ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರ್ಯಾಯ ಇಂಧನ ಉತ್ಪಾದನೆಗೆ ಕೃಷಿ ವಿಸ್ತರಿಸಬೇಕು: ನಿತಿನ್ ಗಡ್ಕರಿ

|
Google Oneindia Kannada News

ಮುಂಬೈ ಆಗಸ್ಟ್ 28: ಇಂಧನ ಕೊರತೆಯನ್ನು ಎದುರಿಸುತ್ತಿರುವ ಭಾರತದೇಶದಲ್ಲಿ ಕೃಷಿ ವಲಯವನ್ನು ಇಂಧನ ಮತ್ತು ವಿದ್ಯುತ್ ವಲಯಕ್ಕೆ ಪೂರಕವಾಗುವಂತೆ ವಿಸ್ತರಿಸಬೇಕಾಗಿದೆ. ಪರ್ಯಾಯ ಇಂಧನ ಶಕ್ತಿ ಉತ್ಪಾದನೆಗೂ ಆದ್ಯತೆ ನೀಡಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಮುಂಬೈನಲ್ಲಿ ನಡೆದ ರಾಷ್ಟ್ರೀಯ ಸಹ-ನಿರ್ಮಾಣ ಪ್ರಶಸ್ತಿ-2022ರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಭಾರತ ಸರ್ಕಾರವು ವಾರ್ಷಿಕವಾಗಿ 15 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ. ಇದನ್ನು ಹಂತ ಹಂತವಾಗಿ ಕಡಿಮೆ ಮಾಡುವನಿಟ್ಟಿನಲ್ಲಿ ಎಥೆನಾಲ್ ಇಂಧನವನ್ನು ಹೆಚ್ಚು ಉತ್ಪಾದಿಸಲು ಯೋಚಿಸಬೇಕು. ಅದಕ್ಕೆ ಮೂಲವಾಗಿರುವ ಕೃಷಿ ವಲಯವನ್ನು ವಿದ್ಯುತ್ ಮತ್ತು ಇಂಧನ ಉತ್ಪಾದನೆಯಂತ ಕ್ಷೇತ್ರಗಳತ್ತ ವಿಸ್ತರಿಸಬೇಕು, ಉತ್ತೇಜನ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕದಲ್ಲಿ "ಸಿರಿಧಾನ್ಯ" ಮಂತ್ರ ಜಪಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಪರ್ಯಾಯ ಇಂಧನ ಉತ್ಪಾದನೆ ಹೆಚ್ಚಾಗಬೇಕು
ಕಬ್ಬು ಕೃಷಿ ಮತ್ತು ರೈತರು ಉದ್ಯಮಗಳಿಗೆ ಹೆಚ್ಚು ಕೊಡುಗೆ ನೀಡುತ್ತಾರೆ. ಸಕ್ಕರೆ ಉತ್ಪಾದನೆಯಿಂದ ಆದಾಯ ಹೆಚ್ಚಾಗುವ ಭವಿಷ್ಯದ ದೃಷ್ಟಿಯಿಂದ ಪರ್ಯಾಯ ಇಂಧನವಾದ ಎಥೆನಾಲ್ ಸಹ ಉತ್ಪಾದಿಸುವತ್ತ ಗಮನಹಿರಿಸಬೇಕು. ಎಥೆನಾಲ್‌ ಅನ್ನು ಎಥೈಲ್ ಮದ್ಯ, ಧಾನ್ಯ ಆಲ್ಕೋಹಾಲ್ ಎಂದು ಕರೆಯುತ್ತಾರೆ.

ಸಕ್ಕರೆಯ ಹುದುಗುವಿಕೆ, ಕಾರ್ನ್, ಬಾರ್ಲಿ ಗೋಧಿ ಮುಂತಾದ ಸಂಸ್ಕರಿಸಿದ ಧಾನ್ಯಗಳ ಮೂಲಕ ಎಥೆನಾಲ್ ಉತ್ಪಾದಿಸಲಾಗುತ್ತದೆ.

