ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀಗೆ ರೈಲಿನಲ್ಲಿ ಕಿರಿಕಿರಿ ಆಗಿದ್ಯಾಕೆ? ಕಹಿ ಅನುಭವವನ್ನು ಶೇರ್ ಮಾಡಿದ ಶಿವಶ್ರೀ
ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಖ್ಯಾತ ಗಾಯಕಿ ಹಾಗೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ರೈಲು ಪ್ರಯಾಣದ ಅನುಭವವನ್ನು ಹಂಚಿಕೊಂಡಿರುವ ಅವರು, 56 ಆಸನಗಳಿದ್ದ ಕೋಚ್ನಲ್ಲಿ ಸುಮಾರು 40 ಮಂದಿ ಮಧ್ಯವಯಸ್ಕ ಪುರುಷರ ಗುಂಪು ಐದು ಗಂಟೆಗಳ ಕಾಲ ನಿರಂತರವಾಗಿ ಗದ್ದಲ ಮಾಡಿದೆ ಎಂದು ಹೇಳಿದ್ದಾರೆ. ಜೋರಾಗಿ ಮಾತನಾಡುವುದು, ನಗುವುದು, UNO ಆಟವಾಡುವುದು ಹಾಗೂ ಹಾಡುಗಳನ್ನು ಹಾಡುವುದರಿಂದ ಪ್ರಯಾಣದ ವೇಳೆ ತಮಗೆ ತೊಂದರೆಯಾಯಿತು ಎಂದು ಶಿವಶ್ರೀ ಆರೋಪಿಸಿದ್ದಾರೆ.
Video Published On: Friday, Sep 25, 2026, 11:57 [IST]


Click it and Unblock the Notifications
