Arecanut And Copra Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕೊಬ್ಬರಿ ಧಾರಣೆ
57 ಸಾವಿರ ದಾಟಿದ್ದ ಬಳಿಕ ಅಲ್ಪ ಕುಸಿತ ಕಂಡದ್ದ ಅಡಿಕೆ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಸದ್ಯ ರಾಶಿ ಅಡಿಕೆ ದರ ಕ್ವಿಂಟಾಲ್‌ಗೆ 54000 - 55000 ರೂಪಾಯಿ ಆಸುಪಾಸಿನಲ್ಲಿದೆ. ವಿವಿಧ ಮಾರುಕಟ್ಟೆಗಳಲ್ಲಿ 55 ಸಾವಿರಕ್ಕಿಂತ ಅಧಿಕ ದರಕ್ಕೆ ಮಾರಾಟವಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಳದ ಸೂಚನೆ ನೀಡಿದೆ.
ಪ್ರಮುಖ ಅಡಿಕೆ ಮಾರುಕಟ್ಟೆಯಾಗಿರುವ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 41,100 ಇದ್ದರೆ, ಗರಿಷ್ಠ 55,399 ರೂಗಳವರೆಗೆ ಮಾರಾಟವಾಗಿದೆ. ತುಮಕೂರಿನಲ್ಲಿ ರಾಶಿ ಅಡಿಕೆ ದರ ಕನಿಷ್ಠ 54,600 ಇದ್ದರೆ, ಗರಿಷ್ಠ55,400 ರೂಪಾಯಿಗೆ ಮಾರಾಟವಾಗಿದೆ. ಸಾಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಕನಿಷ್ಠ ₹42,009 ರೂಪಾಯಿ ಇದ್ದರೆ ಗರಿಷ್ಠ ₹53,529 ರೂಪಾಯಿಗೆ ಹರಾಜಾಗಿದೆ.

ಜುಲೈ 22ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ:
9000 ರೂಪಾಯಿ ತಲುಪಿರುವ ಕೊಬ್ಬರಿ ದರ ಸದ್ಯ ಅದೇ ಧಾರಣೆ ಮುಂದುವರೆಸಿದೆ. ತಿಪಟೂರಿನಲ್ಲಿ ಕೊಬ್ಬರಿ ದರ ಕ್ವಿಂಟಾಲ್‌ಗೆ ಗರಿಷ್ಠ 9009 ರೂಪಾಯಿಗೆ ಮಾರಾಟವಾಗಿದೆ. ಗುಬ್ಬಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ 8200 ರೂಪಾಯಿ ಇದ್ದರೆ, ಅರಸೀಕೆರೆಯಲ್ಲಿ 8808 ರೂಪಾಯಿವರೆಗೆ ಮಾರಾಟವಾಗಿದೆ.
ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ:
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹7,500 | ₹9,009 | ₹8,000 |
| 2 | ಅರಸೀಕೆರೆ | ಬಾಲ್ | ₹7,500 | ₹8,766 | ₹8,146 |
| 3 | ಹುಳಿಯಾರು | ಬಾಲ್ | ₹8,500 | ₹8,900 | ₹8,750 |
| 4 | ತುರುವೇಕೆರೆ | ಕೊಬ್ಬರಿ | ₹8,700 | ₹8,700 | ₹8,700 |
| 5 | ತುಮಕೂರು | ಕೊಬ್ಬರಿ | ₹7,500 | ₹8,650 | ₹8,050 |
| 6 | ತುಮಕೂರು | ಮಿಲ್ಲಿಂಗ್ | ₹3,400 | ₹4,650 | ₹4,050 |
| 7 | ತುಮಕೂರು | ಇತರೆ | ₹7,950 | ₹8,250 | ₹8,120 |
| 8 | ಕೆ.ಆರ್.ಪೇಟೆ | ಇತರೆ | ₹7,727 | ₹7,727 | ₹7,727 |












Click it and Unblock the Notifications