ಮಹಾರಾಷ್ಟ್ರದಲ್ಲಿ 3 ವರ್ಷದ ಮಗುವಿಗೂ ಅಂಟಿದ ಓಮಿಕ್ರಾನ್ ಸೋಂಕು

ಮುಂಬೈ, ಡಿಸೆಂಬರ್ 10: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಶುಕ್ರವಾರ ಮೂರು ವರ್ಷದ ಮಗುವ ಸೇರಿದಂತೆ ಒಟ್ಟು 7 ಮಂದಿಯಲ್ಲಿ ಓಮಿಕ್ರಾನ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಭಾರತದಲ್ಲಿ ಓಮಿಕ್ರಾನ್ ರೂಪಾಂತರ ಸೋಂಕಿತ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಚ್ಚರಿಕೆ ನೀಡಿದೆ.

"ದೇಶದಲ್ಲಿ ಇಲ್ಲಿಯವರೆಗೆ ಒಟ್ಟಾರೆ 25 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ಪ್ರಕರಣಗಳು ಸೌಮ್ಯ ಲಕ್ಷಣಗಳನ್ನು ಹೊಂದಿವೆ. ಪತ್ತೆಯಾದ ಒಟ್ಟು ರೂಪಾಂತರಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಶೇಕಡಾ 0.04 ಕ್ಕಿಂತ ಕಡಿಮೆಯಿವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಇದರ ನಂತರದಲ್ಲಿ ಮತ್ತು ಇದಕ್ಕೂ ಮೊದಲು ನಡೆದ ಬೆಳವಣಿಗೆಗಳ ಸುತ್ತಲಿನ ಒಂದು ವರದಿ ಇಲ್ಲಿದೆ ಓದಿ.

7 New Omicron Cases Reported Including 3-Year-Old child In Maharashtra on Dec 10: 10 Facts

ಭಾರತದಲ್ಲಿ ಓಮಿಕ್ರಾನ್ ಸುತ್ತಲಿನ ಬೆಳವಣಿಗೆಗಳು:

* ಮಹಾರಾಷ್ಟ್ರದಲ್ಲಿ ಏಳು ಓಮಿಕ್ರಾನ್ ರೂಪಾಂತರ ವೈರಸ್ ಸೋಂಕು ತಗುಲಿರುವ ಹೊಸ ಪ್ರಕರಣಗಳು ದೃಢಪಟ್ಟಿವೆ. ಅವರಲ್ಲಿ ಮೂವರು ಮುಂಬೈ ಮೂಲದವರಾಗಿದ್ದು, ಮೂರು ವರ್ಷದ ಮಗುವಿನಲ್ಲೂ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಇವರಲ್ಲಿ ಹಲವರಿಗೆ ಸೋಂಕಿನ ಲಕ್ಷಣಗಳೇ ಕಂಡು ಬಂದಿರಲಿಲ್ಲ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು ಎಂದು ಗೊತ್ತಾಗಿದೆ.

* ಡಿಸೆಂಬರ್ 1 ರಿಂದ, ಒಟ್ಟು 93 ಅಂತರಾಷ್ಟ್ರೀಯ ಪ್ರಯಾಣಿಕರಿಗೆ COVID-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇವುಗಳಲ್ಲಿ 83 ಒಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳಿಂದ ಬಂದವರೇ ಆಗಿದ್ದಾರೆ, ಉಳಿದ 13 ಮಂದಿ ಇತರ ದೇಶಗಳಿಂದ ಬಂದವರು ಎಂದು ಲಾವ್ ಅಗರ್ವಾಲ್ ಹೇಳಿದ್ದಾರೆ. ಇದುವರೆಗೆ 59 ದೇಶಗಳಲ್ಲಿ ಒಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.

