Get Updates
Get notified of breaking news, exclusive insights, and must-see stories!

Copra Price: ₹15,000 ದಾಟಿದ ಕೊಬ್ಬರಿ ಬೆಲೆ; ಮತ್ತಷ್ಟು ಹೆಚ್ಚಳ ಸಾಧ್ಯತೆ

ಕಳೆದ ಒಂದು ವರ್ಷದಿಂದ 10,000 ರೂಪಾಯಿ ಒಳಗಡೆಯೇ ವಹಿವಾಟು ನಡೆಸುತ್ತಿದ್ದ ಕೊಬ್ಬರಿ ಬೆಲೆ ಸುದೀರ್ಘ ಕಾಯುವಿಕೆ ಬಳಿಕೆ ಏರಿಕೆ ಹಾದಿ ಹಿಡಿದಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿರುವ ಕೊಬ್ಬರಿ ಧಾರಣೆ ಇದೀಗ 15,000 ರೂಪಾಯಿ ಗಡಿ ದಾಟಿದೆ. ಈ ಮೂಲಕ ತೆಂಗು ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.

ಬರ, ರೋಗದ ನಡುವೆಯೂ ಕಷ್ಟ ಪಟ್ಟು ತೆಂಗು ಉಳಿಸಿಕೊಂಡ ರೈತರಿಗೆ ಸೂಕ್ತ ಬೆಲೆ ಸಿಗದೇ ನಷ್ಟ ಅನುಭವಿಸಿದ್ದರು. ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರ ಕೊಬ್ಬರಿ ಖರೀದಿ ಮಾಡಿದ್ದರೂ, ಅದರಿಂದ ಹೆಚ್ಚಿನ ರೈತರಿಗೆ ಪ್ರಯೋಜನ ಸಿಕ್ಕಿರಲಿಲ್ಲ. ಮಾರುಕಟ್ಟೆಯಲ್ಲಿ 10,000 ರೂಪಾಯಿ ಆಸುಪಾಸಿನಲ್ಲೇ ಇರುತ್ತಿದ್ದ ಕ್ವಿಂಟಾಲ್ ಕೊಬ್ಬರಿಗೆ ಬೆಲೆ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಬಂದಿದೆ.

Copra Kobbari Prices surpassing 15000 Rs in Karnataka market

ಬುಧವಾರ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಧಾರಣೆ ಕನಿಷ್ಠ 13,088 ರೂಪಾಯಿ ಇದ್ದರೆ ಗರಿಷ್ಠ 15,022 ರೂಪಾಯಿಗೆ ಮಾರಾಟವಾಗಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ 11,000 ರೂಪಾಯಿ ಇದ್ದರೆ ಗರಿಷ್ಠ ಬೆಲೆ 15,000 ರೂಪಾಯಿ ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹11,000 ₹15,000 ₹13,000
2 ಕೆ.ಆರ್.ಪೇಟೆ ಕೊಬ್ಬರಿ ₹9,851 ₹10,000 ₹10,000
3 ತಿಪಟೂರು ಕೊಬ್ಬರಿ ₹13,800 ₹15,022 ₹14,000
4 ತುರುವೇಕೆರೆ ಕೊಬ್ಬರಿ ₹14,500 ₹14,500 ₹14,500
5 ಮಧುಗಿರಿ ಕೊಬ್ಬರಿ ₹8,000 ₹9,900 ₹9,846
6 ಮಧುಗಿರಿ ಬೇರೆ ₹6,000 ₹8,000 ₹7,500

18,000 ರೂಪಾಯಿಗೆ ಏರಿಕೆ?

ಕಳೆದ ಕೆಲವು ವರ್ಷಗಳಿಂದ ಕೊಬ್ಬರಿ ಬೆಲೆಯಲ್ಲಿ ಇಳಿಕೆಯಾಗಿತ್ತು. ತೆಂಗು ಬೆಳೆಗಾರರು ಇದರಿಂದ ಸಾಕಷ್ಟು ನಷ್ಟ ಕೂಡ ಅನುಭವಿಸಿದ್ದರು. ಮೊದಲೇ ನುಸಿ ರೋಗ ಸೇರಿ ಹಲವು ರೋಗಳು ತೆಂಗು ಬೆಳೆಯನ್ನು ಬಾಧಿಸುತ್ತಿದೆ. ಮತ್ತೊಂದು ಕಡೆ ಬರಗಾಲದ ನಡುವೆ ತೆಂಗಿನ ತೋಟಗಳನ್ನು ಉಳಿಸಿಕೊಳ್ಳುವುದು ಕೂಡ ರೈತರಿಗೆ ಸವಾಲಾಗಿತ್ತು. ಎಲ್ಲ ಕಷ್ಟ ನಷ್ಟಗಳ ನಡುವೆಯೂ ರೈತರು ತೋಟಗಳನ್ನು ಉಳಿಸಿಕೊಂಡಿದ್ದಾರೆ. ಈಗ ಕೊಬ್ಬರಿ ಬೆಲೆ ಏರಿಕೆ ತೆಂಗು ಬೆಳೆಗಾರರಿಗೆ ಸ್ವಲ್ಪ ಸಮಾಧಾನ ತಂದಿದೆ.

ಸದ್ಯ 15,000 ರೂಪಾಯಿ ದಾಟಿರುವ ಕೊಬ್ಬರಿ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಪೂರೈಕೆ ಕಡಿಮೆ ಇದ್ದು ಬೇಡಿಕೆ ಹೆಚ್ಚುತ್ತಿರುವ ಕಾರಣ, ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ 18000 ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಅದು ಕೂಡ ಪೂರೈಕೆ ಮತ್ತು ಬೇಡಿಕೆಯನ್ನು ಆಧರಿಸಿ ಇದು ನಿರ್ಧಾರವಾಗಲಿದೆ.

ಕೊಬ್ಬರಿ ಬೆಲೆ ಮಾತ್ರವಲ್ಲ ತೆಂಗಿನ ಕಾಯಿ ಬೆಲೆ ಕೂಡ ಏರಿಕೆಯಾಗಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಎ ಗ್ರೇಡ್ 1000 ತೆಂಗಿನಕಾಯಿ ಕನಿಷ್ಠ 10,000 ದಿಂದ ಗರಿಷ್ಠ 21,500 ದವರೆಗೆ ಮಾರಾಟವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+