• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ 6 ರಾಜ್ಯದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿ

|
Google Oneindia Kannada News

ನವದೆಹಲಿ, ಜುಲೈ 13; ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಆಂಧ್ರ ಪ್ರದೇಶ ಮರುಸೇರ್ಪಡೆಗೊಳ್ಳಲು ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ. ಇತರ ರಾಜ್ಯಗಳಾದ ಹಾಗೂ ಬಿಹಾರ, ಜಾರ್ಖಂಡ್, ಗುಜರಾತ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲೂ ಬೆಳೆ ವಿಮೆ ಯೋಜನೆಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ 6 ರಾಜ್ಯಗಳಲ್ಲಿ ಆರಂಭದಲ್ಲಿ ಫಸಲ್ ಭೀಮಾ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಯೋಜನೆಯಿಂದ ರಾಜ್ಯಗಳು ಹೊರಗುಳಿದಿದ್ದವು. 2018-19ರಲ್ಲಿ ಫಸಲ್‌ ಭೀಮಾ ಯೋಜನೆ ಆಯ್ಕೆಯಿಂದ ಹೊರಗುಳಿದ ಮೊದಲ ರಾಜ್ಯ ಬಿಹಾರ ಆಗಿದೆ.

ಭೀಮಾ ಕೋರೆಗಾಂವ್ ಪ್ರಕರಣ: ಸುಧಾ ಭಾರದ್ವಾಜ್‌ಗೆ ಜಾಮೀನುಭೀಮಾ ಕೋರೆಗಾಂವ್ ಪ್ರಕರಣ: ಸುಧಾ ಭಾರದ್ವಾಜ್‌ಗೆ ಜಾಮೀನು

2019-20ರಲ್ಲಿ ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ಪಿಎಂಎಫ್‌ಬಿವೈನಿಂದ ಹೊರಗುಳಿದಿದ್ದವು. ಇನ್ನು 2020-21ರಲ್ಲಿ ತೆಲಂಗಾಣ, ಜಾರ್ಖಂಡ್ ಮತ್ತು ಗುಜರಾತ್ ಯೋಜನೆಗೆ ಆಯ್ಕೆಯಾಗದೇ ಹೊರಗುಳಿದಿದ್ದವು. ಈಗ ಈ ರಾಜ್ಯಗಳಲ್ಲೂ ಯೋಜನೆ ಆರಂಭವಾಗುತ್ತಿದೆ.

ಆಂಧ್ರದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಜೊತೆ ಮಾತುಕತೆ ನಡೆಸಿ ಆಂಧ್ರ ಪ್ರದೇಶವನ್ನು ಪಿಎಂಎಫ್‌ಬಿವೈಗೆ ಮರುಸೇರಿಸಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೂಚನೆ ನೀಡಿದ್ದಾರೆ. ಈ ವಿಚಾರವಾಗಿ ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ ಜಗನ್‌ ಮೋಹನ್ ರೆಡ್ಡಿ ಭೇಟಿ ಮಾಡಿ, ಜುಲೈ 7ರಂದು ಮಾತುಕತೆ ನಡೆಸಿದ್ದರು.

ಆಂಧ್ರ ಪ್ರದೇಶವು ಎಂಎಫ್‌ಬಿವೈ ಆಯ್ಕೆಯಿಂದ ಹೊರಗುಳಿಯಲು ನಿರ್ಧರಿಸಿದಾಗ, ನಾಲ್ಕು ಕಾರಣಗಳನ್ನು ಉಲ್ಲೇಖಿಸಿತ್ತು. ಮೊದಲನೆಯದಾಗಿ ಯೋಜನೆಯು ಸ್ವಯಂಪ್ರೇರಿತವಾಗಿರಬೇಕು, ಎರಡನೇಯದಾಗಿ ರಾಜ್ಯಗಳಿಗೆ ಆಯ್ಕೆಗಳನ್ನು ನೀಡಬೇಕು. ಮೂರನೇಯದಾಗಿ ಯೋಜನೆಯು ಸಾರ್ವತ್ರಿಕವಾಗಿರಬೇಕು ಮುತ್ತು ಬೆಳೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಆಂಧ್ರ ಸರ್ಕಾರದ ಅಪ್ಲಿಕೇಶನ್‌ನ ಇ-ಕ್ರಾಪ್‌ನ ಸ್ವಂತ ಡೇಟಾಬೇಸ್ ಅನ್ನು ಬಳಸಲು ಆಯ್ಕೆಯನ್ನು ನೀಡಬೇಕೆಂದು ಬೇಡಿಕೆ ಇಡಲಾಗಿತ್ತು.

