ಬೆಂಗಳೂರಿನಲ್ಲಿ ಕೊವಿಡ್-19 ಲಸಿಕೆ ಮರೆತು ಐಸಿಯು ಸೇರಿದವರು ಶೇ.78ರಷ್ಟು ಜನ!?

ಬೆಂಗಳೂರು, ಅಕ್ಟೋಬರ್ 1: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಆಘಾತಕಾರಿ ಅಂಕಿ-ಅಂಶವೊಂದನ್ನು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹೊರ ಹಾಕಿದೆ.

ಕಳೆದ 14 ದಿನಗಳಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿರುವ ಕೊರೊನಾ ಸಂಬಂಧಿತ ರೋಗಿಗಳ ಪೈಕಿ ಕೊರೊನಾವೈರಸ್ ಲಸಿಕೆಯನ್ನೇ ಹಾಕಿಸಿಕೊಳ್ಳದವರು ಅಥವಾ ಒಂದು ಡೋಸ್ ಮಾತ್ರ ಹಾಕಿಸಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಹೆಚ್ಚು ಅವಲಂಬಿತ ಘಟಕ(High Dependency Units)ಗಳಲ್ಲಿ ಶೇ.75ರಷ್ಟು ಜನರು ಮತ್ತು ತುರ್ತು ನಿಗಾ ಘಟಕ(Intensive Care Units)ಗಳಲ್ಲಿ ಇರುವ ರೋಗಿಗಳ ಪೈಕಿ ಶೇ.78.5ರಷ್ಟು ಮಂದಿ ಲಸಿಕೆಯ ಬಗ್ಗೆ ತಾತ್ಸಾರ ಮಾಡಿದವರೇ ಇದ್ದಾರೆ ಎಂದು ವರದಿ ಹೇಳಿದೆ.

ಹೆಚ್ಚು ಅವಲಂಬಿತ ಘಟಕದಲ್ಲಿ ದಾಖಲಾದ ಒಟ್ಟು 57 ಜನರ ಪೈಕಿ 43 ಜನರು ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳವರು ಅಥವಾ ಒಂದು ಡೋಸ್ ಲಸಿಕೆ ಪಡೆದುಕೊಂಡವರೇ ಆಗಿದ್ದಾರೆ. ಅದೇ ರೀತಿ ತುರ್ತು ನಿಗಾ ಘಟಕದಲ್ಲಿ ದಾಖಲಾದ 51 ರೋಗಿಗಳಲ್ಲಿ 40 ಜನರು ಲಸಿಕೆ ಪಡೆದುಕೊಳ್ಳದ ಅಥವಾ ಭಾಗಶಃ ಲಸಿಕೆ ಪಡೆದುಕೊಂಡವರು ಆಗಿದ್ದಾರೆ.

ಕೊವಿಡ್-19 ಲಸಿಕೆ ಹಾಕಿಸಿಕೊಳ್ಳದವರಿಗೆ ಅಪಾಯ

ಕೊವಿಡ್-19 ಲಸಿಕೆ ಹಾಕಿಸಿಕೊಳ್ಳದವರಿಗೆ ಅಪಾಯ

ಸಿಲಿಕಾನ್ ಸಿಟಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಅಂಕಿ-ಅಂಶಗಳನ್ನು ನೋಡುತ್ತಿದ್ದರೆ ಕೊರೊನಾವೈರಸ್ ಲಸಿಕೆಯನ್ನು ಹಾಕಿಸಿಕೊಳ್ಳದವರು ತೀವ್ರ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

