ಲಾಲ್ಬಾಗ್ಚಾ ರಾಜನ ದರ್ಶನ ಪಡೆದ SRK | ಪತ್ನಿ-ಮಗಳ ಜೊತೆ ಮಹಾ ಆರತಿಯಲ್ಲಿ ಭಾಗಿ
ಬಾಲಿವುಡ್ ನಟ ಶಾರುಖ್ ಖಾನ್ ಗಣೇಶೋತ್ಸವದ ಸಂಭ್ರಮದಲ್ಲಿದ್ದು, ಮುಂಬೈನ ಪ್ರಸಿದ್ಧ ಲಾಲ್ಬಾಗ್ಚಾ ರಾಜನ ಪಂಡಾಲ್ಗೆ ಭೇಟಿ ನೀಡಿ ಗಣಪತಿಯ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಅವರೊಂದಿಗೆ ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಹಾಗೂ ಸುದೀರ್ಘ ಕಾಲದಿಂದ ಅವರ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೂಜಾ ದದ್ಲಾನಿ ಸಾಥ್ ನೀಡಿದ್ದರು.ನೀಲಿ ಬಣ್ಣದ ಕುರ್ತಾ ಧರಿಸಿದ್ದ ಶಾರುಖ್ ಖಾನ್, ಭಾರೀ ಜನಸ್ತೋಮದ ನಡುವೆ ಕುಟುಂಬ ಸಮೇತರಾಗಿ ತೆರಳಿ ಸಂಜೆಯ ಮಹಾ ಆರತಿಯಲ್ಲಿ ಭಾಗಿಯಾದರು. ಶಾರುಖ್ ಭೇಟಿಯ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿವೆ.
Video Published On: Tuesday, Sep 22, 2026, 16:39 [IST]


Click it and Unblock the Notifications