ಆಂಧ್ರ ಸರ್ಕಾರದ ಒಪ್ಪಿಗೆಯಂತೆ ಎಲ್ಲಾ ಆಯ್ಕೆಗಳಿಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆದ್ದರಿಂದ ಆಂಧ್ರ ಪ್ರದೇಶ ಪ್ರಧಾನಮಂತ್ರಿ ಫಸಪ್‌ ಭೀಮಾ ಯೋಜನೆಗೆ ಮತ್ತೆ ಸೇರಲು ನಿರ್ಧರಿಸಿದೆ.

ರಾಜ್ಯಗಳಿಗೆ ಮನವರಿಕೆ; ಇತರ ಐದು ರಾಜ್ಯಗಳಾದ ಬಿಹಾರ, ಜಾರ್ಖಂಡ್, ಗುಜರಾತ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲೂ ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೃಷಿ ಸಚಿವಾಲಯವು ಅಧಿಕೃತ ಮತ್ತು ರಾಜಕೀಯ ಮಟ್ಟದಲ್ಲಿ ಅವರನ್ನು ಯೋಜನೆಗೆ ಸೇರ್ಪಡೆಗೊಳಿಸಲು ಮನವರಿಕೆ ಮಾಡಿಕೊಡುತ್ತಿದೆ.

ಕೇಂದ್ರ ಕೃಷಿ ಸಚಿವಾಲಯ ಅಧಿಕಾರಿಗಳ ತಂಡ ಜೂನ್ 23ರಂದು ತೆಲಂಗಾಣ ಸಚಿವರ ಮುಂದೆಯೂ ಯೋಜನೆ ಬಗ್ಗೆ ವಿವರಗಳನ್ನು ನೀಡಿತ್ತು. ಇನ್ನೂ ಗುಜರಾತ್ ಅನ್ನು ಯೋಜನೆಗೆ ಮತ್ತೆ ಸೇರ್ಪಡೆಗೊಳಿಸಲು ಕೇಂದ್ರ ಮುಂದಾಗಿದೆ.

ಪಶ್ಚಿಮ ಬಂಗಾಳ ಯೋಜನೆಗೆ ಮರುಸೇರ್ಪಡೆಗೊಳ್ಳುತ್ತದೆ? ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ರಾಜ್ಯಗಳನ್ನು ಮಂಡಳಿಗೆ ಮರಳಿ ತರವುದು ಕೇಂದ್ರ ಕೃಷಿ ಸಚಿವಾಲಯದ ಮಹತ್ವದ ಜವಾಬ್ದಾರಿಯಾಗಿದೆ. ಏಕೆಂದರೆ ಸಂಸದೀಯ ಸ್ಥಾಯಿ ಸಮಿತಿಯು ಕೆಲವು ರಾಜ್ಯಗಳಲ್ಲಿ ಯೋಜನೆಯನ್ನು ಜಾರಿಗೊಳಿಸದಿರುವ ಹಿಂದಿನ ಕಾರಣಗಳನ್ನು ಪರಿಶೀಲಿಸಬೇಕು ಎಂದು ಹೇಳಿದೆ.

English summary
Agriculture ministry to bring back Pradhan Mantri Fasal Bima Yojana (PMFBY) in 6 states. Bihar, Jharkhand, Gujarat, Telangana and West Bengal to join scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X