Arecanut & Copra Price: ಅಡಿಕೆ ಬೆಲೆ ಭರ್ಜರಿ ಏರಿಕೆ! ಕೊಬ್ಬರಿ ಬೆಲೆ ಎಷ್ಟಿದೆ?
ಕಳೆದ ವರ್ಷ ಹೆಚ್ಚಿನ ಏರಿಳಿತಗಳನ್ನು ಕಾಣದ ಅಡಿಕೆ ಬೆಲೆ ಈ ಬಾರಿ ಏರಿಕೆಯಾಗುವ ಮುನ್ಸೂಚನೆ ಕೊಟ್ಟಿದೆ. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಬೆಲೆ ಏರಿಕೆಯೊಂದೇ ಪರಿಹಾರವಾಗಿದ್ದರೂ ಹಲವು ಕಾರಣಗಳಿಂದ ಅಡಿಕೆಗೆ ನಿರೀಕ್ಷಿತ ಬೆಲೆ ಸಿಕ್ಕಿಲ್ಲ, ಆದರೆ ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿರುವುದ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಸೋಮವಾರ ಕೂಡ ಅಡಿಕೆ ಬೆಲೆಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ. ರಾಶಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ 50,000 ರೂಪಾಯಿ ಗಡಿಯನ್ನು ದಾಟಿದ್ದು ನಿರಂತರವಾಗಿ ಏರಿಕೆಯಾಗುತ್ತಿದೆ. ಸರಕು ಅಡಿಕೆ ಬೆಲೆ ಕೂಡ ಕ್ವಿಂಟಾಲ್‌ಗೆ 90,000 ರೂಪಾಯಿ ಗಡಿಯನ್ನು ದಾಟಿದೆ.

ಸೋಮವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ ಗರಿಷ್ಠ 52,389 ರೂಪಾಯಿವರೆಗೆ ಮಾರಾಟವಾಗಿದೆ. ಸರಕು ಅಡಿಕೆ ಬೆಲೆ ಗರಿಷ್ಠ 93,996 ರೂಪಾಯಿವರೆಗೆ ಮಾರಾಟವಾಗಿದೆ. ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಗರಿಷ್ಠ 58,399 ರೂಪಾಯಿವರೆಗೆ ಮಾರಾಟವಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಯಲ್ಲಾಪುರ | ಬಿಳೆ ಗೊಟು | ₹12,899 | ₹26,011 | ₹21,710 |
| 2 | ಯಲ್ಲಾಪುರ | ಚಾಲಿ | ₹27,892 | ₹38,889 | ₹35,799 |
| 3 | ಯಲ್ಲಾಪುರ | ಕೆಂಪು ಗೋಟು | ₹12,899 | ₹26,899 | ₹22,620 |
| 4 | ಯಲ್ಲಾಪುರ | ಅಪಿ | ₹59,399 | ₹60,901 | ₹60,699 |
| 5 | ಯಲ್ಲಾಪುರ | ತಟ್ಟಿ ಬೆಟ್ಟೆ | ₹30,819 | ₹38,699 | ₹33,890 |
| 6 | ಯಲ್ಲಾಪುರ | ರಾಶಿ | ₹39,600 | ₹58,399 | ₹47,809 |
| 7 | ಯಲ್ಲಾಪುರ | ಕೋಕಾ | ₹4,499 | ₹14,499 | ₹11,899 |
| 8 | ಶಿವಮೊಗ್ಗ | ಗೊರಬಲು | ₹16,059 | ₹31,111 | ₹23,899 |
| 9 | ಶಿವಮೊಗ್ಗ | ಬೆಟ್ಟೆ | ₹47,299 | ₹56,109 | ₹55,299 |
| 10 | ಶಿವಮೊಗ್ಗ | ರಾಶಿ | ₹40,009 | ₹52,389 | ₹50,089 |
| 11 | ಶಿವಮೊಗ್ಗ | ಸರಕು | ₹53,100 | ₹93,996 | ₹74,199 |
| 12 | ಅರಸಿಕೆರೆ | ಸಿಪ್ಪೆಗೋಟು | ₹12,000 | ₹12,200 | ₹12,200 |