"ನಾವು ನೀಡುತ್ತಿರುವ ಸಂದೇಶ ಬಹಳ ನೇರ ಹಾಗೂ ಸ್ಪಷ್ಟವಾಗಿದೆ. ಸೋಂಕು ತೀವ್ರ ಹಂತಕ್ಕೆ ತಲುಪುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳುವುದು ತೀರಾ ಅಗತ್ಯವಾಗಿದೆ. ನಗರದ ಎಲ್ಲ ಅರ್ಹ ಫಲಾನುಭವಿಗಳಿಗೂ ಕೊವಿಡ್-19 ಲಸಿಕೆ ನೀಡುವ ಆಲೋಚನೆಯನ್ನು ಹೊಂದಿದ್ದು, ನಾವು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಇನ್ನೂ ಲಸಿಕೆ ಹಾಕಿಸದವರು ತಮ್ಮ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಹೇಳಲಾಗುತ್ತದೆ. ಕೊಳಚೆ ಪ್ರದೇಶಗಳಲ್ಲಿ ಲಸಿಕೆ ಪಡೆದುಕೊಳ್ಳದ ಎಲ್ಲ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡುವ ಉದ್ದೇಶದಿಂದ ಮನೆ ಮನೆಗೆ ತೆರಳಿ ಲಸಿಕೆ ವಿತರಣೆ ಮಾಡುತ್ತಿದ್ದೇವೆ," ಎಂದು ಬಿಬಿಎಂಪಿ ಆರೋಗ್ಯ ವಲಯದ ವಿಶೇಷ ಆಯುಕ್ತ ರಣದೀಪ್ ಡಿ ತಿಳಿಸಿದ್ದಾರೆ.

ಕೊವಿಡ್-19 ಎರಡೂ ಡೋಸ್ ಲಸಿಕೆ ಪಡೆದವರಿಗೂ ಅನಾರೋಗ್ಯ

ಕೊವಿಡ್-19 ಎರಡೂ ಡೋಸ್ ಲಸಿಕೆ ಪಡೆದವರಿಗೂ ಅನಾರೋಗ್ಯ

ಬೆಂಗಳೂರು ಆಸ್ಪತ್ರೆಯ HDU ಮತ್ತು ICU ಗಳಲ್ಲಿ ದಾಖಲಾಗಿರುವ ರೋಗಿಗಳ ಪೈಕಿ ಬಹುಪಾಲು ಜನರು ಕೊವಿಡ್-19 ಲಸಿಕೆ ಪಡೆದುಕೊಳ್ಳದವರು ಅಥವಾ ಒಂದು ಡೋಸ್ ಲಸಿಕೆ ಪಡೆದುಕೊಂಡವರೇ ಆಗಿದ್ದಾರೆ. ಇಂಥವರ ಮಧ್ಯೆ ಎರಡೂ ಡೋಸ್ ಲಸಿಕೆ ಪಡೆದುಕೊಂಡವರೂ ಕೂಡ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ICU ಗಳಲ್ಲಿ ದಾಖಲಾದ 11 ಮಂದಿ ಅಂದರೆ ಒಟ್ಟು ಸಂಖ್ಯೆಯ ಶೇ.21.5ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದವರೇ ಆಗಿದ್ದಾರೆ. ಅದರಂತೆ HDU ನಲ್ಲಿ ದಾಖಲಾದ 57 ರೋಗಿಗಳ ಪೈಕಿ 14 ಮಂದಿ ಅಂದರೆ ಶೇ.25ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಎರಡೂ ಡೋಸ್ ಕೊವಿಡ್-19 ಲಸಿಕೆ ಪಡೆಯಲು ಸೂಚನೆ

ಎರಡೂ ಡೋಸ್ ಕೊವಿಡ್-19 ಲಸಿಕೆ ಪಡೆಯಲು ಸೂಚನೆ

ಕೊರೊನಾವೈರಸ್ ಸೋಂಕಿನ ತೀವ್ರತೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಎರಡೂ ಡೋಸ್ ಲಸಿಕೆ ಪಡೆದುಕೊಂಡವರ ಪ್ರಮಾಣದಲ್ಲಿ ಬಹುಪಾಲು ಕಡಿಮೆ ಇರುವುದನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಗಮನಿಸಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ವಿಳಂಬ ತೋರದೇ ಸೂಕ್ತ ಕಾಲದಲ್ಲಿ ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಎರಡು ಡೋಸ್ ಲಸಿಕೆ ಪಡೆದವರ ಬಗ್ಗೆ ತೀವ್ರ ಲಕ್ಷ್ಯ

