BDA: 6180 ಮನೆಗಳ ಹಂಚಿಕೆಗೆ ಅರ್ಜಿ ಆಹ್ವಾನ

ಬೆಂಗಳೂರು, ಮಾ.15: ಕರ್ನಾಟಕ ಸರಕಾರ ಕಳೆದ ಸಾಲಿನ ಬಜೆಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೈಗೆಟುಕುವ ದರದಲ್ಲಿ 30,000 ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯೊಂದನ್ಪ್ರಾಸ್ತಾಪಸಿತ್ತು. ಅದರಂತೆ BDA ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಈ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ, 6180 ಮನೆಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಕೆಯ ವಿವರಗಳಿಗಾಗಿ http://www.bdabangalore.org/ ಸಂಪರ್ಕಿಸಬಹುದು. ಆದರೆ ಗಮನಿಸಿ: ನಿಮಗೆ BDA ಮನೆ/ ಸೈಟು ಸಿಗಬಹುದು, ಆದರೆ ಈ ವೆಬ್ ಸೈಟ್ ಸಿಗುತ್ತಿಲ್ಲ. ಆದರೂ ಸ್ಥೂಲ ಚಿತ್ರಣ ನೀಡುವುದಾದರೆ...

BDA offers 6180 houses in Bangalore last date April 30

ಹಲಗೆವಡೇರಹಳ್ಳಿ, ವಲಗೇರಹಳ್ಳಿ, ಮಾಲಗಾಲ, ಗುಂಜೂರು, ತಿಪ್ಪಸಂದ್ರ (ಅಂಜನಾಪುರ), ದೊಡ್ಡಬನಹಳ್ಳಿ, ಆಲೂರು ಭಾಗಗಳಲ್ಲಿ 1 BHK, 2 BHK ಮತ್ತು 3 BHK ವಸತಿ ಘಟಕಗಳು ವಿತರಣೆಗೆ ಲಭ್ಯವಿದೆ.

ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ನೋಂದಣಿ ಶುಲ್ಕ ಮತ್ತು ಅರ್ಜಿಯೊಂದಿಗೆ ಪಾವತಿಸಬೇಕಾದ ಆರಂಭಿಕ ಠೇವಣಿ, ಪ್ರಸ್ತಾವಿತ ಹಂಚಿಕೆ ದರ ವಿವರಗಳನ್ನು www.bdabangalore.org ನಲ್ಲಿ ವಿಚಾರಿಸಿಕೊಳ್ಳಬಹುದು.

ನೋಂದಣಿ ನಮೂನೆಗಳು ಮತ್ತು ಅರ್ಜಿ ನಮೂನೆಗಳು ಕೆನರಾ ಬ್ಯಾಂಕಿನ ಆಯ್ದ ಶಾಖೆಗಳಲ್ಲಿ ಲಭ್ಯ. ಮಾರ್ಚ್ 25ರಿಂದ ಅರ್ಜಿ ವಿತರಣೆಯಾಗಲಿದೆ. ಕೊನೆಯ ದಿನಾಂಕ ಏಪ್ರಿಲ್ 30, 2013. ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಬೇಕೆಂಬ ನಿಮ್ಮ ಜೀವಮಾನದ ಕನಸು ನನಸಾಗಲಿ ಎಂದು ಹಾರೈಸುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+