Arecanut & Copra Price: ರಾಜ್ಯದಲ್ಲಿ ಅಡಿಕೆ ಮತ್ತು ಕೊಬ್ಬರಿ ಧಾರಣೆ ಹೇಗಿದೆ?

ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. ರಾಶಿ ಕೆಂಪಡಕೆ ಧಾರಣೆ ರಾಜ್ಯದಲ್ಲಿ 35,000 ರೂಪಾಯಿಯಿಂದ 48,000 ರೂಪಾಯಿ ನಡುವೆ ಮಾರಾಟವಾಗುತ್ತಿದೆ. ಇನ್ನೂ ಹಲವು ದಿನ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಳ್ಳಲಿದೆ. ಗುರುವಾರ ರಾಜ್ಯದ ಶಿವಮೊಗ್ಗ, ಸಿದ್ಧಾಪುರ, ಚನ್ನಗಿರಿ, ಚಿತ್ರದುರ್ಗ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 40,069 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 47,169 ರೂಪಾಯಿಗಳಾಗಿತ್ತು. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 40,009 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 46,849 ರೂಪಾಯಿ ಆಗಿತ್ತು.

Arecanut and Copra Price In Karnataka On November 16th

ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 46,099 ರೂಪಾಯಿ ಇದ್ದರೆ ಗರಿಷ್ಠ 47,389 ರೂಪಾಯಿ ಆಗಿತ್ತು. ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 44,950 ರೂಪಾಯಿ ಇದ್ದರೆ ಗರಿಷ್ಠ 54,879 ರೂಪಾಯಿಗೆ ಮಾರಾಟವಾಗಿದೆ.

ನವೆಂಬರ್ 17 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಚನ್ನಗಿರಿ ರಾಶಿ ₹46,099 ₹47,389 ₹46,549
2 ಪುತ್ತೂರು ಹೊಸ ವೆರೈಟಿ ₹27,000 ₹36,500 ₹31,750
3 ಬಂಟ್ವಾಳ ಹೊಸ ವೆರೈಟಿ ₹43,500 ₹48,500 ₹46,500
4 ಕುಮುಟಾ ಹಳೆ ಚಾಲಿ ₹37,369 ₹39,399 ₹38,769
5 ಕುಮುಟಾ ಹೊಸ ಚಾಲಿ ₹29,111 ₹33,779 ₹32,549
6 ಕುಮುಟಾ ಕೋಕಾ ₹17,099 ₹31,889 ₹30,569
7 ಸಾಗರ ಹೊಸವೆರೈಟಿ ₹23,989 ₹32,299 ₹31,399
8 ಸಾಗರ ಕೆಂಪುವೆರೈಟಿ ₹27,611 ₹34,599 ₹33,669
9 ಸಾಗರ ರಾಶಿ ₹40,009 ₹46,849 ₹45,099
10 ಶಿವಮೊಗ್ಗ ರಾಶಿ ₹40,069 ₹47,169 ₹46,109
11 ಶಿರಾ ಇತರೆ ₹9,000 ₹47,500 ₹46,178
12 ಶಿರಸಿ ಬೆಟ್ಟೆ ₹27,199 ₹41,299 ₹35,301
13 ಶಿರಸಿ ಬಿಳೆಗೋಟು ₹29,609 ₹35,505 ₹34,143
14 ಶಿರಸಿ ಚಾಲಿ ₹36,171 ₹40,899 ₹39,177
15 ಶಿರಸಿ ರಾಶಿ ₹39,699 ₹46,899 ₹44,132
16 ತುಮಕೂರು ರಾಶಿ ₹43,600 ₹45,100 ₹44,500
17 ಯಲ್ಲಾಪುರ ಆಪಿ ₹64,779 ₹64,779 ₹64,779
18 ಯಲ್ಲಾಪುರ ರಾಶಿ ₹44,950 ₹54,879 ₹49,899
19 ಯಲ್ಲಾಪುರ ಕೆಂಪುಗೋಟು ₹32,399 ₹35,099 ₹33,318
20 ಯಲ್ಲಾಪುರ ಚಾಲಿ ₹37,499 ₹40,599 ₹39,599

ಸ್ಥಿರತೆ ಕಾಯ್ದುಕೊಂಡ ಕೊಬ್ಬರಿ ಧಾರಣೆ

ಗುರುವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಕೂಡ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 7,500 ರೂಪಾಯಿ ಇದ್ದರೆ ಗರಿಷ್ಠ 8,500 ರೂಪಾಯಿಗೆ ಮಾರಾಟವಾಗಿದೆ.

ತುರುವೇಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ 8,200 ರೂಪಾಯಿಗೆ ಮಾರಾಟವಾಗಿದ್ದು, ಹುಳಿಯಾರಿನಲ್ಲಿ 8,000 ರೂಪಾಯಿ ಮತ್ತು ತುಮಕೂರು ಮಾರುಕಟ್ಟೆಯಲ್ಲಿ ಇತರೆ ಮಾದರಿ ಕೊಬ್ಬರಿಗೆ ಕ್ವಿಂಟಾಲ್‌ಗೆ ಕನಿಷ್ಠ 3950 ರೂಪಾಯಿ ಆಗಿದ್ದರೆ, ಗರಿಷ್ಠ ಬೆಲೆ 4800 ರೂಪಾಯಿ ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ತಿಪಟೂರು ಕೊಬ್ಬರಿ ₹7,500 ₹8,000 ₹8,000
2 ತುಮಕೂರು ಇತರೆ ₹3,950 ₹4,800 ₹4,200
3 ಹುಳಿಯಾರ್ ಕೊಬ್ಬರಿ ₹8,000 ₹8,200 ₹8,000
4 ಬೆಂಗಳೂರು ಕೊಬ್ಬರಿ ₹9,500 ₹11,500 ₹10,500
5 ಸಿ.ಆರ್. ಪಟ್ಟಣ ಕೊಬ್ಬರಿ ₹8,700 ₹8,700 ₹8,700
6 ತುರುವೇಕೆರೆ ಕೊಬ್ಬರಿ ₹8,200 ₹8,200 ₹8,200
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+