ಸಾಲಕ್ಕೆ ಹೆದರಿ ನೇಣಿಗೆ ಶರಣಾದ ಮೈಸೂರಿನ ರೈತ
ಮೈಸೂರು, ಜೂನ್ 8 : ಸಾಲಬಾಧೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಷಸೇವಿಸಿ ರೈತ ರಾಮಚಂದ್ರೇಗೌಡ (60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತನ ಹೆಸರಿನಲ್ಲಿ 6 ಎಕರೆ ಜಮೀನಿದ್ದು, ತಂಬಾಕು ಲೈಸೆನ್ಸ್ ಹೊಂದಿದ್ದರು. ರಾಮಚಂದ್ರೇಗೌಡ ಪಿರಿಯಾಪಟ್ಟಣದ ಸಿಂಡಿಕೇಟ್ ಬ್ಯಾಂಕಿನಲ್ಲಿ 7 ಲಕ್ಷ ರೂಪಾಯಿ ಬೆಳೆಸಾಲ, ಹಾಗೂ ಸುಮಾರು 3 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದರು.[ವರದಕ್ಷಿಣೆ ದಾಹಕ್ಕೆ ಮೈಸೂರಿನಲ್ಲಿ ಮಹಿಳೆ, ಮಗು ಬಲಿ]

ಬೆಳೆ ವೈಫಲ್ಯದಿಂದಾಗಿ ಸಾಲ ತೀರಿಸಲಾಗದೆ ಮನನೊಂದ ರೈತ ರಾಮಚಂದ್ರೇಗೌಡ ನಿನ್ನೆ ಸಂಜೆ ತನ್ನ ಜಮೀನಿನಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಇವರನ್ನ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ರಾಮಚಂದ್ರೇಗೌಡ ಸಾವನ್ನಪ್ಪಿದ್ದಾರೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications