ಬಿಡಿಎ: ಕೊನೆಗೂ ಒಲಿದುಬಂದ ಅರ್ಕಾವತಿ ಭೂತಾಯಿ

ಇನ್ನು ಹೆಚ್ಚು ಕಾಯಿಸುವುದಿಲ್ಲ. ಇದೇ ವಾರ ಅಂದರೆ ಫೆ. 20ರೊಳಗಾಗಿ ಔಚಪಾರಿಕವಾಗಿ ಅರ್ಕಾವತಿ ಲೇ ಔಟ್ ಬಡಾವಣೆ ನಿರ್ಮಾಣಕ್ಕಾಗಿ ಕಾಮಗಾರಿ ಕೈಗೊಳ್ಳುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ತುಂಬು ಭರವಸೆ ನೀಡಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಭೂ ಮಾಲೀಕ ರೈತರ ಜತೆ ಫೆ. 8ರಂದು ನಡೆದ ಸಭೆ ಯಶಸ್ವಿಯಾಗಿದ್ದು, ಶೀಘ್ರವೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವುದಾಗಿ BDA ಅಧಿಕಾರಿಗಳು ಹೇಳಿದ್ದಾರೆ.
ಆದರೆ ಈ ಹಿಂದೆಯೂ BDA ಹಲವು ಬಾರಿ ಇಂತಹ ಭರವಸೆ ನೀಡಿತ್ತು. ಅರ್ಕಾವತಿ ಬಡಾವಣೆಗಾಗಿ ಜನವರಿ 15ಕ್ಕೆ ಖಂಡಿತ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿತ್ತು. ಆದರೆ ಕೆಲ ರೈತರು ಮತ್ತು ಜಿಪಿಎ ಪಟ್ಟಾ ಹೊಂದಿದ್ದವರು ಇದಕ್ಕೆ ಅಡ್ಡಗಾಲು ಹಾಕಿದ್ದರಿಂದ BDA ಮಾತು ತಪ್ಪಿತ್ತು. ಇನ್ನೂ ಒಳ್ಳೆಯ ಮಾರುಕಟ್ಟೆ ದರ, ಪರಿಹಾರ ನೀಡಬೇಕು ಎಂಬುದು ಕೆಲ ರೈತರ ಬೇಡಿಕೆಯಾಗಿತ್ತು.
ಆದರೆ ಈಗ ಗೊಂದಲಗಳೆಲ್ಲ ಮುಗಿದಿದ್ದು BDA ಅಧಿಕಾರಿಗಳು ರಾಜ್ಯ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲು ಅಂತಿಮ ಸಿದ್ಧತೆಯಲ್ಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.












Click it and Unblock the Notifications