Vande Bharat; ಬೆಳಗಾವಿಗೆ ವಂದೇ ಭಾರತ್ ವಿಳಂಬ ಏಕೆ, ಇಲಾಖೆ ಮಾಹಿತಿ

ಬೆಳಗಾವಿ, ಜನವರಿ 18: ಭಾರತೀಯ ರೈಲ್ವೆ ಜನಪ್ರತಿನಿಧಿಗಳ, ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ಕೊಟ್ಟಿದೆ. ಪ್ರಾಯೋಗಿಕ ಸಂಚಾರವೂ ಮುಗಿದಿದೆ. ಆದರೆ ರೈಲು ಓಡುತ್ತಿಲ್ಲ.

ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವೆ ಸಂಚಾರ ನಡೆಸುವ ರೈಲು ನಂಬರ್ 20661/ 20662 ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬುದು ಬೇಡಿಕೆ. ಇದಕ್ಕೆ ಇಲಾಖೆ ಒಪ್ಪಿಗೆ ನೀಡಿ 2023ರ ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿ ನಡೆಯಿತು.

Why Bengaluru Belagavi Vande Bharat Train Delayed

ಆದರೆ ವಂದೇ ಭಾರತ್ ರೈಲು ಬೆಂಗಳೂರು-ಬೆಳಗಾವಿ ನಡುವೆ ಸಂಚಾರ ಆರಂಭಿಸಿಲ್ಲ. ರೈಲು ಸಂಚಾರ ಆರಂಭಿಸಲು ಇರುವ ತಾಂತ್ರಿಕ ತೊಡಕುಗಳು ಏನು? ಎಂದು ಮಾಹಿತಿ ಹಕ್ಕು ಮೂಲಕ ಪ್ರಶ್ನಿಸಲಾಗಿತ್ತು. ಇಲಾಖೆ ಇದಕ್ಕೆ ಉತ್ತರ ನೀಡಿದೆ.

ಆರ್‌ಟಿಇ ಅರ್ಜಿ; ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಆರ್‌ಟಿಐ ಮೂಲಕ ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಇರುವ ತಾಂತ್ರಿಕ ಸಮಸ್ಯೆ ಏನು? ಎಂದು ಕೇಳಿದರು. ಇದಕ್ಕೆ ರೈಲ್ವೆ ಇಲಾಖೆ ಉತ್ತರ ನೀಡಿದೆ. ಶೀಘ್ರದಲ್ಲೇ ರೈಲು ಸಂಚಾರ ಆರಂಭಿಸುವ ದಿನಾಂಕವನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.

ಬೆಂಗಳೂರು-ಬೆಳಗಾವಿ ನಡುವಿನ ಪ್ರಾಯೋಗಿಕ ಸಂಚಾರದ ವೇಳೆ ರೈಲಿನ ನಿರ್ವಹಣೆ ಪ್ರಮುಖವಾಗಿ ರೈಲಿಗೆ ನೀರು ತುಂಬಿಸುವ ವ್ಯವಸ್ಥೆ ಪ್ಲಾಟ್‌ ಫಾರಂನಲ್ಲಿ ಲಭ್ಯವಿಲ್ಲದಿರುವುದನ್ನು ಗಮನಿಸಲಾಗಿದೆ.

ಎರಡನೇಯದಾಗಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಓವರ್ ಹೆಡ್ ಎಕ್ವಿಪ್ಮೆಂಟ್ (ಒಹೆಚ್ಇ) ಸಂಪರ್ಕ ಹೊಂದಿರುವ ಪಿಟ್ ಲೈನ್ ಇಲ್ಲ ಎಂಬುದನ್ನು ಗಮನಿಸಲಾಗಿದೆ ಎಂದು ರೈಲ್ವೆ ಇಲಾಖೆ ಉತ್ತರದಲ್ಲಿ ವಿವರಣೆ ನೀಡಿದೆ.

ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಈ ಎರಡು ಕಾರಣಗಳೇ ಅಡಚಣೆ ಆಗಿದೆ. ವಂದೇ ಭಾರತ್ ರೈಲು ಒಂದು ಟ್ರಿಪ್ ಪೂರ್ಣಗೊಳಿಸಿದ ಬಳಿ ನಿರ್ವಹಣೆ ಮಾಡಬೇಕಿದೆ. ಈ ನಿರ್ವಹಣೆಯಲ್ಲಿ ಎಲೆಕ್ಟ್ರಿಕಲ್, ಸ್ವಚ್ಛತೆ ಮುಂತಾದ ಅಂಶಗಳು ಸೇರಿವೆ.

ಬೆಳಗಾವಿ ನಿಲ್ದಾಣದಲ್ಲಿ ಈ ನಿರ್ವಹಣೆ ಮಾಡುವ ವ್ಯವಸ್ಥೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಇಲಾಖೆ ದಿನಾಂಕವನ್ನು ನಿಗದಿಗೊಳಿಸಿಲ್ಲ. ಬೆಂಗಳೂರಿನಿಂದ ಹೊರಡುವ ರೈಲು ಧಾರವಾಡ ತನಕ ಮಾತ್ರ ಸಂಚಾರ ನಡೆಸುತ್ತಿದೆ.

ಸದ್ಯದ ಮಾಹಿತಿ ಪ್ರಕಾರ ವಂದೇ ಭಾರತ್ ರೈಲು ಕೆಎಸ್ಆರ್‌ ಬೆಂಗಳೂರು ರೈಲು ನಿಲ್ದಾಣ (ಮೆಜೆಸ್ಟಿಕ್) ನಿಂದ ರೈಲು ಸಂಖ್ಯೆ 20661 ಮುಂಜಾನೆ 05.45ಕ್ಕೆ ಹೊರಟು ಮಧ್ಯಾಹ್ನ 01.30ಕ್ಕೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 20662 ಮಧ್ಯಾಹ್ನ 2ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 10.10ಕ್ಕೆ ಬೆಂಗಳೂರು ನಗರ ನಿಲ್ದಾಣ ತಲುಪಲಿದೆ ಎಂದು ವೇಳಾಪಟ್ಟಿ ತಯಾರು ಮಾಡಲಾಗಿದೆ. ಆದರೆ ರೈಲು ಸಂಚಾರ ಯಾವಾಗ ಎಂಬ ಮಾಹಿತಿಯನ್ನು ಇಲಾಖೆ ನೀಡಿಲ್ಲ.

ಜನಪ್ರತಿನಿಧಿಗಳ, ಪ್ರಯಾಣಿಕರ ಬೇಡಿಕೆಯಂತೆ ಭಾರತೀಯ ರೈಲ್ವೆ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿತ್ತು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರೈಲನ್ನು ಬೆಳಗಾವಿಗೆ ವಿಸ್ತರಣೆ ಮಾಡಲು ಕೋರಿ ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+