ವಾರಾಣಸಿ ದೇವಸ್ಥಾನದಲ್ಲಿ ಲೇಡೀಸ್ ಜೊತೆ ಪೊಲೀಸ್ ಡ್ಯಾನ್ಸ್; ಅಸಲಿಗೆ ಏನಾಗಿದ್ದು ಗೊತ್ತಾ?
ವಾರಾಣಸಿಯ ಲಾಟ್ ಭೈರವ್ ದೇವಸ್ಥಾನ ಆವರಣದಲ್ಲಿ ಇಬ್ಬರು ಮಹಿಳೆಯರು ನೃತ್ಯ ಮಾಡುತ್ತಿರುವಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ನೃತ್ಯವನ್ನು ವೀಕ್ಷಿಸುತ್ತಿದ್ದಾರೆ ಅಥವಾ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರ ಕರ್ತವ್ಯದ ಬಗ್ಗೆ ಕೂಡ ನೆಟ್ಟಿಗರು ಪ್ರಶ್ನೆ ಎತ್ತಿದ್ದರು. ಆದರೆ ವಾರಾಣಸಿ ಪೊಲೀಸರು ವೈರಲ್ ವಿಡಿಯೋವನ್ನು AI ಮೂಲಕ ಸೃಷ್ಟಿಸಲಾಗಿದ್ದು, ಪೊಲೀಸರ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಹರಡಲಾಗಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Video Published On: Wednesday, Sep 30, 2026, 15:21 [IST]


Click it and Unblock the Notifications