ಎರಡು ಡೋಸ್ ಲಸಿಕೆ ಪಡೆದವರ ಬಗ್ಗೆ ತೀವ್ರ ಲಕ್ಷ್ಯ

"ಮೊದಲಿಗೆ ನಾವು ಕೊರೊನಾವೈರಸ್ ಲಸಿಕೆಯ ಎರಡೂ ಡೋಸ್ ಪಡೆದ ನಂತರವೂ ತುರ್ತು ನಿಗಾ ಘಟಕಗಳಲ್ಲಿ ದಾಖಲಾದ ಪ್ರಕರಣಗಳನ್ನು ಲೆಕ್ಕ ಹಾಕಬೇಕಾಗುತ್ತದೆ. ಜಿಲ್ಲೆಯ ಒಟ್ಟು ಸಕ್ರಿಯ ಪ್ರಕರಣಗಳು ಮತ್ತು ಐಸಿಯುನಲ್ಲಿ ದಾಖಲಾದವರ ಸಂಖ್ಯೆಯೊಂದಿಗೆ ತುಲನೆ ಮಾಡಿ ನೋಡಬೇಕಾಗುತ್ತದೆ. ಈ ಹಂತದಲ್ಲಿ ಲಸಿಕೆ ಪಡೆದ ನಂತರವೂ ಐಸಿಯುಗಳಲ್ಲಿ ದಾಖಲಾದವರ ಸಂಖ್ಯೆಯು ಶೇ.1ಕ್ಕಿಂತ ಕಡಿಮೆಯಾಗಿರುವುದು ಗೊತ್ತಾಗುತ್ತದೆ," ಎಂದು ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ (ಸಿಸಿಎಸ್‌ಟಿ) ಸದಸ್ಯ ಮತ್ತು ವೈಜ್ಞಾನಿಕ ಮಂಡಳಿ ಮುಖ್ಯಸ್ಥ ಮತ್ತು ಮಣಿಪಾಲ್ ಆಸ್ಪತ್ರೆಗಳ ಜೆರಿಯಾಟ್ರಿಕ್ ಮೆಡಿಸಿನ್‌ನ ಅಧ್ಯಕ್ಷರಾದ ಡಾ.ಅನೂಪ್ ಅಮರನಾಥ್ ಹೇಳಿದ್ದಾರೆ.

"ಎರಡನೇಯದಾಗಿ ಕೊವಿಡ್-19 ಲಸಿಕೆಯ ಎರಡೂ ಡೋಸ್ ಲಸಿಕೆ ಪಡೆದ ನಂತರವೂ ಐಸಿಯುಗಳಲ್ಲಿ ದಾಖಲಾದ ರೋಗಿಗಳು ಸಾಮಾನ್ಯವಾಗಿ ಬಹು ಅಥವಾ ಇತರೆ ರೋಗಗಳಿಂದ ಬಳಲುತ್ತಿರುವ ಸಾಧ್ಯತೆಗಳಿರುತ್ತವೆ. ಮೂರನೇಯದಾಗಿ ಆಸ್ಪತ್ರೆಯ ಐಸಿಯುಗೆ ದಾಖಲಾದ ದಿನಾಂಕ ಹಾಗೂ ಕೊರೊನಾವೈರಸ್ ಲಸಿಕೆಯ ಎರಡನೇ ಡೋಸ್ ಪಡೆದ ದಿನಾಂಕದ ನಡುವಿನ ಅಂತರವನ್ನು ಗಮನಿಸಬೇಕಾಗುತ್ತದೆ. ಏಕೆಂದರೆ ಎರಡೂ ಡೋಸ್ ಲಸಿಕೆ ಪಡೆದ 2 ರಿಂದ 3 ವಾರಗಳ ನಂತರದಲ್ಲಿ ಪ್ರತಿಕಾಯ ಶಕ್ತಿ ಗರಿಷ್ಠ ಮಟ್ಟದಲ್ಲಿ ಇರುತ್ತದೆ," ಎಂದು ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ (ಸಿಸಿಎಸ್‌ಟಿ) ಸದಸ್ಯ ಮತ್ತು ವೈಜ್ಞಾನಿಕ ಮಂಡಳಿ ಮುಖ್ಯಸ್ಥ ಮತ್ತು ಮಣಿಪಾಲ್ ಆಸ್ಪತ್ರೆಗಳ ಜೆರಿಯಾಟ್ರಿಕ್ ಮೆಡಿಸಿನ್‌ನ ಅಧ್ಯಕ್ಷರಾದ ಡಾ.ಅನೂಪ್ ಅಮರನಾಥ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ಲಸಿಕೆ ಪಡೆದವರು ಐಸಿಯುಗೆ ದಾಖಲಾದ ಪ್ರಮಾಣ ಕಡಿಮೆ