Agriculture Should Be Expanded To Produce Ethanol Fuel, Says Nitin Gadkari

ಭವಿಷ್ಯದ ದೃಷ್ಟಿಯಿಂದ ತಂತ್ರಜ್ಞಾನಗಳ ಸಹಾಯದಿಂದ ಪರ್ಯಾಯ ಇಂಧನಗಳತ್ತ ಗಮನ ಹರಿಸಬೇಕಾದ ತುರ್ತು ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಕೃಷಿ ಉತ್ಪನ್ನಗಳಿಂದ ಎಥೆನಾಲ್ ಉತ್ಪಾದಿಸಿ ಭಾರತ ಸ್ವಾವಲಂಬಿಯಾಗಬೇಕು ಎಂದು ಅವರು ಹೇಳಿದರು.

ಕೃಷಿಯಲ್ಲಿ ಹೆಚ್ಚು ಬೆಳವಣಿಗೆ ಸಾಧಿಸಬೇಕು
ಭಾರತ ಜನಸಂಖ್ಯೆಯ ಶೇ.65ರಿಂದ 70ರಷ್ಟು ಜನರು ಕೃಷಿಯ ಮೇಲೆಯೇ ಅವಲಂಬಿತ ಆಗಿದ್ದೇವೆ. ಆದರೆ ದೇಶದಲ್ಲಿ ಕೃಷಿ ಬೆಳವಣಿಗೆ ದರ ಕೇವಲ ಶೇ.12ರಿಂದ 13ರಷ್ಟು ಮಾತ್ರವೇ ಇದೆ. ಇದು ಹೆಚ್ಚಾಗಬೇಕಾದರೆ ಅಗತ್ಯ ಉತ್ತೇಜನ ನೀಡಬೇಕು. ಪರ್ಯಾಯ ಇಂಧನ ಉತ್ಪಾದನೆ ಸೇರಿದಂತೆ ಇನ್ನಿತರ ಯೋಜನೆ ರೂಪಿಸಬೇಕು. ಕೃಷಿಗೆ ಒತ್ತು ನೀಡಬೇಕು ಎಂದರು.

ಕೊರೊನಾ ನಂತರ ಆರ್ಥಿಕವಾಗಿ ರೈತರ ಕೈ ಹಿಡಿದ ಅನಾನಸ್: ಹೊಸ ತಳಿ ಪರಿಚಯಿಸಿದ ಇಲಾಖೆ!ಕೊರೊನಾ ನಂತರ ಆರ್ಥಿಕವಾಗಿ ರೈತರ ಕೈ ಹಿಡಿದ ಅನಾನಸ್: ಹೊಸ ತಳಿ ಪರಿಚಯಿಸಿದ ಇಲಾಖೆ!

ಪ್ರಸ್ತಕ ವರ್ಷದಲ್ಲಿ ಭಾರತದಲ್ಲಿ ಕೃಷಿ ಉತ್ತನ್ನದ ಅಗತ್ಯತೆ ಸುಮಾರು 280 ಲಕ್ಷ ಟನ್‌ಗಳಷ್ಟಿದ್ದರೆ ಅದರ ಉತ್ಪಾದನೆಯು 360 ಲಕ್ಷ ಟನ್‌ಗಳನ್ನು ದಾಟಿದೆ. ಉತ್ಪಾದನೆ, ಆಹಾರ ಭದ್ರತೆಯಲ್ಲಿ ಉತ್ತಮವಾಗಿರುವ ಭಾರತ ಇನ್ನಿತರ ದೇಶಗಂತೆ ಕೆಲವು ಮಾರ್ಗಗಳನ್ನು ಅನುಸರಿಸಬೇಕಿದೆ.

Agriculture Should Be Expanded To Produce Ethanol Fuel, Says Nitin Gadkari

ಕೃಷಿ ಉತ್ಪಾದನೆಯನ್ನು ಎಥೆನಾಲ್ ಉತ್ಪನ್ನ ತಯಾರಿಸಲು ಬಳಸಬೇಕು. ಈಗಾಗಲೇ ಬ್ರೇಜಿಲ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಅದರನ್ನು ಭಾರತ ಅನುಸರಿಸಬೇಕಿದೆ. ಕಳೆದ ವರ್ಷದ ಭಾರತದಲ್ಲಿ 400 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಆಗಿತ್ತು. ಹೀಗಿದ್ದರೂ ಕೊರತೆ ಎದುರಿಸುತ್ತಿದ್ದೇವೆ. ಹಾಗಾಗಿ ಅದರ ಉತ್ಪಾದನೆ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ವಿವರಿಸಿದರು.

English summary
Agriculture should be expanded towards production of alternative fuel ethanol, Minister for Road Transport & Highways Nitin Gadkari said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X