ಎಲ್ಲ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನವಿರಲಿ

40 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಕನ್ನಡಾಭಿಮಾನಿಗಳು ಸಾಹಿತ್ಯ ಜಾತ್ರೆಗೆ ಬರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲ ಚಲನಚಿತ್ರ ಮಂದಿರಗಳಲ್ಲಿ ಮೂರು ದಿನಗಳ ಕಾಲ ಕನ್ನಡ ಚಿತ್ರಗಳನ್ನೇ ಪ್ರದರ್ಶನ ಮಾಡುವಂತೆ ಅವರು ಆಗ್ರಹಿಸಿದರು.
ಚಿತ್ರಪ್ರದರ್ಶಕರು, ವಿತರಕರು ಹಾಗೂ ಚಲನಚಿತ್ರ ಮಂದಿರಗಳ ಮಾಲಿಕರು ಸಮ್ಮೇಳನದ ನಡೆಯುವ ಸಂದರ್ಭದಲ್ಲಿ ಕನ್ನಡ ಚಿತ್ರ ಪ್ರದರ್ಶಿಸಿ ಕನ್ನಡ ಪ್ರೇಮ ಮೆರೆಯಬೇಕು ಎಂದು ಅವರು ಕರೆ ನೀಡಿದರು. ಈ ಸಂಬಂಧ ಎಲ್ಲ ಚಿತ್ರ ಮಂದಿರ ಮಾಲಿಕರುಗಳಿಗೂ ಪತ್ರ ಬರೆಯುವುದಾಗಿ ಅವರು ಹೇಳಿದರು.
ಈ ನಡುವೆ, ಸಮ್ಮೇಳನದ ಪ್ರಯುಕ್ತ ಫೆ.4 ಶುಕ್ರವಾರದಂದು ಚಿತ್ರ ಪ್ರದರ್ಶನಗಳನ್ನು ಹೊರತುಪಡಿಸಿ ಎಲ್ಲ ಚಲನಚಿತ್ರ ಚಟುವಟಿಕೆಗಳಿಗೆ ರಜಾ ನೀಡಲು ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಸಮ್ಮೇಳನದ ಮೊದಲ ದಿನ ನಡೆಯುವ ಮೆರವಣಿಗೆಯಲ್ಲಿ ಚಿತ್ರರಂಗದ ಅನೇಕ ತಾರಾಮಣಿಗಳು ಭಾಗವಹಿಸುತ್ತಿದ್ದಾರೆ.












Click it and Unblock the Notifications