ಲಸಿಕೆ ಪಡೆದವರು ಐಸಿಯುಗೆ ದಾಖಲಾದ ಪ್ರಮಾಣ ಕಡಿಮೆ

"ಕೊರೊನಾವೈರಸ್ ಲಸಿಕೆಯ ಎರಡೂ ಡೋಸ್ ಪಡೆದುಕೊಂಡ ನಂತರದಲ್ಲಿಯೂ ಆಸ್ಪತ್ರೆಯ ತುರ್ತು ನಿಗಾ ಘಟಕಗಳಲ್ಲಿ ದಾಖಲಾದವರ ಸಂಖ್ಯೆ ವಿರಳವಾಗಿದೆ," ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್‌ಎಫ್‌ಐ)ದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ರಾಜ್ಯ ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಸದಸ್ಯ ಡಾ.ಗಿರಿಧರ್ ಬಾಬು ಹೇಳಿದ್ದಾರೆ. "ರಾಜ್ಯದಲ್ಲಿ ಇದುವರೆಗೆ ಕೋಟ್ಯಂತರ ಜನರಿಗೆ ಕೊವಿಡ್-19 ಲಸಿಕೆ ನೀಡಿದ್ದು, ಅದನ್ನು ಹೋಲಿಸಿದರೆ ಎರಡೂ ಡೋಸ್ ಪಡೆದ ಮೇಲೆಯೂ ಐಸಿಯುಗಳಿಗೆ ದಾಖಲಾದವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಲಸಿಕೆಯ ಎರಡು ಡೋಸ್‌ಗಳನ್ನು ಪಡೆಯುವುದರಿಂದ ರೋಗದ ತೀವ್ರತೆ ಕಡಿಮೆ ಆಗುವುದರ ಜೊತೆಗೆ ಸಾವಿನ ಅಪಾಯದಿಂದ ರಕ್ಷಣೆ ಸಿಗುತ್ತದೆ. ಒಂದು ಡೋಸ್ ಮತ್ತು ಎರಡು ಡೋಸ್‌ಗಳನ್ನು ಪಡೆದ ನಂತರ ಬೇರೆ ಸೋಂಕುಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಅವುಗಳಲ್ಲಿ ಹೆಚ್ಚಿನವು ಲಕ್ಷಣ ರಹಿತವಾಗಿರುತ್ತವೆ," ಎಂದು ಡಾ.ಗಿರಿಧರ್ ಬಾಬು ಹೇಳಿದ್ದಾರೆ.

ಕೊವಿಡ್-19 ಎರಡು ಡೋಸ್ ಪಡೆದವರಿಗೆ ಸಾವು ದೂರ

ಕೊವಿಡ್-19 ಎರಡು ಡೋಸ್ ಪಡೆದವರಿಗೆ ಸಾವು ದೂರ

ಕೊರೊನಾವೈರಸ್ ಲಸಿಕೆಯ ಎರಡೂ ಡೋಸ್ ಪಡೆದ ವ್ಯಕ್ತಿಗಳ ವಯಸ್ಸು ಮತ್ತು ಸಹವರ್ತಿಗಳನ್ನು ಹಾಗೂ ಅವರ ಸೋಂಕಿನ ಸಮಯ ಪರಿಶೀಲಿಸುತ್ತಿರುವುದಾಗಿ ಬಿಬಿಎಂಪಿ ಆರೋಗ್ಯ ವಲಯದ ವಿಶೇಷ ಆಯುಕ್ತ ರಣದೀಪ್ ಡಿ ತಿಳಿಸಿದ್ದಾರೆ. ಕಾರಣವನ್ನು ಕಂಡುಹಿಡಿಯಲು ನಾವು ಇದನ್ನು ವಿಶ್ಲೇಷಿಸುತ್ತಿದ್ದೇವೆ. ಏಕೆಂದರೆ ಈವರೆಗೂ ಎರಡೂ ಡೋಸ್ ಲಸಿಕೆ ಪಡೆದುಕೊಂಡವರ ಸಾವಿನ ಪ್ರಕರಣಗಳು ವರದಿಯಾಗಿಲ್ಲ," ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+