| 13 | ಬಂಟ್ವಾಳ | ಕೋಕಾ | ₹20,000 | ₹27,500 | ₹26,000 |
| 14 | ಬಂಟ್ವಾಳ | ಹೊಸ ವೆರೈಟಿ | ₹30,000 | ₹39,500 | ₹37,500 |
| 15 | ಬಂಟ್ವಾಳ | ಹಳೆ ವೆರೈಟಿ | ₹45,200 | ₹49,200 | ₹47,000 |
| 16 | ಚನ್ನಗಿರಿ | ರಾಶಿ | ₹43,000 | ₹52,279 | ₹48,821 |
| 17 | ಶಿರಸಿ | ಬೆಟ್ಟೆ | ₹22,299 | ₹34,689 | ₹28,527 |
| 18 | ಶಿರಸಿ | ರಾಶಿ | ₹41,699 | ₹46,371 | ₹43,025 |
| 19 | ಶಿರಸಿ | ಚಾಲಿ | ₹32,643 | ₹37,499 | ₹35,579 |
| 20 | ಕುಮಟಾ | ಚಾಲಿ | ₹33,689 | ₹37,100 | ₹35,429 |
| 21 | ಕುಮಟಾ | ಕೋಕಾ | ₹6,589 | ₹17,009 | ₹14,859 |
ಕೊಬ್ಬರಿ ಧಾರಣೆ ಹೇಗಿದೆ?
2024ರಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದ ಕೊಬ್ಬರಿ ಬೆಲೆ, ತೆಂಗು ಬೆಳೆಗಾರರಲ್ಲಿ ನೆಮ್ಮದಿ ತರಿಸಿತ್ತು. ರೋಗ, ಬರಗಾಲದಲ್ಲೂ ಕಡಿಮೆ ಇಳುವರಿ ಪಡೆದಿದ್ದ ರೈತರಿಗೆ ಬೆಲೆ ಏರಿಕೆ ಸ್ವಲ್ಪ ರಿಲೀಫ್ ಕೊಟ್ಟಿತ್ತು. ಈ ವರ್ಷ ತೆಂಗಿನಕಾಯಿ ಬೆಲೆ ಗಗನಕ್ಕೇರಿದ್ದು ಮುಂದಿನ ದಿನಗಳಲ್ಲಿ ಕೊಬ್ಬರಿಗೆ ಮತ್ತಷ್ಟು ಬಂಪರ್ ಬೆಲೆ ಬರುವ ನಿರೀಕ್ಷೆಯಲ್ಲಿದ್ದಾರೆ ಬೆಳೆಗಾರರು.
ಸೋಮವಾರ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ 15,000 ರೂಪಾಯಿ ಒಳಗೆ ವಹಿವಾಟು ನಡೆಸಿದೆ. ಸೋಮವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 14,000 ರೂಪಾಯಿ ಇದ್ದರೆ ಗರಿಷ್ಠ 14,700 ರೂಪಾಯಿ ಆಗಿತ್ತು. ಅರಸೀಕೆರೆ ಮಾರುಕಟ್ಟೆಯಲ್ಲಿ ಗರಿಷ್ಠ 14,450 ರೂಪಾಯಿಗೆ ಮಾರಾಟವಾಗಿದೆ. ತೆಂಗಿನಕಾಯಿ ಬೆಲೆ ಭರ್ಜರಿ ಏರಿಕೆ ಕಂಡಿದ್ದು, ಕೊಬ್ಬರಿ ಬೆಲೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹14,000 | ₹14,700 | ₹14,400 |
| 2 | ಅರಸೀಕೆರೆ | ಕೊಬ್ಬರಿ | ₹14,000 | ₹14,450 | ₹14,000 |
| 3 | ಅರಸೀಕೆರೆ | ಮಿಲ್ಲಿಂಗ್ | ₹9,000 | ₹12,668 | ₹10,500 |
| 4 | ಅರಸೀಕೆರೆ | ಇತರೆ | ₹9,000 | ₹11,600 | ₹11,200 |
| 5 | ತುರುವೇಕೆರೆ | ಕೊಬ್ಬರಿ | ₹14,000 | ₹14,400 | ₹14,100 |
| 6 | ತುರುವೇಕೆರೆ | ಇತರೆ | ₹9,500 | ₹11,000 | ₹10,000 |
-
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ












Click it and Unblock the Notifications