"ಕೃಷಿ ಕೂಲಿಕಾರರನ್ನು ಕಡೆಗಣಿಸಿದ ಯಡಿಯೂರಪ್ಪ ಸರ್ಕಾರ!"

ಬೆಂಗಳೂರು, ಮೇ 8: ಕೋವಿಡ್-19 ಲಾಕ್ ಡೌನ್ ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ಹೂವು ಬೆಳೆದ ರೈತರಿಗೆ, ಕ್ಷೌರಿಕರು, ಅಗಸರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು, ಮೊದಲಾದವರಿಗೆ ರೂ. 1610 ಕೋಟಿ ನೇರವನ್ನು ಘೋಷಣೆ ಮಾಡಿದ್ದೀರಿ.

Recommended Video

      ಬೇರೆ ರಾಜ್ಯಗಳಿಂದ ತಬ್ಲೀಘಿಗಳು ನಮ್ಮ ರಾಜ್ಯಕ್ಕೆ ಬರಬೇಕಾದರೆ ಹೀಗೆ ಮಾಡ್ಲೇಬೇಕು | Sri ramulu

      ತಮ್ಮ ಸರಕಾರದ ಈ ಸಕಾಲಿಕ ಕ್ರಮದಿಂದಾಗಿ ಕೊರೋನ ಸೋಂಕಿನ ಹಾವಳಿಯಿಂದ ಬಳಲಿದ ಶ್ರಮಿಕ ವರ್ಗಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದ್ದು ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ಆದರೆ, ಕೃಷಿ ಕೂಲಿಕಾರರನ್ನು ಯಡಿಯೂರಪ್ಪ ಸರ್ಕಾರ ಕಡೆಗಣಿಸಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹೇಳಿದೆ.

      ತಮ್ಮ ಸರ್ಕಾರ ಘೋಷಿಸಿದ ಈ ಪ್ಯಾಕೆಜನಲ್ಲಿ ಕೃಷಿ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಾ ಬಂದಿರುವ ಕೃಷಿ ಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು ತುಂಬಾ ನೋವಿನಿಂದ ಹೇಳುತ್ತೇವೆ. ರಾಜ್ಯದ ವಾರ್ಷಿಕ ಬಜೆಟ್ ಗಳಲ್ಲಿಯು ಅವರನ್ನು ಕಡೆಗಣಿಸುತ್ತ ಬರಲಾಗಿದೆ. ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಅವರಿಗಾಗಿ ಕಲ್ಯಾಣ ಕಾಯಿದೆ ಯಾಗಲಿ, ಕಲ್ಯಾಣ ಮಂಡಳಿಯಾಗಲಿ, ರಚನೆಯಗಿಲ್ಲ.

      Agriculture workes ignored by Yediyurappa government alleges AIAWU

      ಕೃಷಿ ರಂಗದಲ್ಲಿಯು ಅವರಿಗೆ ಮೊದಲಿನಂತೆ ಕೆಲಸ ದೊರೆಯುದಿಲ್ಲ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕುಟುಂಬದ ಒಬ್ಬ ಸದ್ಯಸನಿಗೆ ಮಾತ್ರ ಕೆಲಸ ದೊರುಕುವದರಿಂದ ಕೃಷಿ ಕಾರ್ಮಿಕ ಕುಟುಂಬಗಳು ವಲಸೆ ಹೋಗುತ್ತೇವೆ ಮತ್ತು ಸಿಕ್ಕಂಥ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತೇವೆ. ಈ ಪ್ರಶ್ನೆಗಳನ್ನು ನಾವು ಆಗಾಗ ಸರ್ಕಾದ ಗಮನಕ್ಕೆ ತರುತ್ತಾ ಬಂದಿದ್ದೇವೆ.

      ಕೊರೊನದಿಂದ ಕೃಷಿ ಕಾರ್ಮಿಕರು ಸಹ ಸಂಕಷ್ಠಕ್ಕೆ ಗುರಿಯಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಅವರಿಗೆ ಕೆಲಸವಿಲ್ಲ, ಇವರಿಗೆ ತಾತ್ಕಾಲಿಕ ಪರಿಹಾರವಾಗಿ ರೂ, 5000/- ನೆರವು ನೀಡಬೇಕೆಂದು ಆರಂಭದಲ್ಲಿಯೆ ನಾವು ತಮ್ಮ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ, ಆದರೆ ಈಗಲೂ ಅವರನ್ನು ಕೈ ಬಿಟ್ಟು ತಾರತ್ಯಮ್ಮ ಮಾಡಲಾಗಿದೆ.

      ಆದರಿಂದ ರಾಜ್ಯದ ಕೃಷಿ ಕಾರ್ಮಿಕರಿಗು ರೂ.5000/- ನೆರವು ನೀಡಬೇಕೆಂದು ವಿನಂತಿಸುತ್ತೇವೆ, ಬೇರೆ ಯಾವ ಮೂಲದಿಂದಲೂ ಪರಿಹಾರ ಪಡೆಯದಿರುವ ಕೃಷಿ ಕಾರ್ಮಿಕರಿಗೆ ನೆರೆವು ಸಂದಾಯ ಮಾಡುವಿರಿ ಎಂದು ಆಶಿಸುತ್ತೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಹಾಗೂ ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+