ಕೆಲ್ಸವೇ ಮಾಡದ BDA ಮುಚ್ಚಬಾರದೇಕೆ?- ಸಿದ್ದು ಗರಂ

Siddaramaiah angry at BDA for not distributing a site
ಬೆಂಗಳೂರು, ಮೇ 15- ಕುಲಗೆಟ್ಟು ಹೋಗಿರುವ ಆಡಳಿತ ಯಂತ್ರವನ್ನು ಸರಿ ದಾರಿಗೆ ತರಲು 5 ವರ್ಷದ ಕಾಲಾವಧಿ ಯಾತಕ್ಕೂ ಸಾಲದಾಗಿದೆ ಎಂದೇ ಭಾವಿಸಿ, ಪ್ರಮಾಣ ವಚನ ಸ್ವೀಕರಿಸಿದ ಮರುಘಳಿಗೆಯಿಂದಲೇ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ನಾಡಿನ ನೂತನ ಅರಸ ಸಿದ್ದರಾಮಯ್ಯ ನಿರ್ಧರಿಸದಂತಿದೆ.

ಹಾಗಾಗಿಯೇ, ಸಿಎಂ ಆದ ತಕ್ಷಣ ದೆಹಲಿಗೆ ತೆರಳಿ ಹೈಕಮಾಂಡ್ ಎದುರು ಮಂಡಿಯೂರದೆ ಮೂರು ದಿನವಾದರೂ ವಿಧಾನಸೌಧವನ್ನು ಬಿಟ್ಟು ಕದಲಿಲ್ಲ ಸನ್ಮಾನ್ಯ ಸಿದ್ದರಾಮಯ್ಯನವರು. ತನ್ಮೂಲಕ ತಮ್ಮ ಆಡಳಿತದ ರುಚಿಯನ್ನು ಅಧಿಕಾರಿಗಳಿಗೇ Brief ಮಾಡಿರುವ ಮುಖ್ಯಮಂತ್ರಿ ಸಿದ್ದು 'ತಾನು ನುಡಿದಂತೆ ನಡೆ, ಇಲ್ಲಾಂದ್ರೆ ನಡೆ' ಎಂಬ ಅಸ್ತ್ರವನ್ನು ಝಳಪಿಸಿದಂತಿದೆ.

ಮೊದಲು ಹಳ್ಳಿಗಳತ್ತ ಗಮನಹರಿಸಿದ್ದ ಸಿಎಂ ಸಿದ್ದು ಇದೀಗ ರಾಜಧಾನಿಯತ್ತ ಕಣ್ಣುಹಾಯಿಸಿದ್ದಾರೆ. ದೀಪದ ಕೆಳಗೇ ಕತ್ತಲು ಎಂಬಂತೆ ತನ್ನ ಮೂಲ ಧ್ಯೇಯೋದ್ದೇಶಕ್ಕೆ ತಿಲಾಂಜಲಿಯಿಟ್ಟು 10 ವರ್ಷಗಳಿಂದ ಬೆಂಗಳೂರಿಗರಿಗೆ ಒಂದೂ ಸೈಟನ್ನು ವಿತರಿಸದೆ ವಿವಾದಗಳ ಗೂಡಾಗಿರುವ BDA, ಸಿಎಂ ಸಿದ್ದು ಕೆಂಗಣ್ಣಿಗೆ ಗುರಿಯಾಗಿದೆ.

ಆ್ಯಂಗ್ರಿ ಬರ್ಡ್ ಸಿದ್ದು: ಒಂದು ದಶಕದಿಂದ ಒಂದೂ ಸೈಟನ್ನು ವಿತರಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಮೊದಲು ಮುಚ್ಚಬಾರದೇಕೆ ಎಂದು ಬಿಡಿಎ ಅಧಿಕಾರಿಗಳನ್ನು ಸಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ. ಅರ್ಕಾವತಿ ಮತ್ತು ನಾಡಪ್ರಭು ಕೆಂಪೇಗೌಡ ಲೇ ಔಟುಗಳ ನಿರ್ಮಾಣದ ಬಗ್ಗೆ ಏನಾಯಿತು ಎಂದು ಆಯುಕ್ತ ಶ್ಯಾಮ್ ಭಟ್ಟರನ್ನು ವಿಚಾರಿಸಿಕೊಂಡಿದ್ದಾರೆ.

ಅದಾಗುತ್ತಿದ್ದಂತೆ BBMP ಅಧಿಕಾರಿಗಳನ್ನು ಮೂಗಿಮುಚ್ಚಿಕೊಂಡೇ ಮಾತನಾಡಿಸಿರುವ ಸಿದ್ದು, ಇನ್ನು 10 ದಿನದಲ್ಲಿ ಕಸ ವಿಲೇವಾರಿ ಬಗ್ಗೆ ಸಮಗ್ರ ಕಾರ್ಯಯೋಜನೆ ಸಿದ್ದಪಡಿಸಿಕೊಂಡು ಬನ್ನಿ ಎಂದು ಗದರಿಕೊಂಡಿದ್ದಾರೆ. KPTCL, BWSSB ಮುಂತಾದ ಇಲಾಖೆಗಳತ್ತಲೂ ಸಿದ್ದು ಚಾಟಿಯೇಟು ಬೀಸಿದ್ದಾರೆ.

ಬೆಳಗ್ಗೆ 11 ರಿಂದ ರಾತ್ರಿ 8 ರವರೆಗೆ 20 ಪ್ರಮುಖ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು ಪ್ರತಿ ಇಲಾಖೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಆದರೆ ಇದರಲ್ಲಿ ಎಷ್ಟು ಪರಿಣಾಮಕಾರಿಯಾಗಬಲ್ಲದು ಎಂಬುದನ್ನು ಕಾದುನೋಡಬೇಕಾಗಿದೆ. ಅಥವಾ ಆರಂಭ ಶೂರತ್ವವಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+