* "ನವೆಂಬರ್ 24 ರವರೆಗೆ ಕೇವಲ 2 ರಾಷ್ಟ್ರಗಳಲ್ಲಿ ಮಾತ್ರ ಓಮಿಕ್ರಾನ್ ರೂಪಾಂತರ ಪ್ರಕರಣಗಳು ವರದಿಯಾಗಿದ್ದು, ಈಗ, 59 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ 59 ದೇಶಗಳಲ್ಲಿ 2,936 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದಲ್ಲದೇ, 78,054 ಸಂಭವನೀಯ ಪ್ರಕರಣಗಳು ಪತ್ತೆಯಾಗಿವೆ. ಅವುಗಳ ಜೀನೋಮ್ ಸೀಕ್ವೆನ್ಸಿಂಗ್ ನಡೆಯುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* ಮಾಸ್ಕ್ ಬಳಕೆ ಮತ್ತು ಸುರಕ್ಷತಾ ಮಾನದಂಡಗಳ ಪಾಲನೆಯು ಕಡಿಮೆ ಆಗುತ್ತಿರುವುದರ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. "ಮಾಸ್ಕ್ ಬಳಕೆಯ ಕುಸಿತದ ವಿರುದ್ಧ WHO ಎಚ್ಚರಿಕೆ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ Omicron ಇಡೀ ಚಿತ್ರಣವನ್ನೇ ಬದಲಿಸುತ್ತಿದ್ದು, ತೀವ್ರ ತೊಂದರೆ ಉಂಟಾಗುತ್ತಿದೆ. ನಾವು ಈಗ ಅಪಾಯಕಾರಿ ಮತ್ತು ಸ್ವೀಕರಿಸಲು ಸಾಧ್ಯವಾಗದ ಮಟ್ಟದಲ್ಲಿದ್ದೇವೆ. ಕೊವಿಡ್-19 ಲಸಿಕೆ ಮತ್ತು ಮುಖವಾಡಗಳು ಎರಡೂ ಮುಖ್ಯವೆಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಆರೋಗ್ಯಕ್ಕಾಗಿ NITI ಆಯೋಗದ ಸದಸ್ಯ ಡಾ ವಿಕೆ ಪಾಲ್ ಹೇಳಿದ್ದಾರೆ.

* ಒಮಿಕ್ರಾನ್ ರೂಪಾಂತರದ ಚಿಕಿತ್ಸೆಯ ಪ್ರೋಟೋಕಾಲ್ ಒಂದೇ ಆಗಿರುತ್ತದೆ. ಲಸಿಕೆ ಬೂಸ್ಟರ್‌ಗಳನ್ನು ಅಧಿಕೃತಗೊಳಿಸುವ ಯಾವುದೇ ತಕ್ಷಣದ ಯೋಜನೆ ಇಲ್ಲ ಎಂದು ಸರ್ಕಾರ ಹೇಳಿದೆ. Omicron ಇನ್ನೂ ಆರೋಗ್ಯ ವ್ಯವಸ್ಥೆಯ ಮೇಲೆ ಹೊರೆಯಾಗಿಲ್ಲವಾದರೂ, ಕಟ್ಟುನಿಟ್ಟಾದ ಜಾಗರೂಕತೆಯನ್ನು ನಿರ್ವಹಿಸಬೇಕಾಗಿದೆ ಎಂದು ಹೇಳಿದೆ.

* ಸರ್ಕಾರಿ ತಜ್ಞರು ಬೂಸ್ಟರ್‌ಗಳ ಕುರಿತು ಡೇಟಾವನ್ನು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಅರ್ಹ ಫಲಾನುಭವಿಗಳಿಗೆ ಮೊದಲು ಎರಡೂ ಡೋಸ್ ಲಸಿಕೆಯನ್ನು ನೀಡುವುದೇ ನಮ್ಮ ಮೊದಲ ಆದ್ಯತೆ ಆಗಿರುತ್ತದೆ," ಎಂದು ಡಾ ಪಾಲ್ ಹೇಳಿದರು.

* ಭಾರತದ ದೈನಂದಿನ ಹೊಸ COVID-19 ಪ್ರಕರಣಗಳು ಕಳೆದ ಕೆಲವು ವಾರಗಳಿಂದ 10,000 ರಷ್ಟಿದ್ದು, ಒಟ್ಟು 34.67 ಮಿಲಿಯನ್‌ಗೆ ತಲುಪಿದೆ, ಅವರಲ್ಲಿ 474,000ಕ್ಕೂ ಹೆಚ್ಚು ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

* ಡಿ. 2ರಂದು ಭಾರತದ ಮೊದಲ ಎರಡು ಪ್ರಕರಣಗಳು ವರದಿಯಾದ ನಂತರ Omicron ಐದು ರಾಜ್ಯಗಳಿಗೆ ಹರಡಿದ್ದರೂ, ಹೆಚ್ಚಿನವರು ಡೆಲ್ಟಾ ರೂಪಾಂತರಕ್ಕಿಂತ ಸ್ಥಿಮಿತವಾಗಿದೆ. "ಎಲ್ಲಾ ಪತ್ತೆಯಾದ ಪ್ರಕರಣಗಳು ಸೌಮ್ಯ ಲಕ್ಷಣಗಳನ್ನು ಹೊಂದಿವೆ" ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

* ಕೊವಿಡ್-19 ಸಕ್ರಿಯ ಪ್ರಕರಣಗಳು ಎರಡು ರಾಜ್ಯಗಳಲ್ಲಿ ಅತಿ ಹೆಚ್ಚಾಗಿವೆ. ಕೇರಳ ಶೇಕಡಾ 43ರಷ್ಟು ಮತ್ತು ಮಹಾರಾಷ್ಟ್ರದಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ ಎಂದು ಲವ್ ಅಗರ್ವಾಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+