಗ್ರಹಿಸಿದ್ದಾರೆ.
ಅಲ್ಲಿಗೆ, ರಾಧಿಕಾ ಕುಮಾರಸ್ವಾಮಿ ಯಾರು ಎಂಬುದನ್ನು ಹೈಕೋರ್ಟ್ ಸೇರಿದಂತೆ ರಾಜ್ಯದಲ್ಲಿ ಎಲ್ಲರೂ ಕೇಳಿದ್ದಾಯ್ತು. ರೈತಸಂಘ ಮಾತ್ರ ಬಾಕಿ ಉಳಿದಿತ್ತು ಅನಿಸುತ್ತದೆ.
'ನನಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ನಾನು ಒಂದು ಪಿಕ್ಚರ್ ನೋಡಿದಾಗ ಆರಂಭದಲ್ಲಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ಇಬ್ಬರ ಚಿತ್ರಗಳು ಬರುವುದನ್ನು ನೋಡಿದ್ದೇನೆ. ಆದರೆ, ರಾಧಿಕಾ ಕುಮಾರಸ್ವಾಮಿ ಯಾರು ಎನ್ನುವ ಬಗ್ಗೆ ನನಗೆ ಈಗಲೂ ಅನುಮಾನವಿದೆ. ಅವರು ಯಾರು ಎಂಬುದನ್ನು ಕುಮಾರಸ್ವಾಮಿಯವರೂ ಬಾಯ್ಬಿಟ್ಟು ಹೇಳುತ್ತಿಲ್ಲ. ರಾಧಿಕಾ ಯಾರು ಅಂತ ಕುಮಾರಸ್ವಾಮಿ ಹೇಳಲು ಹಿಂಜರಿಯುತ್ತಿರುವುದೇಕೆ?' ಎಂದು ನಂಜುಂಡೇಗೌಡ ಪ್ರಶ್ನಿಸಿದ್ದಾರೆ.












Click it and Unblock the Notifications