Arecanut And Copra Price: ಸ್ಥಿರತೆ ಕಾಯ್ದುಕೊಂಡ ಅಡಿಕೆ ಮತ್ತು ಕೊಬ್ಬರಿ ಧಾರಣೆ

ಕುಸಿತ ಕಂಡ ಬಳಿಕ ಅಲ್ಪ ಏರಿಕೆ ಕಂಡಿದ್ದ ಅಡಿಕೆ ಧಾರಣೆ ಸದ್ಯ ಸ್ಥಿರತೆ ಕಾಯ್ದುಕೊಂಡಿದ್ದು, 55-56 ಸಾವಿರ ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಮಂಗಳವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ 56,099 ರೂಪಾಯಿಗೆ ಮಾರಾಟವಾಗಿದ್ದು ಗರಿಷ್ಠ ಮೊತ್ತ ಎನಿಸಿಕೊಂಡಿತು.

ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಯಾದ ಶಿವಮೊಗ್ಗದಲ್ಲಿ ಸರಕು ಅಡಿಕೆ ದರ ಕ್ವಿಂಟಾಲ್‌ಗೆ ಕನಿಷ್ಠ 50030 ರೂಪಾಯಿ ಇದ್ದರೆ ಗರಿಷ್ಠ ದರ 80,800 ರೂಪಾಯಿಗೆ ಮಾರಾಟವಾಗಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಗರಿಷ್ಠ 56,012 ರೂಪಾಯಿಗೆ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಗರಿಷ್ಠ 52,459 ರೂಪಾಯಿಗೆ ಮಾರಾಟವಾಗಿದೆ.

Arecanut And Kobbari (Copra) Latest Price Update

57 ಸಾವಿರ ರೂಪಾಯಿವರೆಗೆ ತಲುಪಿದ್ದ ಅಡಿಕೆ ಧಾರಣೆ 54-55 ಸಾವಿರಕ್ಕೆ ಕುಸಿತ ಕಂಡಿತ್ತು, ಮತ್ತೆ ಬೆಲೆ ಏರಿಕೆ ಕಂಡು 56 ಸಾವಿರ ರೂಪಾಯಿ ತಲುಪಿದ್ದು ಸದ್ಯ ಅದೇ ಧಾರಣೆಯಲ್ಲಿ ಮುಂದುವರೆಯುತ್ತಿದೆ.

ಆಗಸ್ಟ್ 1ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ತುಮಕೂರು ರಾಶಿ ₹53,100 ₹54,050 ₹53,500
2 ಬಂಟ್ವಾಳ ಕೋಕಾ ₹12,500 ₹25,000 ₹22,500
3 ಬಂಟ್ವಾಳ ಹೊಸ ವೆರೈಟಿ ₹27,500 ₹44,200 ₹42,000
4 ಬಂಟ್ವಾಳ ಹಳೆಯ ವೆರೈಟಿ ₹46,000 ₹48,000 ₹47,000
5 ಚನ್ನಗಿರಿ ರಾಶಿ ₹52,512 ₹56,012 ₹54,185
6 ಪುತ್ತೂರು ಹೊಸ ವೆರೈಟಿ ₹34,000 ₹44,200 ₹39,100
7 ಶಿವಮೊಗ್ಗ ರಾಶಿ ₹41,399 ₹56,612 ₹54,659
8 ಶಿವಮೊಗ್ಗ ಸರಕು ₹50,030 ₹80,800 ₹74,200
9 ಸಾಗರ ರಾಶಿ ₹51,409 ₹52,459 ₹51,409
10 ಸಾಗರ ಕೆಂಪುಗೋಟು ₹41,099 ₹41,099 ₹41,099
11 ಸಿದ್ದಾಪುರ ಕೋಕಾ ₹33,019 ₹35,869 ₹34,989
12 ಸಿದ್ದಾಪುರ ಕೆಂಪು ಗೋಟು ₹33,019 ₹35,869 ₹34,989
13 ಶಿರಸಿ ಬೆಟ್ಟೆ ₹43,699 ₹47,609 ₹45,518
14 ಶಿರಸಿ ಚಾಲಿ ₹38,508 ₹44,001 ₹42,515
15 ಯಲ್ಲಾಪುರ ಅಪಿ ₹56,899 ₹63,395 ₹60,099
16 ಯಲ್ಲಾಪುರ ಚಾಲಿ ₹37,719 ₹43,329 ₹42,333
17 ಯಲ್ಲಾಪುರ ರಾಶಿ ₹49,239 ₹55,219 ₹52,399

ಕೊಬ್ಬರಿ ದರ ಕೂಡ ರಾಜ್ಯದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ, ಬೆಲೆಯಲ್ಲಿ ಅಲ್ಪ ಏರಿಳಿಕೆ ಕಾಣುತ್ತಿದ್ದು, 9 ರಿಂದ 10 ಸಾವಿರ ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಆಗಸ್ಟ್ 1ರಂದು ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಟ 8,500 ರೂಪಾಯಿ ಇದ್ದರೆ, ಗರಿಷ್ಠ 9,400 ರೂಪಾಯಿಗೆ ಹರಾಜಾಗಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 11,000 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 12,500 ಇತ್ತು. ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಗರಿಷ್ಠ 9,250 ರೂಪಾಯಿ ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹8,300 ₹9,250 ₹8,761
2 ತಿಪಟೂರು ಕೊಬ್ಬರಿ ₹8,500 ₹9,400 ₹9,000
3 ಬೆಂಗಳೂರು ಕೊಬ್ಬರಿ ₹11,000 ₹12,500 ₹11,750
4 ಕೆ.ಆರ್.ಪೇಟೆ ಬೇರೆ ₹7,711 ₹7,711 ₹7,711
5 ಪುತ್ತೂರು ಬೇರೆ ₹4,500 ₹7,300 ₹5,900
6 ತುಮಕೂರು ಬೇರೆ ₹3,650 ₹4,180 ₹4,050
7 ತುರುವೇಕೆರೆ ಕೊಬ್ಬರಿ ₹9,400 ₹9,400 ₹9,400
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+