Alamatti dam: ಈ ಜಲಾಶಯದಿಂದ 99 ಕೆರೆಗಳಿಗೆ ನೀರು, ಎಲ್ಲಿಂದ ಎಲ್ಲಿವರೆಗೆ?- ದಿನಾಂಕಗಳ ಮಾಹಿತಿ ತಿಳಿಯಿರಿ

ವಿಜಯಪುರ, ಫೆಬ್ರವರಿ, 19: 2023ರಲ್ಲಿ ಮಳೆಗಾಲ ಕೈಕೊಟ್ಟಿದ್ದು, ಇದೀಗ 2024ರ ಚಳಿಗಾಲದ ನಡುವೆಯೂ ಬಿರಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಹೀಗೆ ಹಿಂಗಾದ್ರೆ ಇನ್ನು ಬೇಸಿಗೆ ಬಂದರೆ ಹೇಗೆ ಎನ್ನುವ ಪ್ರಶ್ನೆ ರಾಜ್ಯದ ಜನರಲ್ಲಿ ಕಾಡುತ್ತಿದೆ. ಮತ್ತೊಂದೆಡೆ ಇದೀಗ ಪ್ರಮುಖ ಜಲಾಶಗಳು ಕೂಡ ಬರಿದಾಗುತ್ತಿದೆ. ಅಲ್ಲದೆ ಈ ವೇಳೆ ಹಲವೆಡೆ ಈಗಾಗಲೇ ನೀರಿನ ಕೊರತೆಯೂ ಎದ್ದು ಕಾಣುತ್ತಿದ್ದು, ಕೆಲವು ಜಲಾಶಯಗಳಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಹಾಗೆಯೇ ಆಲಮಟ್ಟಿ ಜಲಾಶಯದಿಂದಲೂ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಮುಳವಾಡ ಏತ ನೀರಾವರಿ ಯೋಜನೆಯಿಂದ 72 ಹಾಗೂ ಚಿಮ್ಮಲಗಿ ಪೂರ್ವ ಮತ್ತು ಪಶ್ಚಿಮ ಕಾಲುವೆ ವ್ಯಾಪ್ತಿಯ 27 ಸೇರಿ ಜಿಲ್ಲೆಯ 99 ಕೆರೆಗಳ ಭರ್ತಿಗೆ ಇಂದಿನಿಂದ (ಫೆಬ್ರವರಿ 19) ನೀರು ಹರಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ. ಅದಕ್ಕಾಗಿ ಕೃಷ್ಣಾ ಭಾಗ್ಯ ನಿಗಮ ಸನ್ನದ್ಧವಾಗಿದ್ದು, ಹಲವು ಬಾರಿ ಪೂರ್ವಭಾವಿ ಸಭೆ ನಡೆಸಿ ನೀರು ಯಾವ ರೀತಿ ಹರಿಸುವುದು ಎಂಬುದರ ಬಗ್ಗೆ ಸಿದ್ಧತೆ ಮಾಡಿಕೊಂಡಿದೆ.

Alamati Dam: Decision to water release to 99 lakes, know details

ಫೆಬ್ರವರಿ 19ರಿಂದ ಮಾರ್ಚ್‌ 10ರವರೆಗೆ ನಾನಾ ಹಂತಗಳಲ್ಲಿ ನೀರು ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹದ 5.5 ಟಿಎಂಸಿ ಅಡಿ ನೀರಿನ ಸದ್ಯ 1.8 ಟಿಎಂಸಿ ಅಡಿ ನೀರು ಬಳಕೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದಾರೆ. ಈ ಪ್ರಕಾರ ನೀರು ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೊದಲು ಕಾಲುವೆಯ ಕೊನೆ ಹಂತದ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಆದರೆ ಈ ನೀರನ್ನು ಕೃಷಿ ಬಳಕೆಗೆ ಬಳಸುವಂತಿಲ್ಲ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್‌ ಎಚ್‌.ಎನ್‌.ಶ್ರೀನಿವಾಸ ತಿಳಿಸಿದರು ಅಂಯಾ ಪ್ರಜಾವಾಣಿಯಲ್ಲಿ ವರದಿಯಾಗಿದೆ. ಇನ್ನು ಕಾಲುವೆ ನೀರು ವಿವಿಧ ಉದ್ದೇಶಕ್ಕೆ ಬಳಸಬಾರದು, ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲು ವಿಜಯಪುರ ಜಿಲ್ಲಾಧಿಕಾರಿಗಳು ಫೆಬ್ರವರಿ 19ರಂದು ಬೆಳಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್‌ ಸಭೆ ಕರೆದಿದ್ದರು.

ಕಟ್ಟುನಿಟ್ಟಿನ ವಾಚ್‌ ಮತ್ತು ವಾರ್ಡ್ ಕೈಗೊಳ್ಳುವ ಕುರಿತು ವಿವಿಧ ನಿರ್ದೇಶನ ನೀಡಲಿದ್ದಾರೆ. ನೀರು ಸರಾಗವಾಗಿ ಹೋಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಿದ್ದಾರೆ. ಆಲಮಟ್ಟಿ ಡ್ಯಾಂನಲ್ಲಿ ಸಂಗ್ರಹವಾದ ನೀರು ಇನ್ನೂ ಜೂನ್‌ವರೆಗೂ ಕುಡಿಯುವ ಉದ್ದೇಶಕ್ಕೆ, ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಸಂಗ್ರಹಿಸಿಡಬೇಕಿದೆ. ಆದ್ದರಿಂದ ನೀರು ಪೋಲಾಗದಂತೆ ಜಿಲ್ಲಾಧಿಕಾರಿಗಳು ಜಲಾಶಯದ ನೀರಿನ ಸಂಗ್ರಹದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+