ಕೊರತೆಗಳ ಒರತೆ, ಸತ್ಯಮೇವ ಜಯತೆ!

ಸಮ್ಮೇಳನ ತಾಣದ ಸುತ್ತಮುತ್ತ ಮತ್ತು ಊರೆಲ್ಲ ಅಡ್ಡಾಡಿ ಜನಾಭಿಪ್ರಾಯ ಸಂಗ್ರಹಣೆ ಮಾಡುತ್ತಿರುವ ನಮ್ಮ ವರದಿಗಾರರ ಕಿವಿಗೆ ಬಿದ್ದ ಅಳಲುಗಳು ಇಂಥವು ಇನ್ನೆಷ್ಟೊ. ಮಂಗಳೂರಿನ ರಮಾನಾಥ ಶೆಣೈ ಇರಲು ಜಾಗವಿಲ್ಲದೆ ಪರದಾಡುತ್ತಿದ್ದರು. ಅಯ್ಯೋ ಅದಕ್ಕೇನಂತೆ ದಟ್ಸ್ ಕನ್ನಡ ಕಚೇರಿಯಲ್ಲೇ ಬಂದು ಮಲಗಿರಿ ಎಂದು ಕರೆದರೆ ಅಯ್ಯೋ ಪೇಪರ್ ರಿಪೋರ್ಟರ್ಸ್ ಜೊತೆಗೆ ಬೇಡ ಸಾರ್, ನೀವು ತುಂಬಾ ಬಿಜಿ ಎಂದು ಹೇಳಿ ಶೆಣೈ ಕಿರ್ಲೋಸ್ಕರ್ ರೋಡಲ್ಲಿ ಮರೆಯಾದರು.
* ಬೆಳಗಾವಿಯ ಸಮ್ಮೇಳನದ ಭೋಜನ ಶಾಲೆಯಿಂದ ಆಹಾರ ಪೂರೈಕೆಯಾಗುವುದು ಶುಕ್ರವಾರ ಬೆಳಿಗ್ಗೆಯಿಂದ ಮಾತ್ರ. ಅಲ್ಲಿಯವರೆಗೆ ನಿಮ್ಮ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಬೇಕು. ಬೆಳಗಾವಿಯಲ್ಲಿ ಹೊಟೇಲಿನಲ್ಲಿ ಕೊರತೆಯೇನಿಲ್ಲ. ಬೇಕಾದಷ್ಟು ಖಾನಾವಳಿಗಳಿವೆ. ನಮ್ಮ ಸಲಹೆ ಬಸ್ ಸ್ಟ್ಯಾಂಡ್ ಸಮೀಪ ಇರುವ ಸಾಯಿ ಲಂಚ್ ಹೋಂ. ಜೋಳದ ರೊಟ್ಟಿ ಕಾಯಿಪಲ್ಲೆ ಅನ್ನ ಸಾರು ಮೊಸರು ಮತ್ತು ಈರುಳ್ಳಿ. ಅಯ್ಯೋ, ಈ ಪುಳಿಚಾರ್ ಯಾರಿಗಪ್ಪ ಅನ್ನುವವರಿಗೆ ಬಸ್ ಸ್ಟ್ಯಾಂಡ್ ಹತ್ತಿರವಿರುವ ಹೊಟೇಲಿ ನಿಯಾಜ್ ನಿಮಗಾಗಿ ಕಾಯುತ್ತಿದೆ. ಬಿರಿಯಾನಿ, ಖೀಮಾ ಮತ್ತು ಎಗ್ ಬುರ್ಜಿ ಎರಡು ಪ್ಲೇಟ್ ಆರ್ಡರ್ ಮಾಡಿ. ಏನೂ ದಕ್ಕದಿದ್ದರೆ ರಸ್ತೆಯಲ್ಲಿ ಕಡ್ಲೆಕಾಯಿ ಬೀಜ, ಮಸಾಲಾ ಬಟಾಣಿ ಸಿಗೋದು ಗ್ಯಾರಂಟಿ. ಎಲ್ಲಿ ಅಂತೀರಾ? ಆದಿತ್ಯಾ ಆರ್ಕೇಡ್ ಕಾಂಪೌಂಡ್, ಅಪೋಸಿಟ್ ಟು ಹೊಟೇಲ್ ಹನುಮಾನ್!
ನಾನ್ ವೆಜ್ ಆಹಾರ ಮತ್ತು ವಸತಿ ಎರಡೂ ಒಂದೇ ಕಡೆ ದೊರೆಯುವ ಜಾಗ ಕೊಲ್ಹಾಪೂರ್ ಸರ್ಕಲ್ ಸಮೀಪವಿರುವ ಹೊಟೇಲ್ ರಾಮದೇವ್. ಇಲ್ಲಿ ನಿಮಗೆ ಏನು ಬೇಕೋ ಅದೆಲ್ಲ ಲಭ್ಯ. ಟ್ರೈ ಮಾಡಿ ಗುಡ್ ಲಕ್. ಜೈ ಕನ್ನಡಾಂಬೆ.
ಬೈ ದಿ ವೇ, ನಮ್ಮ ಸುದ್ದಿ ಸಂಪಾದಕರು ಅಡುಗೆ ಶಾಲೆಗೆ ಹೋಗಿ ಬಂದಿದ್ದರು. ಅಲ್ಲಿ ಮೂರು ಮೂರು ಹೊತ್ತು ಆಹಾರ ಪೂರೈಕೆಗೆ ಭರ್ಜರಿ ವ್ಯವಸ್ಥೆಗಳು ನಡೆಯುತ್ತಿವೆ. ಸಚಿವ ಉಮೇಶ್ ಕತ್ತಿ ಕೆಎಲ್ಇ ಸರದಾರ ಪ್ರಭಾಕರ್ ಕೋರೆ ಅವರ ಸುಪರ್ದಿನಲ್ಲಿ ಮೇಜವಾನಿಗೆ ಏನೂ ಕೊರತೆಯಿಲ್ಲ. ಶುಕ್ರವಾರ ಬೆಳಿಗ್ಗೆಯಿಂದ ಭಾನುವಾರ ರಾತ್ರಿಯವರೆಗೆ ಒಟ್ಟು 7 ಭೋಜನ ಶಾಲೆಗಳಲ್ಲಿ ಏರ್ಪಡಿಸಲಾಗಿರುವ ಸಮಾರಾಧನೆಯಲ್ಲಿ ಊಟ, ತಿಂಡಿ ಏನೇನಿದೆ? ಗಡಿಬಿಡಿ ಮಾಡಬೇಡಿ ಸ್ವಲ್ಪ ತಾಳಿ.












Click it and Unblock the Notifications