ಕರ್ನಾಟಕದಲ್ಲಿ ಕಾಫಿ ಬೆಳೆಯುವ ಪ್ರದೇಶಗಳ ವಿಸ್ತರಣೆ
ಬೆಂಗಳೂರು, ಏಪ್ರಿಲ್ 08: ದೇಶಿಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಕಾಫಿ ಬೆಳೆಯುವ ಪ್ರದೇಶಗಳನ್ನು ವಿಸ್ತರಣೆ ಮಾಡಲು ಕಾಫಿ ಮಂಡಳಿಯು ಚಿಂತನೆ ನಡೆಸಿದ್ದು, ಈ ಕುರಿತು ಯೋಜನೆ ರೂಪಿಸಿದೆ. ಅಂಕಿ ಅಂಶಗಳ ಮಾಹಿತಿಯಂತೆ ದೇಶದ 4.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ. ಇದರಲ್ಲಿ 2.2 ಲಕ್ಷ ಹೆಕ್ಟೇರ್ ಕಾಫಿಯನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತಿದೆ.
ಕಾಫಿ ಮಂಡಳಿಯು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆ. ಕಾಫಿ ಬೆಳೆಗಾರರ ಹಿತರಕ್ಷಣೆಗಾಗಿ ಮಂಡಳಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತದೆ. ಈಗ ಮಂಡಳಿ ಕಾಫಿ ಬೆಳೆಯುವ ಪ್ರದೇಶದ ವಿಸ್ತರಣೆಗೆ ಯೋಜನೆ ರೂಪಿಸಿದೆ.

ಅಡಿಕೆ ಬೆಳೆ ದೇಶದ ದಕ್ಷಿಣದ ರಾಜ್ಯಗಳು ಮಾತ್ರವಲ್ಲ ಉತ್ತರದ ರಾಜ್ಯಗಳಲ್ಲಿಯೂ ಈಗ ವಿಸ್ತಾರವಾಗುತ್ತಿದೆ. ಕಾಫಿ ಬೆಳೆಯನ್ನು ಪ್ರೋತ್ಸಾಹಿಸಲು ಅಡಿಕೆ ತೋಟದಲ್ಲಿ ಕಾಫಿ ಬೆಳೆಯಲು ಮಂಡಳಿ ರೈತರನ್ನು ಪ್ರೇರೇಪಿಸಲಿದೆ. ಅಡಿಕೆ ನಡುವೆ ಕಾಫಿ ಬೆಳೆಯುವ ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡಲು ಮಂಡಳಿ ಮುಂದಾಗಿದೆ.
ಕರ್ನಾಟಕದಲ್ಲೇ ಹೆಚ್ಚು: ದೇಶದಲ್ಲಿ ಕಾಫಿ ಬೆಳೆಯುವ ರಾಜ್ಯದಲ್ಲಿ ಕರ್ನಾಟಕವೇ ಟಾಪ್. ದೇಶದ 4.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ. ಇದರಲ್ಲಿ ಶೇ 50ರಷ್ಟು ಕಾಫಿಯನ್ನು ನಮ್ಮ ರಾಜ್ಯದಲ್ಲಿಯೇ ಬೆಳೆಯಲಾಗುತ್ತದೆ.
ಕಾಫಿ ಬೆಳೆಯುವ ಪ್ರದೇಶಗಳನ್ನು ಹೇಗೆ ವಿಸ್ತರಣೆ ಮಾಡಬೇಕು? ಎಂದು ವಿವರವಾದ ಯೋಜನಾ ವರದಿಯನ್ನು ತಯಾರು ಮಾಡಿ ಮಂಡಳಿಯು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ.
ಕರ್ನಾಟಕ ಮಾತ್ರವಲ್ಲ ಮಂಡಳಿಯ ವರದಿಯ ಪ್ರಕಾರ ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿಯೂ ಕಾಫಿ ಬೆಳೆಯುವ ಪ್ರದೇಶಗಳನ್ನು ವಿಸ್ತರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಕಾಫಿ ಬೆಳೆಯುವ ಹೊಸ ಪ್ರದೇಶಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಮಂಗಳೂರು ಮತ್ತು ಪುತ್ತೂರು ಸೇರಿದೆ.
ಕಾಫಿ ಮಂಡಳಿಯ ಪ್ರಕಾರ ಕರಾವಳಿ ಪ್ರದೇಶಗಳು ಕಾಫಿ ಬೆಳೆಗೆ ಸೂಕ್ತವಾಗಿಲ್ಲ. ಗಾಳಿಯಲ್ಲಿನ ಉಪ್ಪಿನ ಅಂಶ ಮತ್ತು ತೇವಾಂಶದ ಕಾರಣದಿಂದ ಕಾಫಿ ಬೆಳೆಗೆ ಸಮಸ್ಯೆ ಆಗುತ್ತದೆ. ಆದರೆ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಕಾಫಿ ಬೆಳೆಯ ಪ್ರದೇಶವನ್ನು ವಿಸ್ತರಣೆ ಮಾಡಲು ಅನುಕೂಲವಿದೆ. ಇಲ್ಲಿ ಉತ್ತಮ ಇಳುವರಿಯನ್ನು ಸಹ ಪಡೆಯಬಹುದು.
ಅಧಿಕಾರಿಗಳ ಮಾಹಿತಿಯಂತೆ ದೇಶದಲ್ಲಿ ಇನ್ನೂ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿಯನ್ನು ಬೆಳೆಸಲು ಅವಕಾಶವಿದೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ತಯಾರು ಮಾಡಲಾಗಿದೆ. ಕಾಫಿ ಮಂಡಳಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಅರಬಿಕಾ ಕಾಫಿ ಬೆಳೆಸುಲು ಉತ್ತೇಜನ ನೀಡಲಿದೆ. ಜಾಗತಿಕವಾಗಿಯೂ ಈ ಕಾಫಿಗೆ ಬೇಡಿಕೆ ಹೆಚ್ಚಾಗುತ್ತಿದೆ.
500-800 ಮೀಟರ್ ಎತ್ತರದ ಪ್ರದೇಶಗಳು ರೊಬಸ್ಟಾ ತಳಿಯ ಕಾಫಿಗೆ ಸೂಕ್ತವಾಗಿದ್ದು, 800 ಮೀಟರ್‌ಗಿಂತ ಹೆಚ್ಚಿನ ಎತ್ತರದ ಪ್ರದೇಶಗಳು ಅರೆಬಿಕಾ ತಳಿ ಕಾಫಿಗೆ ಸೂಕ್ತವಾಗಿವೆ. ಈಶಾನ್ಯ ಭಾರತ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬೆಳೆಸಲು ಯೋಜನೆಯನ್ನು ತಯಾರು ಮಾಡಲಾಗಿದೆ.
ರಾಜ್ಯದಲ್ಲಿ ಕಾಫಿ ಬೆಳೆಯುವ ಅಧಿಕ ಪ್ರದೇಶವನ್ನು ಹೊಂದಿರುವ ಜಿಲ್ಲೆ ಕೊಡಗು. ಜಿಲ್ಲೆಯಲ್ಲಿ ಸುಮಾರು 1,06,921 ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಕರ್ನಾಟಕ ರಾಜ್ಯದ ಒಟ್ಟು ಕಾಫಿ ಪ್ರದೇಶದ ಶೇ 44 ರಷ್ಟು ಪ್ರದೇಶವನ್ನು ಜಿಲ್ಲೆ ಹೊಂದಿದೆ.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?











Click it and Unblock the Notifications