1178 ಪಾಕ್-ಖಲಿಸ್ತಾನಿ ಖಾತೆಗಳನ್ನು ಅಳಿಸಲು ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರದ ಸೂಚನೆ

ನವದೆಹಲಿ, ಫೆಬ್ರವರಿ 8: ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಮತ್ತು ಉತ್ತೇಜನಾಕಾರಿ ವಿಚಾರಗಳನ್ನು ಹರಡುತ್ತಿರುವ 1178 ಪಾಕಿಸ್ತಾನಿ-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಆದೇಶಕ್ಕೆ ಸಂಪೂರ್ಣ ಬದ್ಧರಾಗಿರುವ ಸಂಬಂಧ ಟ್ವಿಟ್ಟರ್ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

'ರೈತರ ಹತ್ಯಾಕಾಂಡ'ದಂತಹ ಪ್ರಚೋದನಾಕಾರಿ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದ ಸುಮಾರು 250 ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರವು ಟ್ವಿಟ್ಟರ್‌ಗೆ ಸೂಚಿಸಿತ್ತು. ಇದರಲ್ಲಿ ಕಿಸಾನ್ ಏಕ್ತಾ ಮೋರ್ಚಾ, ಬಿಕೆಯು ಏಕ್ತಾ-ಉರ್ಗಹನ್, ಟ್ರ್ಯಾಕ್ಟರ್ ಟು ಟ್ವಿಟ್ಟರ್ ಮುಂತಾದ ಸಾವಿರಾರು ಹಿಂಬಾಲಕರನ್ನು ಉಳ್ಳ ಖಾತೆಗಳು ಸೇರಿದ್ದವು. ಇವರಲ್ಲಿ ಹೆಚ್ಚಿನವರು ರೈತರ ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದಾರೆ.

ಸರ್ಕಾರದ ಆದೇಶದಂತೆ ಬ್ಲಾಕ್ ಮಾಡಿದ ಮರುದಿನವೇ ಟ್ವಿಟ್ಟರ್ ಈ ಖಾತೆಗಳನ್ನು ಅನ್‌ಬ್ಲಾಕ್ ಮಾಡಿತ್ತು. ಅವರು ಪ್ರಚೋದನಾಕಾರಿ ಹೇಳಿಕೆಗಳನ್ನು ಹರಡುತ್ತಿಲ್ಲ ಎಂದು ಟ್ವಿಟ್ಟರ್ ಕಾರಣ ನೀಡಿತ್ತು.

Centre Directs Twitter To Remove 1178 Pakistani-Khalistani Accounts Spreading Misinformation

ಜನವರಿ 26ರಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 300ಕ್ಕೂ ಅಧಿಕ ಟ್ವಿಟ್ಟರ್ ಖಾತೆಗಳನ್ನು ಕಳೆದ ತಿಂಗಳು ಅಮಾನತು ಮಾಡಲಾಗಿತ್ತು. 'ತಂತ್ರಜ್ಞಾನ ಮತ್ತು ಮಾನವ ಪರಾಮರ್ಶೆ ಎರಡನ್ನೂ ಬಳಸಿಕೊಂಡು ಟ್ವಿಟ್ಟರ್ ಗರಿಷ್ಠ ಮಟ್ಟದಲ್ಲಿ ಕೆಲಸ ಮಾಡಿದೆ. ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ನೂರಾರು ಟ್ವೀಟ್‌ಗಳ ಮೇಲೆ ಕ್ರಮ ತೆಗೆದುಕೊಂಡಿದೆ. ಸ್ಪ್ಯಾಮ್ ಮತ್ತು ಈ ವೇದಿಕೆಯನ್ನು ಹದಗೆಡಿಸುವ ಕೃತ್ಯದಲ್ಲಿ ಭಾಗಿಯಾಗಿದ್ದ 300ಕ್ಕೂ ಅಧಿಕ ಖಾತೆಗಳನ್ನು ಅಮಾನತು ಮಾಡಲಾಗಿದೆ' ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+